Advertisement

ಬೈಹ್ಯಾರಿಸ್‌ ಬೆನ್ನಿಗೆ “ಭಾರತೀಯ ಬ್ರಿಗೇಡ್‌’

12:31 AM Jan 18, 2021 | Team Udayavani |

ವಾಷಿಂಗ್ಟನ್‌: ಇನ್ನೆರಡು ಹಗಲು- ರಾತ್ರಿ ಕಳೆಯುವ ಹೊತ್ತಿಗೆ ಅಮೆರಿಕ ಸಂಯುಕ್ತ ಸಂಸ್ಥಾನವು ಹೊಸ ಅಧ್ಯಕ್ಷ – ಉಪಾಧ್ಯಕ್ಷರನ್ನು ಕಂಡಿರುತ್ತದೆ. ಸಂತಸದ ವಿಚಾರವೆಂದರೆ, “ಬೈಹ್ಯಾರಿಸ್‌’ ಬಳಗದಲ್ಲಿ 20 ಭಾರತೀಯ ಮೂಲದವರು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇವರಲ್ಲಿ 13 ಮಂದಿ ಮಹಿಳೆಯರೇ ಆಗಿರುವುದು ಮತ್ತೂಂದು ವಿಶೇಷ. ಜೋ ಸುತ್ತಲೂ ಇರುವ “ಭಾರತೀಯ ಬ್ರಿಗೇಡ್‌’ ಕುರಿತಾದ ಕಿರುನೋಟ ಇಲ್ಲಿದೆ…

Advertisement

ಶಕ್ತಿಯುತ ಸರ್ಕಲ್‌ನಲ್ಲಿ  17 ಮಂದಿ ! :

ಮೊದಲ ಬಾರಿಗೆ ಭಾರತೀಯ ಮೂಲದ ಆಫ್ರಿಕನ್‌ ಅಮೆರಿಕನ್‌ ಪ್ರಜೆ ಕಮಲಾ ಹ್ಯಾರಿಸ್‌ ಉಪಾಧ್ಯಕ್ಷ ಹುದ್ದೆ ಅಲಂಕರಿಸುತ್ತಿದ್ದಾರೆ. ಇವರಲ್ಲದೆ ಒಟ್ಟು 17 ಮಂದಿ ಭಾರತೀಯ ಮೂಲದವರಿಗೆ ಆಯಕಟ್ಟಿನ ಹುದ್ದೆಗಳನ್ನು ಜೋ ಬೈಡೆನ್‌ ನೀಡಿದ್ದಾರೆ.

ಇಬ್ಬರು ಕರುನಾಡ ಪ್ರತಿಭೆಗಳು :

ಡಾ| ವಿವೇಕ್‌ ಮೂರ್ತಿ :

Advertisement

ಮೈಸೂರು ಮೂಲದ ವೈದ್ಯರಾದ ಇವರನ್ನು ಯುಎಸ್‌ ಸರ್ಜನ್‌ ಜನರಲ್‌ ಹುದ್ದೆಗೆ ನೇಮಿಸಲಾಗಿದೆ. ಒಬಾಮಾ ಆಡಳಿತದಲ್ಲೂ ಇದೇ ಹುದ್ದೆಯನ್ನೇ ನಿರ್ವಹಿಸಿದ್ದ ಇವರಿಗೆ ಕೊರೊನಾ ನಿಗ್ರಹ ಕಾರ್ಯಪಡೆಯನ್ನು ಮುನ್ನಡೆಸುವ ಹೊಣೆ ನೀಡಲಾಗಿದೆ.

ಮಾಲಾ ಅಡಿಗ ;

ಕುಂದಾಪುರ ಮೂಲದ ಮಾಲಾ, 2020ರ ಚುನಾವಣ ಪ್ರಚಾರದ ವೇಳೆ ಬೈಡೆನ್‌ ಜತೆಗಿದ್ದು ಕೆಲಸ ಮಾಡಿದವರು. ಬೈಡೆನ್‌ ಪ್ರತಿಷ್ಠಾನದಲ್ಲಿ “ಸೇನಾ ಕುಟುಂಬಗಳ ಉನ್ನತ ಶಿಕ್ಷಣ’ ವಿಭಾಗದ ನಿರ್ದೇಶಕಿಯಾಗಿ ಶ್ರಮಿಸಿದವರು. ಇವರು ಪ್ರಥಮ ಮಹಿಳೆ ಡಾ| ಜಿಲ್‌ ಬೈಡೆನ್‌ಗೆ ನೀತಿ ನಿರ್ದೇಶಕಿಯಾಗಿ ನೇಮಕಗೊಂಡಿದ್ದಾರೆ.

ಭಾರತೀಯ ಬ್ರಿಗೇಡ್‌ನ‌ಲ್ಲಿ ಮತ್ಯಾರು? :

ನೀರಾ ಟಂಡನ್‌:

ಶ್ವೇತಭವನ ಕಾರ್ಯಾ ಲಯದ ವ್ಯವಸ್ಥಾಪಕಿ ಮತ್ತು ಬಜೆಟ್‌ ವಿಭಾಗ ನಿರ್ದೇಶಕಿ.

ವನಿತಾ ಗುಪ್ತಾ:

ಅಸೋಸಿಯೇಟ್‌ ಅಟಾರ್ನಿ ಜನರಲ್‌, ಡಿಪಾರ್ಟ್‌ಮೆಂಟ್‌ ಆಫ್ ಜಸ್ಟಿಸ್‌.

ಉಝ್ರಾ ಝೇಯ:

ಅಂಡರ್‌ ಸೆಕ್ರೆಟರಿ ಆಫ್ ಸ್ಟೇಟ್‌ ಫಾರ್‌ ಸಿವಿಲಿಯನ್‌ ಸೆಕ್ಯುರಿಟಿ.

ಗರೀಮಾ ವರ್ಮಾ:

ಪ್ರಥಮ ಮಹಿಳೆಯ ಕಚೇರಿಗೆ ಡಿಜಿಟಲ್‌ ಡೈರೆಕ್ಟರ್‌.

ಸಬ್ರಿನಾ ಸಿಂಗ್‌:

ಉಪ ಮಾಧ್ಯಮ ಕಾರ್ಯದರ್ಶಿ (ಪ್ರಥಮ ಮಹಿಳೆ ಕಚೇರಿ).

ಆಯಿಷಾ ಶಾ:

ವೈಟ್‌ಹೌಸ್‌ ಕಚೇರಿಯ ಪಾಟ್ನìರ್‌ಶಿಪ್‌ ಮ್ಯಾನೇಜರ್‌.

ಸಮೀರಾ ಫಾಜಿಲಿ:

ಅಮೆರಿಕ ರಾಷ್ಟ್ರೀಯ ಆರ್ಥಿಕ ಮಂಡಳಿ (ಎನ್‌ಇಸಿ) ಉಪನಿರ್ದೇಶಕಿ.

ಭರತ್‌ ರಾಮಮೂರ್ತಿ:

ನ್ಯಾಷನಲ್‌ ಇಕನಾಮಿಕ್‌ ಕೌನ್ಸಿಲ್‌  ಉಪ ನಿರ್ದೇಶಕ.

ಗೌತಮ್‌ ರಾಘವನ್‌:

ವೈಟ್‌ಹೌಸ್‌ ಅಧ್ಯಕ್ಷೀಯ ಸಿಬಂದಿ ಕಚೇರಿ ಉಪನಿರ್ದೇಶಕ.

ನೇಹಾ ಗುಪ್ತಾ:

ವೈಟ್‌ಹೌಸ್‌ ಕಚೇರಿಯ ಅಸೋಸಿಯೇಟ್‌ ಕೌನ್ಸೆಲ್‌.

ರೀಮಾ ಶಾ:

ಡೆಪ್ಯುಟಿ ಅಸೋಸಿಯೆಟ್‌ ಕೌನ್ಸೆಲ್‌ (ವೈಟ್‌ಹೌಸ್‌).

ಸೋನಿಯಾ ಅಗರ್ವಾಲ್‌:

ಹವಾಮಾನ ನೀತಿ ಮತ್ತು ಆವಿಷ್ಕಾರ ನಿರ್ದೇಶಕಿ.

ವಿದುರ್‌ ಶರ್ಮಾ:

ವೈಟ್‌ಹೌಸ್‌ ಕೋವಿಡ್‌ ಪರಿಹಾರ ತಂಡದ ನೀತಿ ಸಲಹೆಗಾರ.

 

ಅಧ್ಯಕ್ಷರ ಆಪ್ತವಲಯದಲ್ಲೂ ಭಾರತೀಯರು ! :

  • ಜೋ ಬೈಡೆನ್‌ರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ವಿನಯ್‌ ರೆಡ್ಡಿ, ಅಧ್ಯಕ್ಷರ ಭಾಷಣಬರಹ ನಿರ್ದೇಶಕ.
  • ಯುವ ಪ್ರತಿಭೆ ವೇದಾಂತ್‌ ಪಟೇಲ್‌ ಅಧ್ಯಕ್ಷರಿಗೆ ಮಾಧ್ಯಮ ಸಹಾಯಕ ಕಾರ್ಯದರ್ಶಿ.
  • ತಂತ್ರಜ್ಞಾನ- ರಾಷ್ಟ್ರೀಯ ಭದ್ರತೆಗೆ ಹಿರಿಯ ನಿರ್ದೇಶಕರಾಗಿ ತರುಣ್‌ ಛಬ್ರಾ.
  • ದಕ್ಷಿಣ ಏಷ್ಯಾ ಹಿರಿಯ ನಿರ್ದೇಶಕಿ ಸುಮೊನಾ ಗುಹಾ, ಪ್ರಜಾಪ್ರಭುತ್ವ, ಮಾನವ ಹಕ್ಕು ಸಂಯೋಜಕಿ ಶಾಂತಿ ಕಲಾಥಿಲ್‌.

 

Advertisement

Udayavani is now on Telegram. Click here to join our channel and stay updated with the latest news.

Next