ವಾಷಿಂಗ್ಟನ್: ವಿದೇಶಗಳ ವೈರಿಗಳ ಚಲನವಲನ ತಿಳಿಯಲು ಸಾಮಾನ್ಯವಾಗಿ ಗೂಢಚಾರಿಕೆ ಬಳಸುವುದು ವಾಡಿಕೆ. ಭಾರತದಲ್ಲಿ ರಾ, ಅಮೆರಿಕದಲ್ಲಿ ಸಿಐಎ, ಪಾಕಿಸ್ಥಾನದಲ್ಲಿ ಐಎಸ್‌ಐನಂಥ ಸಂಸ್ಥೆಗಳಿವೆ. ಆದರೆ ಅಮೆರಿಕವು ಇಂಥ ರಹಸ್ಯ ಕಾರ್ಯಾಚರಣೆಗಾಗಿ ಬೃಹತ್ ಸೈನ್ಯ ಕಟ್ಟಿಕೊಂಡಿದೆ. ಇದರ ಸುಮಾರು 60 ಸಾವಿರ ಸದಸ್ಯರು ಅಮೆರಿಕ ಸೇರಿದಂತೆ ನಾನಾ ದೇಶಗಳಲ್ಲಿ ರಹಸ್ಯವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂಬ ಅಂಶ ಬಹಿರಂಗವಾಗಿದೆ!
ವಿಶೇಷವೆಂದರೆ ಇದನ್ನು ನೇರವಾಗಿ ಅಮೆರಿಕದ ಪೆಂಟಗಾನ್‌ನಿಂದಲೇ ಸೃಷ್ಟಿಸಲಾಗಿದೆ. 10 ವರ್ಷಗಳಿಂದ ಇದು ಕಾರ್ಯಾಚರಿಸುತ್ತಿದೆ. ಇದರ ಸದಸ್ಯರು ನೈಜ ಹೆಸರಿನಲ್ಲಿ ಕಾರ್ಯಾಚರಿಸುವುದಿಲ್ಲ. ಅಮೆರಿಕದಲ್ಲಿ ಯಾವ್ಯಾವುದೋ ಕಂಪೆನಿ, ಯಾವುದೋ ಹುದ್ದೆಯಲ್ಲಿರುತ್ತಾರೆ. ಜತೆಗೆ ತಮ್ಮ ಸುತ್ತಮುತ್ತಲಿನ ಆಗುಹೋಗುಗಳ ಮೇಲೆ ನಿಗಾ ಇಟ್ಟಿರುತ್ತಾರೆ.
900 ಶತಕೋಟಿ ಡಾಲರ್ ವೆಚ್ಚ: ಅಮೆರಿಕದ ವಾರಪತ್ರಿಕೆ “ನ್ಯೂಸ್‌ವೀಕ್’ ಈ ಬಗ್ಗೆ ತನಿಖಾ ವರದಿ ಮಾಡಿದೆ. ಈ ರಹಸ್ಯ ಸೇನೆಗಾಗಿ ಅಮೆರಿಕ ಪ್ರತೀ ವರ್ಷ 900 ಶತಕೋಟಿ ಡಾಲರ್ ಹಣ ವ್ಯಯಿಸುತ್ತದೆ. ಈ ರಹಸ್ಯ ಸೇನೆಯ ಬಗ್ಗೆ ಅಮೆರಿಕದ ಸಂಸತ್ತು ಕಾಂಗ್ರೆಸ್‌ಗೂ ಗೊತ್ತಿಲ್ಲ. ಇದರ ಗಾತ್ರ ದೊಡ್ಡದಿರುವುದರಿಂದ ಹೆಚ್ಚು ವೆಚ್ಚವಾಗುತ್ತಿದೆ. ಇದು ಅಮೆರಿಕದ ಅಧಿಕೃತ ಸ್ಪೈ ಏಜೆನ್ಸಿ ಸಿಐಎಗಿಂತ 10 ಪಟ್ಟು ದೊಡ್ಡದಿದೆ ಎಂದು ಪತ್ರಿಕೆಯ ವರದಿ ತಿಳಿಸಿದೆ.
ಇದನ್ನೂ ಓದಿ:ಜುಲೈ ಅಂತ್ಯಕ್ಕೆ ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ; 6-8 ತಿಂಗಳಲ್ಲಿ ಮೂರನೇ ಅಲೆ
ಉಗ್ರರು, ದೇಶದ್ರೋಹಿಗಳ ಮೇಲೆ ಕಣ್ಣು: ಈ ಸೇನೆ ಪಾಕಿಸ್ಥಾನದಿಂದ ಹಿಡಿದು ಉತ್ತರ ಕೊರಿಯಾ, ಇರಾನ್ ಸೇರಿದಂತೆ ಅಮೆರಿಕದ ವೈರಿ ದೇಶಗಳಲ್ಲಿ ರಹಸ್ಯ ಹೆಸರಲ್ಲಿ ಕಾರ್ಯಾಚರಿಸುತ್ತಿದೆ. ಇವರ ಪ್ರಮುಖ ಗುರಿ ಉಗ್ರರು, ದೇಶದ್ರೋಹಿಗಳು. ಹಿಂದೊಮ್ಮೆ ರಷ್ಯಾದಲ್ಲಿ ಅಮೆರಿಕ ವಿರೋಧಿ ಕೆಲಸ ಮಾಡುತ್ತಿದ್ದ ಗೂಢಚಾರಿಯೊಬ್ಬನನ್ನು ಹಿಡಿದದ್ದು ಈ ಸೇನೆಯ ನೆರವಿನಿಂದಲೇ. ಈ ಸೇನೆಯಲ್ಲಿ ಇರುವ ಬಹುತೇಕರು ಸೈಬರ್ ತಜ್ಞರಾಗಿದ್ದು, ಅತ್ಯಾಧುನಿಕ ಸಲಕರಣೆಗಳನ್ನು ಹೊಂದಿರುತ್ತಾರೆ.
ಸೇನೆಯಲ್ಲಿ ಯಾರಿರುತ್ತಾರೆ? ನಿವೃತ್ತ ಯೋಧರು, ನಾಗರಿಕರು, ಗುತ್ತಿಗೆದಾರರು ಇದರಲ್ಲಿದ್ದಾರೆ. ವಿಶೇಷವೆಂದರೆ, ಯಾರಿಗಾದರೂ ಇವರ ಮೇಲೆ ಅನು ಮಾನ ಬಂದರೆ ಪಾರಾಗಲು ಕೆಲಸವನ್ನೇ ಬದಲಾಯಿಸಿಕೊಳ್ಳುವ ತರಬೇತಿ ನೀಡಲಾಗಿರುತ್ತದೆ. ಇವರ ಫಿಂಗರ್ ಪ್ರಿಂಟ್ ಗುರುತು ಹಿಡಿಯುವುದು ಕೂಡ ಕಷ್ಟ