Advertisement

ವಂಚಕರಿಗೆ ಅಮೆರಿಕವೇ ನೆಲೆ

06:35 AM Nov 15, 2017 | Harsha Rao |

ಹೊಸದಿಲ್ಲಿ: ಭಾರತದಿಂದ ಗುರುತರ ಆರೋಪಗಳನ್ನು ಎಸಗಿ ಪರಾರಿಯಾಗುವ ಹೆಚ್ಚಿನವರು ನೆಲೆ ಕಂಡುಕೊಳ್ಳುವುದು ಅಮೆರಿಕ, ಬ್ರಿಟನ್‌. ಕೆನಡಾ ಮತ್ತು ಯುಎಇ. ಇದು ಯಾರಧ್ದೋ ಮಾಹಿತಿ ಅಲ್ಲ. ಕೇಂದ್ರ ವಿದೇಶಾಂಗ ಇಲಾಖೆ ಮಾಹಿತಿ ಹಕ್ಕು ವ್ಯಾಪ್ತಿಯಲ್ಲಿ ಕೇಳಿದ ಮಾಹಿತಿಗೆ ನೀಡಿದ ಉತ್ತರ.

Advertisement

ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಪರಾರಿಯಾಗಿರುವ 121 ಮಂದಿಯನ್ನು ಗಡೀಪಾರು ಮಾಡಬೇಕು ಎಂದು ಕೇಂದ್ರ ಸರಕಾರ 24 ದೇಶಗಳಿಗೆ ಕೋರಿಕೆ ಸಲ್ಲಿಸಿದ್ದು, ಈ ಸಂಬಂಧ ಪ್ರಕ್ರಿಯೆ ನಡೆಯುತ್ತಿದೆ. ಈ ಪೈಕಿ ಪ್ರಮುಖರಾದ ವಿಜಯ ಮಲ್ಯ, ಲಲಿತ್‌ ಮೋದಿ ಮತ್ತು ಗುಲ್ಶನ್‌ ಕುಮಾರ್‌ ಹತ್ಯೆ ಆರೋಪಿ ನದೀಮ್‌ ಸೈಫಿ ಬ್ರಿಟನ್‌ನಲ್ಲಿದ್ದಾರೆ.  ಮುಂಬಯಿ ದಾಳಿಯ ರೂವಾರಿಗಳಲ್ಲಿ ಪ್ರಮುಖರಾದ ತಹಾವ್ವುರ್‌ ರಾಣಾ, ಡೇವಿಡ್‌ ಕೋಲ್ಮನ್‌ ಹೆಡ್ಲಿ ಅಮೆರಿಕದಲ್ಲಿದ್ದಾರೆ. ಗಮನಾರ್ಹ ಅಂಶವೆಂದರೆ 121 ಮಂದಿಯ ಪೈಕಿ ಶೇ.70 ಮಂದಿ ಅಮೆರಿಕ, ಬ್ರಿಟನ್‌. ಕೆನಡಾ, ಮತ್ತು ಯುಎಇಗಳಲ್ಲಿಯೇ ಇದ್ದಾರೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.

ಗಡೀಪಾರು ಮಾಡಬೇಕು ಎಂದು ಅಮೆರಿಕಕ್ಕೆ ಹೆಚ್ಚು, ಅಂದರೆ 38 ಮನವಿ ಕೊಡಲಾಗಿದೆ. ಅನಂತ

ರದ ಸ್ಥಾನಗಳಲ್ಲಿ ಯುಎಇ, ಕೆನಡಾ, ಬ್ರಿಟನ್‌ ಇದೆ.  24 ರಾಷ್ಟ್ರಗಳ ಪೈಕಿ 18 ದೇಶಗಳ ಜತೆಗೆ ಕೇಂದ್ರ ಸರಕಾರ ಗಡೀಪಾರು ಒಪ್ಪಂದವನ್ನು ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next