Advertisement

Noidaದಿಂದ ದೆಹಲಿವರೆಗೆ ಉತ್ತರಪ್ರದೇಶ ರೈತರ ಪ್ರತಿಭಟನಾ ಜಾಥಾ; ಬಿಗಿ ಭದ್ರತೆ, Traffic ಜಾಮ್

12:04 PM Dec 02, 2024 | Team Udayavani |

ನವದೆಹಲಿ: ನೂತನ ಕೃಷಿ ಕಾಯ್ದೆಯಡಿ ಪರಿಹಾರ ಮತ್ತು ಲಾಭದ ಕುರಿತು ಐದು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಉತ್ತರಪ್ರದೇಶ ರೈತರು ಸೋಮವಾರ (ಡಿ.02) ನೋಯ್ಡಾದಿಂದ ಪಾರ್ಲಿಮೆಂಟ್‌ ಕಾಂಪ್ಲೆಕ್ಸ್‌ ವರೆಗೆ ಪ್ರತಿಭಟನಾ ಮೆರವಣಿಗೆ ಹೊರಟಿದ್ದು, ಇದರ ಪರಿಣಾಮ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರೀ ಟ್ರಾಫಿಕ್‌ ಜಾಮ್‌ ನಿಂದಾಗಿ ವಾಹನ ಸವಾರರು ಪರದಾಡುವಂತಾಗಿದೆ.

Advertisement

ಸಂಸತ್‌ ನಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲೇ ರೈತರು ಮತ್ತೆ ಬೀದಿಗಿಳಿದಿದ್ದಾರೆ. ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದು, ದೆಹಲಿ ಮತ್ತು ಎನ್‌ ಸಿಆರ್‌ ನ ಮಾರ್ಗಗಳಲ್ಲಿ ಬ್ಯಾರಿಕೇಡ್‌ ಅಳವಡಿಸಿ ವಾಹನಗಳಿಗೆ ಬದಲಿ ಮಾರ್ಗದ ಅವಕಾಶ ಕಲ್ಪಿಸಿಕೊಟ್ಟಿರುವುದಾಗಿ ವರದಿ ವಿವರಿಸಿದೆ.

ಭೂಮಿ ರಹಿತ ರೈತರ ಮಕ್ಕಳಿಗೆ ಉದ್ಯೋಗಾವಕಾಶ, ಪುನರ್ವಸತಿ ಸೌಲಭ್ಯ, ಉನ್ನತ ಮಟ್ಟದ ಸಮಿತಿ ರಚನೆ ಸೇರಿದಂತೆ ಐದು ಬೇಡಿಕೆಗಳನ್ನು ಮುಂದಿಟ್ಟುಕೊಂಡು ರೈತರು ಪ್ರತಿಭಟನಾ ಜಾಥಾ ಹಮ್ಮಿಕೊಂಡಿರುವುದಾಗಿ ವರದಿ ತಿಳಿಸಿದೆ.

ಭಾರತೀಯ ಕಿಸಾನ್‌ ಪರಿಷತ್‌ (BKP), ಕಿಸಾನ್‌ ಮಜ್ದೂರ್‌ ಮೋರ್ಚಾ (KMM) ಸೇರಿದಂತೆ ವಿವಿಧ ಮೈತ್ರಿ ಸಂಘಟನೆಗಳ ಸಹಕಾರದೊಂದಿಗೆ ರೈತರು ನೋಯ್ಡಾ ಮಹಾಮಾಯ ಫ್ಲೈ ಓವರ್‌ ಸಮೀಪದಿಂದ 12ಗಂಟೆಗೆ ಪ್ರತಿಭಟನಾ ಜಾಥಾ ಆರಂಭಗೊಳ್ಳಲಿದ್ದು, ನಂತರ ಪಾದಯಾತ್ರೆ, ಟ್ರ್ಯಾಕ್ಟರ್‌ ಮೂಲಕ ದೆಹಲಿಗೆ ತೆರಳಲಿದ್ದಾರೆ ಎಂದು ವರದಿ ತಿಳಿಸಿದೆ.‌

Advertisement

Udayavani is now on Telegram. Click here to join our channel and stay updated with the latest news.

Next