Advertisement
ಬೈಕಂಪಾಡಿ ಎಪಿಎಂಸಿ ಯಾರ್ಡ್‌ಗೆ ಭೇಟಿ ನೀಡಿ ಸ್ಥಳೀಯ ಶಾಸಕರು, ಸಮಿ ತಿಯ ಪದಾಧಿ ಕಾರಿಗಳ ಸಭೆ ನಡೆಸಿ ಮಾತ ನಾಡಿದರು. ಕೇಂದ್ರ ಸರಕಾರವು ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅವರ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು ಎಂಬ ಕಾನೂನು ತಂದ ಬಳಿಕ, ಬಹುತೇಕ ಎಪಿಎಂಸಿಗಳು ಭೀತಿ ಯಲ್ಲಿವೆ. ಆದರೆ ಎಪಿಎಂಸಿ ಯಾರ್ಡ್ ಗಳ ಪರ್ಯಾಯ ಬಳಕೆ, ಆರ್ಥಿಕವಾಗಿ ಸಮಿತಿಗಳನ್ನು ಸುದೃಢಗೊಳಿಸಲು ಅಗತ್ಯ ಕ್ರಮವನ್ನು ಶೀಘ್ರ ಕೈಗೊಳ್ಳಲಾಗುವುದು. ಇದರ ಜತೆಗೆ ಎಪಿಎಂಸಿಯ ಅ ಧಿಕಾರವನ್ನು ವಿಕೇಂದ್ರೀಕರಣ ಮಾಡುವ ಬಗ್ಗೆ ಸರಕಾರ ಚಿಂತಿಸಲಿದೆ ಎಂದರು.
ಎಪಿಎಂಸಿ ಅಧ್ಯಕ್ಷ ಕೃಷ್ಣರಾಜ ಹೆಗ್ಡೆ ಅವರು ಸಚಿವರಿಗೆ ಮನವಿ ಸಲ್ಲಿಸಿ, ಕನಿಷ್ಠ 1 ಕೋಟಿ ರೂ. ಕಾಮಗಾರಿಯನ್ನು ನಡೆಸಲು ಸಮಿತಿ ಮಟ್ಟದಲ್ಲಿ ಅ ಧಿಕಾರ ನೀಡುವುದು, ಆದಾಯ ನಿ ಧಿಯಲ್ಲಿ ಇದೀಗ ನಿಗದಿ ಮಾಡಿದ 34 ಪೈಸೆಗಳನ್ನು ಎಪಿಎಂಸಿಗೆ ನೀಡುವಂತೆ, ಬೈಕಂಪಾಡಿ ಎಪಿಎಂಸಿಯನ್ನು ಆದಾಯದ ಮೂಲವನ್ನಾಗಿ ಪರಿವರ್ತಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಇದಕ್ಕೆ ಸ್ಪಂದಿಸಿದ ಸಚಿವರು ಬೆಂಗಳೂರಿನಲ್ಲಿ ಸಭೆ ಕರೆದು ಚರ್ಚಿಸುವ ಭರವಸೆ ನೀಡಿದರು. ಉಪಾಧ್ಯಕ್ಷೆ ರಜನಿ ದುಗ್ಗಣ್ಣ, ಸದಸ್ಯರಾದ ಅಶೋಕ್ ಶೆಟ್ಟಿ, ಪ್ರವೀಣ್ ಕುಮಾರ್, ರುಕ್ಮಯ್ಯ ನಾಯ್ಕ, ವರ್ತಕರ ಪ್ರತಿನಿಧಿ ರಾಘವ ಶೆಟ್ಟಿ, ಎಂಜಿನಿಯರ್ ಗಣೇಶ್ ಹೆಗ್ಡೆ, ಕಾರ್ಯದರ್ಶಿ ಎಚ್.ಸಿ.ಎಂ. ರಾಣಿ, ವರ್ತಕರ ಸಂಘದ ಅಧ್ಯಕ್ಷ ಭರತ್ ರಾಜ್ ಕೃಷ್ಣಾಪುರ, ಮನಪಾ ಸದಸ್ಯ ವರುಣ್ ಚೌಟ ಮತ್ತಿತರರಿದ್ದರು.
Related Articles
ಬೈಕಂಪಾಡಿ ಯಾರ್ಡ್ ಸೂಕ್ತ ಸಂಪರ್ಕ ವ್ಯವಸ್ಥೆ ಹೊಂದಿದ್ದು, ಈ ಭಾಗದಲ್ಲಿ ಹಣ್ಣು ಹಂಪಲು ಕೋಲ್ಡ್ ಸ್ಟೋರೇಜ್ ಅಗತ್ಯವಿದೆ. ಇದರ ಜತೆಗೆ ಈ ಯಾರ್ಡನ್ನು ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಿದ್ದು, ಸಚಿವರು ಅನುಮೋದನೆ ನೀಡಲು ಕ್ರಮ ಕೈಗೊಳ್ಳ ಬೇಕು ಎಂದು ಶಾಸಕ ಡಾ| ಭರತ್ ಶೆಟ್ಟಿ ವೈ. ಮನವಿ ಮಾಡಿದರು.
Advertisement
80 ಎಕರೆ ಪ್ರದೇಶ ಸದ್ಬಳಕೆಯಾಗಲಿಬೈಕಂಪಾಡಿ ಯಾರ್ಡ್‌ನಲ್ಲಿ ಹಣ್ಣು, ತರಕಾರಿ ಮಾರಲು ಆಸಕ್ತರಿಗೆ ಹೆಚ್ಚಿನ ಸೌಲಭ್ಯ ಒದಗಿಸಲು ಕಾನೂನು ತಿದ್ದು ಪಡಿಯ ಅಗತ್ಯವಿದೆ. 80 ಎಕರೆ ಪ್ರದೇಶ ಸದ್ಬಳಕೆಯಾಗಬೇಕಿದೆ ಎಂದು ಶಾಸಕ ವೇದವ್ಯಾಸ ಕಾಮತ್ ನುಡಿದರು.