Advertisement

America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್‌ ಬೈಬಲ್‌ ಮಾರಾಟ!

01:21 PM Mar 27, 2024 | Team Udayavani |

ವಾಷಿಂಗ್ಟನ್:‌ ಕಾನೂನು ಸಮರದ ಹಣ ಪಾವತಿಗಾಗಿ ಹಾಗೂ ಶ್ವೇತಭವನಕ್ಕೆ ಮತ್ತೊಮ್ಮೆ ಮರಳಲು ಬಯಸಿರುವ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇದೀಗ ಹಣ ಸಂಗ್ರಹಕ್ಕಾಗಿ ಬೈಬಲ್‌ ಮಾರಾಟಕ್ಕೆ ಮುಂದಾಗಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:CSK: ಧೋನಿ ಯಾಕೆ ಬ್ಯಾಟಿಂಗ್ ಗೆ ಇಳಿಯುತ್ತಿಲ್ಲ..: ಕಾರಣ ತಿಳಿಸಿದ ಕೋಚ್ ಹಸ್ಸಿ

ಮಾರ್ಚ್‌ ತಿಂಗಳ ಮೊದಲ ವಾರದಲ್ಲಿ ರಿಪಬ್ಲಿಕ್‌ ಪಕ್ಷದಿಂದ ಅಧ್ಯಕ್ಷೀಯ ಚುನಾವಣೆಗೆ ನಾಮನಿರ್ದೇಶನಗೊಂಡಿದ್ದ ಡೊನಾಲ್ಡ್‌ ಟ್ರಂಪ್‌, ತಮ್ಮ ಸಾಮಾಜಿಕ ಜಾಲತಾಣವಾದ “ಟ್ರುಥ್‌ ನಲ್ಲಿ ವಿಡಿಯೊವೊಂದನ್ನು ಪೋಸ್ಟ್‌ ಮಾಡಿ, ಅಮೆರಿಕದ ಗಾಯಕ ಲೀ ಗ್ರೀನ್‌ ವುಡ್‌ ಅವರ ದೇಶಭಕ್ತಿಯಿಂದ ಸ್ಫೂರ್ತಿ ಪಡೆದ ಗಾಡ್‌ ಬ್ಲೆಸ್‌ ದಿ ಯುಎಸ್‌ ಎ ಬೈಬಲ್‌ ಅನ್ನು ಖರೀದಿಸುವಂತೆ ಬೆಂಬಲಿಗರಲ್ಲಿ ಮನವಿ ಮಾಡಿಕೊಂಡಿದ್ದಾರೆ”.

“ಹ್ಯಾಪಿ ಹೋಳಿ ವೀಕ್‌ ಆಚರಣೆ ಮೂಲಕ ಅಮೆರಿಕ ಮತ್ತೊಮ್ಮೆ ಪ್ರಾರ್ಥಿಸಬೇಕಾಗಿದೆ. ಈ ಸಂದರ್ಭದಲ್ಲಿ ಗುಡ್‌ ಫ್ರೈಡೇ ಮತ್ತು ಈಸ್ಟರ್‌ ಸನಿಹದಲ್ಲಿದೆ. ಈ ನಿಟ್ಟಿನಲ್ಲಿ God Bless the USA Bible ಪುಸ್ತಕ ಖರೀದಿಸುವಂತೆ ನಾನು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಟ್ವೀಟ್‌ ಮಾಡಿರುವ ಟ್ರಂಪ್‌, ವೆಬ್‌ ಸೈಟ್‌ ನಲ್ಲಿ ಬೈಬಲ್‌ ಪುಸ್ತಕವನ್ನು 59. 99 ಡಾಲರ್‌ ಗೆ ಮಾರಾಟ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಡೊನಾಲ್ಡ್‌ ಟ್ರಂಪ್‌ ಸರಣಿ ಸಿವಿಲ್‌ ಆರೋಪಗಳು ಹಾಗೂ ನಾಲ್ಕು ಕ್ರಿಮಿನಲ್‌ ಪ್ರಕರಣಗಳ ವಿರುದ್ಧ ಕಾನೂನು ಸಮರ ಸಾರಿದ್ದು, ಇದಕ್ಕಾಗಿ ಭಾರೀ ಪ್ರಮಾಣದ ಹಣ ವ್ಯಯಿಸಿದ್ದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದಾಗಿ ವರದಿ ವಿವರಿಸಿದೆ.

Advertisement

ಒಂದು ವೇಳೆ ಟ್ರಂಪ್‌ 10 ದಿನದೊಳಗೆ 175 ಮಿಲಿಯನ್‌ ಡಾಲರ್‌ ಹಣವನ್ನು ಪಾವತಿಸಿದರೆ ವಂಚನೆ ಪ್ರಕರಣದ ತೀರ್ಪಿನ ನಂತರ 454 ಮಿಲಿಯನ್‌ ಡಾಲರ್‌ ಗಿಂತ ಹೆಚ್ಚಿನ ಹಣವನ್ನು ಸಂಗ್ರಹಿಸಲು ನ್ಯೂಯಾರ್ಕ್‌ ಕೋರ್ಟ್‌ ಸಮ್ಮತಿ ಸೂಚಿಸಿದೆ.

ಲೇಖಕ ಇ.ಜೇನ್‌ ಕಾರ್ರೋಲ್‌ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಟೊನಾಲ್ಡ್‌ ಟ್ರಂಪ್‌ ಈಗಾಗಲೇ 92 ಮಿಲಿಯನ್‌ ಡಾಲರ್‌ ಬಾಂಡ್‌ ಗಳನ್ನು ಪಾವತಿಸಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next