Advertisement
ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಮಾತನಾಡಿ, ಮಂಗಳೂರು ವಿಶ್ವದಲ್ಲೇ ಮಾನ್ಯತೆ ಪಡೆದ ನಗರ ವಾಗಿದ್ದು, ಇಲ್ಲಿ ವಿಶ್ವದರ್ಜೆ ಗುಣಮಟ್ಟದ ಶಿಕ್ಷಣ ಸಂಸ್ಥೆಗಳು, ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗಳಿವೆ. ಆರೋಗ್ಯ ಕ್ಷೇತ್ರ ದಲ್ಲಿ ಆ್ಯಂಬುಲೆನ್ಸ್ ವಾಹನಗಳ ಸೇವೆ ಪ್ರಮುಖವಾದುದು. ಆ್ಯಂಬುಲೆನ್ಸ್ ಚಾಲಕರು ಜೀವರಕ್ಷಕರು. ಸೇವಾ ಮನೋಭಾವ ಹೊಂದಿರುವ ಇವರು ಎಂಥ ಪರಿಸ್ಥಿತಿಯಲ್ಲೂ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾಗುತ್ತಾರೆ ಎಂದರು.
2010ರಲ್ಲಿ ಸಂಭವಿಸಿದ್ದ ಮಂಗಳೂರು ವಿಮಾನ ದುರಂತದ ಸಂದರ್ಭದಲ್ಲಿ ಇವರು ನಿರ್ವಹಿಸಿದ ಸೇವೆ ಶ್ಲಾಘನೀಯ. ಆ್ಯಂಬುಲೆನ್ಸ್‌ನಲ್ಲೇ ಜೀವನೋಪಾಯ ಕಂಡುಕೊಂಡಿರುವ ಇವರಿಗೆ ಆಸ್ಪತ್ರೆಗಳ ಆವರಣದಲ್ಲಿ ಮೂಲ ಸೌಕರ್ಯದ ಸಮಸ್ಯೆ ಎದುರಾಗುತ್ತಿದ್ದು, ಅದನ್ನು ಕೂಡಲೇ ಸರಿಪಡಿಸಬೇಕು ಎಂದು ಅವರು ಆಗ್ರಹಿಸಿದರು. ನೈರ್ಮಲ್ಯ ಕಾಪಾಡಿ
ವೆನಾÉಕ್ ಆಸ್ಪತ್ರೆಯ ಹೊರಗೆ ಆ್ಯಂಬುಲೆನ್ಸ್ ನಿಲ್ಲಿಸುವ ಪ್ರದೇಶದಲ್ಲಿ ಸಾರ್ವಜನಿಕರು ಕಸ ಬಿಸಾಡುವುದು ಹಾಗೂ ಮೂತ್ರ ವಿಸರ್ಜಿಸುವುದರಿಂದ ಈ ಪ್ರದೇಶದಲ್ಲಿ ಶುಚಿತ್ವಕ್ಕೆ ತೊಂದರೆ ಯಾಗಿದ್ದು, ಆಂಬ್ಯುಲೆನ್ಸ್ ಚಾಲಕರಿಗೆ ಮಲೇರಿಯಾ, ಡೆಂಗ್ಯು ರೋಗಗಳು ಬರುವ ಸಾಧ್ಯತೆಗಳಿವೆ. ಜಿಲ್ಲಾಡಳಿತವು ತತ್‌ಕ್ಷಣ ಈ ಪ್ರದೇಶದಲ್ಲಿ ಶುಚಿತ್ವ ಹಾಗೂ ನೈರ್ಮಲ್ಯ ಕಾಪಾಡಲು ಕ್ರಮ ಜರಗಿಸಬೇಕು. ಜತೆಗೆ ಇವರಿಗಾಗಿ ಈ ಪ್ರದೇಶದಲ್ಲಿ ಶೌಚಾಲಯ ಹಾಗೂ ಸ್ನಾನಗೃಹ ನಿರ್ಮಿಸಬೇಕು. ಸುಸಜ್ಜಿತ ಪಾರ್ಕಿಂಗ್ (ಮೇಲ್ಛಾವಣಿ ಸಹಿತ) ವ್ಯವಸ್ಥೆ ಮಾಡಬೇಕು ಹಾಗೂ ಜಿಲ್ಲೆಯಲ್ಲಿರುವ ಇತರ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಆ್ಯಂಬುಲೆನ್ಸ್ ಚಾಲಕರಿಗೂ ಸೂಕ್ತ ಮೂಲ ಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿದರು.
Related Articles
Advertisement