Advertisement

ಸ್ವಂತ ಉನ್ನತಿಯ ಮಹತ್ವಾಕಾಂಕ್ಷೆ ; ಎಲ್ಲರ ಸೌಖ್ಯದ ದರ್ಶನ

12:12 AM Oct 30, 2020 | mahesh |

ಒಂದು ಕಥೆ- ಕಪಿಯೊಂದು ಒಂದು ಮನೆಯ ಅಡುಗೆ ಮನೆಗೆ ನುಗ್ಗಿತು. ಅಲ್ಲಿ ಒಂದು ಡಬ್ಬದ ತುಂಬ ಗೋಡಂಬಿಗಳಿದ್ದವು. ಗೋಡಂಬಿಗಳನ್ನು ತೆಗೆಯಲೆಂದು ಕಪಿ ಡಬ್ಬದೊಳಕ್ಕೆ ಕೈಹಾಕಿ ಮುಷ್ಠಿ ತುಂಬಾ ಬಾಚಿಕೊಂಡಿತು. ಆದರೆ ಡಬ್ಬದ ಬಾಯಿ ಸಣ್ಣದು, ಹಾಗಾಗಿ ಹೊರಕ್ಕೆ ತೆಗೆಯಲು ಆಗಲಿಲ್ಲ. ಮತ್ತೆ ಮತ್ತೆ ಪ್ರಯತ್ನಿಸಿದರೂ ಸಾಧ್ಯ ವಾಗಲಿಲ್ಲ. ಅಷ್ಟರಲ್ಲಿ ಸ್ವಲ್ಪ ಬುದ್ಧಿಯಿದ್ದ ಇನ್ನೊಂದು ಕಪಿ ಬಂತು. ಅದು ಮೊದ ಲನೆಯ ಕಪಿಯ ಅವಸ್ಥೆ ಕಂಡು ಮುಷ್ಠಿ ಸಡಿಲಿಸುವಂತೆ ಹೇಳಿ ಕೈಯನ್ನು ಹೊರ ತೆಗೆಯಿಸಿತು. ಬಳಿಕ ಡಬ್ಬವನ್ನು ಬೋರಲಾಗಿ ಹಿಡಿದಾಗ ಗೋಡಂಬಿಗಳೆಲ್ಲವೂ ನೆಲಕ್ಕೆ ಬಿದ್ದವು. ಎರಡೂ ಮಂಗಗಳು ಗೋಡಂಬಿ ತಿನ್ನುವಂತಾಯಿತು. “ಮಹತ್ವಾಕಾಂಕ್ಷೆ’ ಮತ್ತು “ದರ್ಶನ’ಗಳಿ ಗಿರುವ ವ್ಯತ್ಯಾಸ ಇದು.

Advertisement

ನಾವು – ನೀವು ಸೇರಿದಂತೆ ಪ್ರತಿಯೊಬ್ಬರೂ ಮಹತ್ವಾಕಾಂಕ್ಷೆಯನ್ನು ಹೊಂದಿರುತ್ತಾರೆ. ತನ್ನಲ್ಲಿ ಈಗ ಇರುವುದು, ತಾನು ಹೊಂದಿ ರುವುದಕ್ಕಿಂತ ಹೆಚ್ಚಿನ ದನ್ನು ಬಯಸುವುದು ಮನುಷ್ಯನ ಮೂಲ ಗುಣ ಗಳಲ್ಲಿ ಒಂದು. ಅವರವರ ಆಲೋ ಚನೆ, ಇತಿಮಿತಿ, ಬದುಕನ್ನು ಅರ್ಥ ಮಾಡಿಕೊಂಡಿರುವ ರೀತಿ ಗಳಿಗೆ ಸರಿಯಾಗಿ ಮಹತ್ವಾ ಕಾಂಕ್ಷೆ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಕಡು ಬಡವ ದಿನಕ್ಕೆ ಒಂದು ಹೊತ್ತಿನ ಊಟವಾದರೂ ಸಿಗಬೇಕು ಎಂದುಕೊಳು ತ್ತಾನೆ. ಮೂರು ಹೊತ್ತು ಉಣ್ಣುವವರು ಸ್ಟಾರ್‌ ಹೊಟೇಲಿನ ಭೋಜನ ಬಯಸುತ್ತಾರೆ. ಇನ್ನೊಬ್ಬರ ಕಾರಿನಲ್ಲಿ ಚಾಲಕನಾಗಿ ದುಡಿಯು ವವನು ಸ್ವಂತ ಕಾರು ಹೊಂದಬೇಕು ಎಂಬ ಕನಸು ಕಟ್ಟಿಕೊಂಡಿರುತ್ತಾನೆ. ಅವರವರ ಅಳವಿಗೆ ತಕ್ಕಂತೆ ಅವರ ಮಹತ್ವಾಕಾಂಕ್ಷೆ.

ಈ ಮಹತ್ವಾಕಾಂಕ್ಷೆಯನ್ನು ಈಡೇರಿಸಿ ಕೊಳ್ಳುವ ಬಗೆಯೂ ಒಬ್ಬರಿಗಿಂತ ಇನ್ನೊಬ್ಬ ರದು ಭಿನ್ನ. ಕೆಲವರು ಅಧಿಕಾರದಿಂದ, ಇನ್ನು ಕೆಲವರು ಹಣದಿಂದ, ಹಲವರು ಭ್ರಷ್ಟಾಚಾರದಿಂದ ಅದನ್ನು ಸಾಧಿಸುತ್ತಾರೆ. ತಾನು ಬಯಸಿದ್ದನ್ನು ಪ್ರೀತಿಯಿಂದ ಪಡೆಯಬಹುದು ಅಂದುಕೊಳ್ಳುವವರು ಕೆಲವರು. ಹೀಗೆ ದಾರಿ ಬೇರೆ ಬೇರೆ ಆಗಿರಬಹುದು; ಆದರೆ ಈಗ ತಾನಿರು ವುದಕ್ಕಿಂತ ದೊಡ್ಡದಾದ, ವಿಸ್ತಾರವಾದ, ಹಿರಿದಾದ ಬದುಕು ಬೇಕು ಎಂಬ ಹಂಬಲ ಎಲ್ಲರದು. “ಇರದುದರೆಡೆಗೆ ತುಡಿವುದೆ ಜೀವನ’ ಎಂದು ಕವಿ ಹೇಳಿದ್ದು ಇದನ್ನೇ.

ಡಬ್ಬದೊಳಗೆ ಇದ್ದ ಗೋಡಂಬಿಗಳನ್ನು ಸಾಧ್ಯವಾದಷ್ಟು ಹೊರತೆಗೆದು ತಿನ್ನಬೇಕು ಎಂದು ಮುಷ್ಠಿ ಕಟ್ಟಿದ ಮಂಗನದು ಕೂಡ ನಮ್ಮಂತೆಯೇ ಮಹತ್ವಾಕಾಂಕ್ಷೆ. ಸೀಮಿತವಾದ ವ್ಯಕ್ತಿಗತ ಮಹತ್ವಾಕಾಂಕ್ಷೆಗಳನ್ನು ನಾವೆಲ್ಲರೂ ಹೊಂದಿರುವುದು ಮನುಷ್ಯ ಕುಲದ ಅತೀ ದೊಡ್ಡ ಸಮಸ್ಯೆ. ಗೋಡಂಬಿ ಇಬ್ಬರಿಗೂ ಸಿಗುವಂತೆ ಮಾಡಿದ ಎರಡನೇ ಕಪಿಯದು ವಿಶಾಲ ದೃಷ್ಟಿಕೋನ. ಇದು ದರ್ಶನ ಅಥವಾ ಕಾಣೆR. ವ್ಯಕ್ತಿಗತವಾದ ಮಹ ತ್ವಾಕಾಂಕ್ಷೆಗಳ ಬದಲಾಗಿ ಅವರವರ ಮಿತಿಯಲ್ಲಿ ವಿಶಾಲವಾದ ದರ್ಶನವನ್ನು ಹೊಂದುವುದು ಎಲ್ಲರ ಕ್ಷೇಮ, ಒಳಿತಿಗೆ ಅತೀ ಅಗತ್ಯ. ದರ್ಶನವೂ ವ್ಯಕ್ತಿ ಯಿಂದ ವ್ಯಕ್ತಿಗೆ ಬದಲಾಗುತ್ತದೆ. ಒಬ್ಬನಿಗೆ ಅದು ತನ್ನ ಒಳಿತು ಮಾತ್ರ ಆಗಿರಬಹುದು, ಇನ್ನೊಬ್ಬನಿಗೆ ತನ್ನ ಕುಟುಂಬದ ಕ್ಷೇಮ ಆಗಿರಬಹುದು. ಮತ್ತೂಬ್ಬ ತನ್ನ ಸಮುದಾಯ, ಮಗದೊಬ್ಬ ತನ್ನ ರಾಜ್ಯ, ದೇಶ… ಹೀಗೆ ದರ್ಶನವನ್ನು ಹೊಂದಿರ ಬಹುದು. ಇದು ಆದಾಗ ಪ್ರತಿಯೊಬ್ಬರೂ ಮನುಷ್ಯ ಕುಲದ ಒಳಿತಿಗಾಗಿ ಶ್ರಮಿಸುವಂತಾಗುತ್ತದೆ.

ಮಹತ್ವಾಕಾಂಕ್ಷೆ, ಆಕಾಂಕ್ಷೆ ಎಂದರೆ ಇರುವುದನ್ನು ಉತ್ತಮಪಡಿಸುವುದು. ದರ್ಶನ ಅಥವಾ ಕಾಣೆR ಎಂದರೆ ಹೊಸದನ್ನು ಕಲ್ಪಿಸಿ ಅದಕ್ಕಾಗಿ ಶ್ರಮಿಸುವುದು. ಇಂದು ಆಗಬೇಕಾದ್ದು ಇದು.

Advertisement

( ಸಾರ ಸಂಗ್ರಹ)

Advertisement

Udayavani is now on Telegram. Click here to join our channel and stay updated with the latest news.

Next