Advertisement

ಕೇರಳದಲ್ಲಿ ವರದಕ್ಷಿಣೆ ನಿಷೇಧ ನಿಯಮಗಳಿಗೆ ತಿದ್ದುಪಡಿ

09:25 PM Jul 17, 2021 | Team Udayavani |

ತಿರುವನಂತಪುರಂ: ವರದಕ್ಷಿಣೆ ಪಿಡುಗನ್ನು ಕೇರಳದಲ್ಲಿ ಮೂಲೋತ್ಪಾಟನೆ ಮಾಡಲು ವರದಕ್ಷಿಣೆ ನಿಷೇಧ ನಿಯಮಗಳಿಗೆ ತಿದ್ದುಪಡಿ ಮಾಡಲಾಗಿದೆ. ಆ ರಾಜ್ಯದ ಎಲ್ಲ 14 ಜಿಲ್ಲೆಗಳಲ್ಲೂ ವರದಕ್ಷಿಣೆ ನಿಗ್ರಹಾಧಿಕಾರಿಯನ್ನು ನೇಮಿಸಲು ನಿರ್ಧರಿಸಲಾಗಿದೆ.

Advertisement

ಈ ಬಗ್ಗೆ ಮಾತನಾಡಿದ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್‌; ಇದುವರೆಗೆ ಎರ್ನಾಕುಳಂ, ತಿರುವನಂತಪುರಂ, ಕಲ್ಲಿಕೋಟೆ ಜಿಲ್ಲೆಗಳಲ್ಲಿ ವರದಕ್ಷಿಣೆ ನಿಗ್ರಹಾಧಿಕಾರಿಗಳಿದ್ದರು. ಇನ್ನು ಮುಂದೆ ಎಲ್ಲ ಜಿಲ್ಲೆಗಳಲ್ಲಿ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು ಈ ಪಾತ್ರವನ್ನೂ ನಿಭಾಯಿಸಲಿದ್ದಾರೆ.

ಇತ್ತೀಚೆಗಿನ ದಿನಗಳಲ್ಲಿ ಈ ವರದಕ್ಷಿಣೆ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಈ ಸಂಬಂಧ ಅಧಿಕಾರಿಗಳಿಗೆ ಕೇರಳದಲ್ಲಿ ತರಬೇತಿ ನೀಡಲಾಗಿದೆ. ಹಾಗೆಯೇ ಮಹಿಳೆಯರಿಗೆ ನೆರವು ನೀಡಲು ಸ್ವಯಂಸೇವಾ ಸಂಘಟನೆಗಳ ಸಹಾಯವನ್ನು ಕೇಳಲಾಗಿದೆ. ಜಿಲ್ಲಾ ಸಲಹಾ ಮಂಡಳಿ, ಜಾಗೃತಿ ಕಾರ್ಯಕ್ರಮಗಳನ್ನು ಹೆಚ್ಚಿಸಲೂ ತೀರ್ಮಾನಿಸಲಾಗಿದೆ.

ಇದನ್ನೂ ಓದಿ :ಟಿಸಿಎಸ್‌, ಇನ್ಫಿ, ವಿಪ್ರೋದಿಂದ 1 ಲಕ್ಷ ಉದ್ಯೋಗ ಸೃಷ್ಟಿ ಚಿಂತನೆ

Advertisement

Udayavani is now on Telegram. Click here to join our channel and stay updated with the latest news.

Next