Advertisement

Pakistan: ಇರಾನ್‌ ಮೇಲೆ ವೈಮಾನಿಕ ದಾಳಿಗೆ ಮುನ್ನ ಅಮೆರಿಕ ಸಂಪರ್ಕಿಸಿದ್ದ ಪಾಕಿಸ್ಥಾನ‌?

12:40 AM Jan 20, 2024 | Team Udayavani |

ವಾಷಿಂಗ್ಟನ್‌: ಇರಾನ್‌ ಮೇಲೆ ವೈಮಾ ನಿಕ ದಾಳಿ ನಡೆಸುವುದಕ್ಕೆ ಮುನ್ನ ಪಾಕಿಸ್ಥಾನವು ಅಮೆರಿಕವನ್ನು ಸಂಪರ್ಕಿಸಿತ್ತೇ ಎಂಬ ಅನುಮಾನ ಈಗ ವ್ಯಕ್ತವಾಗತೊಡಗಿದೆ. ಈ ಬಗ್ಗೆ ಶ್ವೇತಭವನದ ವಕ್ತಾರ ಮ್ಯಾಥ್ಯಾ ಮಿಲ್ಲರ್‌ ಅವರು ಪತ್ರಕರ್ತರ ನೇರ ಪ್ರಶ್ನೆಗೆ ಉತ್ತರ ನೀಡದೆ ಇರುವುದು ಶಂಕೆಗೆ ಹೆಚ್ಚು ಪುಷ್ಟಿ ನೀಡಿದೆ. “ಯಾವುದೇ ಖಾಸಗಿ ಸಂಭಾಷಣೆಯ ಬಗ್ಗೆ ಇಲ್ಲಿ ವಿವರಿಸುವ ಅಂಶಗಳೇನೂ ಇಲ್ಲ’ ಎಂದು ಅವರು ಹೇಳಿದ್ದು ಊಹಾಪೋಹಗಳಿಗೆ ಕಾರಣವಾಗಿದೆ.

Advertisement

ಇದೇ ವೇಳೆ, ಇರಾನ್‌ ಮತ್ತು ಪಾಕಿಸ್ಥಾನ ಬಿಕ್ಕಟ್ಟಿನ ಬಗ್ಗೆ ಕಳವಳ ವ್ಯಕ್ತಪಡಿಸಿದ ಮಿಲ್ಲರ್‌, 2 ರಾಷ್ಟ್ರಗಳ ನಡುವಿನ ವೈಮನಸ್ಸಿನ ಬಗ್ಗೆ ಅಮೆರಿಕಕ್ಕೆ ಆತಂಕವಿದೆ. ಮಧ್ಯ ಪ್ರಾಚ್ಯದಲ್ಲಿನ ಯುದ್ಧ ಸದೃಶ ವಾತಾವರಣ ತಗ್ಗಬೇಕು ಎಂದರು.

ಪ್ಯಾಲೆಸ್ತೀನ್‌ ವಿವಿ ಮೇಲೆ ಇಸ್ರೇಲ್‌ ಬಾಂಬ್‌
ಗಾಜಾ ಪಟ್ಟಿಯಲ್ಲಿ ಇರುವ ಪ್ಯಾಲೆಸ್ತೀನ್‌ ವಿಶ್ವವಿದ್ಯಾನಿಲಯದ ಪ್ರಧಾನ ಕ್ಯಾಂಪಸ್‌ ಮೇಲೆ ಇಸ್ರೇಲಿ ಸೇನಾ ಪಡೆಗಳು ಬಾಂಬ್‌ ದಾಳಿ ನಡೆಸಿವೆ. ಜಾಲತಾಣಗಳಲ್ಲಿ ವೈರ ಲ್‌ ಆಗಿರುವ ವೀಡಿಯೋದಲ್ಲಿನ ದೃಶ್ಯಗಳ ಪ್ರಕಾರ, ಇಡೀ ವಿವಿ ಬಾಂಬ್‌ ದಾಳಿಗೆ ಧ್ವಂಸ ಗೊಂಡಿದೆ. ಘಟನೆ ಬಗ್ಗೆ ಇಸ್ರೇಲ್‌ನಿಂದ ಅಮೆರಿಕ ಮಾಹಿತಿ ಕೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next