ಬೆಂಗಳೂರು: ಸಂಚಾರ ದಟ್ಟಣೆ ಮಧ್ಯೆರೋಗಿಗಳು ಅಥವಾ ಗಾಯಾಳುಗಳನ್ನು ಆಸ್ಪತ್ರೆಗೆಸಾಗಿಸುವಾಗ ಆ್ಯಂಬುಲೆನ್ಸ್‌ಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲು “ಅತ್ಯಾಧುನಿಕತಂತ್ರಜ್ಞಾನ ಆಧಾರಿತ ಆ್ಯಂಬುಲೆನ್ಸ್ ನಿರ್ವಹಣಾವ್ಯವಸ್ಥೆ’ ಜಾರಿಗೆ ಕರೆಯಲಾಗಿದ್ದ ಟೆಂಡರ್‌ರದ್ದುಪಡಿಸಿದ ಸರ್ಕಾರದ ಧೋರಣೆಗೆಅಸಮಾಧಾನವ್ಯಕ್ತಪಡಿಸಿ ರುವ ಹೈಕೋರ್ಟ್,”ಯಾವುದೇ ಕಾರಣವಿಲ್ಲದೇಜನೋಪಯೋಗಿಟೆಂಡರ್‌ರದ್ದುಪಡಿಸಿರುವುದಕ್ಕೆಯಾರುಹೊಣೆ” ಎಂದುಪ್ರಶ್ನಿಸಿದೆ.
ಈ ಕುರಿತು ಭಾರತ್ ಪುನರುತ್ಥಾನ ಟ್ರಸ್ಟ್‌ಸಲ್ಲಿಸಿರುವ ಸಾರ್ವಜನಿಕಹಿತಾಸಕ್ತಿಅರ್ಜಿಯನ್ನುಮಂಗಳವಾರ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದವಿಭಾಗೀಯ ನ್ಯಾಯಪೀಠ ಸರ್ಕಾರದ ಧೋರಣೆಗೆ ಅಸಮಾಧಾನ ವ್ಯಕ್ತಪಡಿಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲವೆಂಕಟೇಶ್ ದಳವಾಯಿ ವಾದ ಮಂಡಿಸಿ,ಸರ್ಕಾರವು ಏಕಾಏಕಿ ಟೆಂಡರ್ ಹಿಂಪಡೆದಿದೆ.ಅದಕ್ಕೆ ಸಕಾರಣವೂ ನೀಡಿಲ್ಲ. ಪ್ರಕರಣಕೋರ್ಟ್‌ನಲ್ಲಿಬಾಕಿಯಿದೆ.ಆದರೂಕೋರ್ಟ್ ಅನುಮತಿ ಇಲ್ಲದೇ ಟೆಂಡರ್ ರದ್ದುಪಡಿಸಲಾಗಿದೆ.ಹೊಸದಾಗಿ ಟೆಂಡರ್‌ಕರೆಯು ವುದಾಗಿ ಹೇಳಿದ್ದ ಸರ್ಕಾರ, ಆ ಪ್ರಕ್ರಿಯೆ ಮುಂದು ವರಿಸಿಲ್ಲ.ಹೀಗಾಗಿ, ಕೋರ್ಟ್‌ನಲ್ಲಿ ಪ್ರಕರಣ ವಿಚಾರಣೆ ಬಾಕಿಯಿರುವ ಮಾಹಿತಿ ಇದ್ದರೂ ಟೆಂಡರ್ ರದ್ದುಪಡಿಸಲಾಯಿತೇ? ಅಥವಾ ಮಾಹಿತಿ ಇಲ್ಲದೇ ಟೆಂಡರ್ ರದ್ದುಪಡಿಸಲಾಗಿದೆಯೇ?ಎಂಬಬಗ್ಗೆ ಪ್ರಮಾಣ ಪತ್ರ ಸಲ್ಲಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕುಎಂದು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಡ್ವೋಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ, ನ್ಯಾಯಾಲಯ ದಲ್ಲಿ ಪ್ರಕರಣ ವಿಚಾರಣಾಹಂತದಲ್ಲಿ ಇರುವುದರಿಂದ ಹೊಸ ಪ್ರಕ್ರಿಯೆನಡೆಸಿಲ್ಲ. ಈ ಬಗ್ಗೆ ಸರ್ಕಾರದ ವತಿ ಯಿಂದಪ್ರಮಾಣಪತ್ರ ಸಲ್ಲಿಸಲಾಗುವುದು ಎಂದರು.
ಟೆಂಡರ್ ಪ್ರಕ್ರಿಯೆ ರ್ಪೂಣಗೊಂಡಿದ್ದರೆ ಈವೇಳೆಗಾಗಲೇ ಆ್ಯಂಬುಲೆನ್ಸ್ ಲಭ್ಯವಾಗುತ್ತಿತ್ತು.ಕೋವಿಡ್-19 ಸಂಕಷ್ಟ ಪರಿಸ್ಥಿತಿಯಲ್ಲಿರೋಗಿಗಳಿಗೆ ಸಹಾಯವಾಗುತ್ತಿತ್ತು ಎಂದುಹೇಳಿದ ನ್ಯಾಯಪೀಠ, ಜೂ.24ರೊಳಗೆಪ್ರಮಾಣ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿವಿಚಾರಣೆಮುಂದೂಡಿತು.