Advertisement

ಗಡಿನಾಡಿನ ಅಪೂರ್ವ ಸಾಧಕಿ-ಪಾತನಡ್ಕದ ಅಂಬಿಕಾ ಮುಳಿಯಾರು

06:15 AM Jan 02, 2018 | |

ಬದಿಯಡ್ಕ: ಸಂಗೀತ ಕಲೆಗೆ ಕೇಳುಗರನ್ನು ಮೋಡಿ ಮಾಡುವ ಭಾವ, ಆಕರ್ಷಿಸುವ  ಹಾಗೂ ಮನತಣಿಸುವ ಶಕ್ತಿಯನ್ನು ಒಳಗೊಂಡಿದೆ. ಅದರಲ್ಲೂ ಗಾಯನ, ವಾದನ, ಮಿಮಿಕ್ರಿ ಹೀಗೆ ಬೇರೆ ಬೇರೆ ವೈವಿಧ್ಯಮಯವಾದ ರೀತಿಗಳಲ್ಲಿ ನಮ್ಮನ್ನು ಮೈನವಿರೇಳಿಸುವ ಸಂಗೀತದ ಭಾವಲಹರಿಯಲ್ಲಿ ಅದೇನೋ ಮಾತಿಗೆ ನಿಲುಕದ ತಲ್ಲಣವಡಗಿದೆ. ಆದುದರಿಂದಲೇ ಯಾವುದೇ ಕಲಾವಿದನಾದರೂ ಸಂಗೀತದೆಡೆಗೆ ಒಂದು ತುಡಿತವನ್ನು ಹೊಂದಿರುತ್ತಾನೆ.

Advertisement

ಜಾನಪದ ಗೀತೆ, ಶಾಸ್ತ್ರೀಯ ಸಂಗೀತ, ಭಜನೆ, ಭಕ್ತಿಗೀತೆ ಹೀಗೆ ನೂರಾರು ತರದ ಸಂಗೀತಗಳನ್ನು ಕೇಳಿ ಆನಂದಿಸುವ ನಾವು ವಾದ್ಯ ಸಂಗೀತಕ್ಕೂ ಅದರದ್ದೇ ಆದ ಮಹತ್ವವನ್ನು ನೀಡಿರುತ್ತೇವೆ. ಹಾಡುಗಾರಿಕೆ ಅಥವಾ ಸಂಗೀತೋಪಕರಣಗಳ ಹೊರತಾಗಿ ಸುಂದರವಾದ ಹಾಡೊಂದನ್ನು ಮೂಗಿನ ಮೂಲಕ ನುಡಿಸಲು ಸಾಧ್ಯ ಎಂಬುದನ್ನು ತೋರಿಸಿ ಕೊಟ್ಟವರೇ ಗಡಿನಾಡಿನ ಅಂಬಿಕಾ ಮುಳಿಯಾರ್‌. ಈ ಸಂಗೀತಕ್ಕೆ ಇವರಿಟ್ಟ ಹೆಸರು ನಾಸಿಕ ನಾದ ವಿಸ್ಮಯ.

ಮೂಲತ: ಕಾಂಞಂಗಾಡ್‌ ಸಮೀಪದ ರಾಜಪುರಂ ನಿವಾಸಿಯಾಗಿದ್ದರೂ ಕಾಸರಗೋಡು ಮುಳಿಯಾರು ಪಾತನಡ್ಕ ಪ್ರಸನ್ನಚಂದ್ರನ್‌ ಅವರನ್ನು ವರಿಸಿ ಕಾಸರಗೋಡಿಗೆ ಬಂದು ನೆಲೆಸಿದರು. ಬಾಲ್ಯದಲ್ಲಿಯೇ ಭಜನೆ ಹಾಡುಗಳನ್ನು ಹಾಡುವುದರಲ್ಲಿ ಕಾಲಕಳೆಯುತ್ತಿದ್ದ ಅಂಬಿಕಾ ಅವರಿಗೆ ಮಿಮಿಕ್ರಿ ಮಾಡುವುದು ಒಂದು ಹವ್ಯಾಸ. ಸದಾ ಭಜನೆ, ಭಕ್ತಿಗೀತೆ, ಜಾನಪದ ಹಾಡುಗಳ ಗಾಯನ ಮಾತ್ರವಲ್ಲದೆ ಮಿಮಿಕ್ರಿಯಲ್ಲೂ ಬಹುಮಾನಗಳನ್ನು ಪಡೆಯುತ್ತಿದ್ದರು. ಮಿಮಿಕ್ರಿ ಮಾಡುವಾಗ ಹೆಚ್ಚಾಗಿ ವೀಣೆ, ವಯಲಿನ್‌, ತಬ್ಲಿ ಮುಂತಾದ ಸಂಗೀತೋಪಕರಣಗಳನ್ನು ಅನುಕರಿಸಲು ಪ್ರಯತ್ನಿಸುತ್ತಿದ್ದರು.

ಇದು ಮುಂದೆ ಒಂದು ಹವ್ಯಾಸವಾಗಿ ಬೆಳೆದಾಗ ಮೂಗಿನಲ್ಲಿ ಸಂಚರಿಸುವ ಗಾಳಿ ಹಾಗೂ ತನ್ನ ಬೆರಳಿನ ಸಹಾಯದಿಂದ ವಿವಿಧ ಹಾಡುಗಳನ್ನು ಅನುಕರಿಸಲು ಪ್ರಾರಂಭಿಸಿ ಅದರಲ್ಲಿ ಸಫಲರಾದರು. ರಾಜಪುರಂನಲ್ಲಿ ಹಲವಾರು ವೇದಿಕೆಗಳಲ್ಲಿ ಉತ್ಸವಕಾಲದಲ್ಲಿ ತನ್ನ ಪ್ರತಿಭೆಯನ್ನು ಮೆರೆದಿದ್ದಾರೆ. ಆದರೆ  ಗಡಿನಾಡು ಅವರ ಕಲೆಗೆ ಒಂದು ಸ್ಪಷ್ಟ ರೂಪವನ್ನು ನೀಡಲು ಸಹಾಯ ಮಾಡಿತು ಎನ್ನುತ್ತಾರೆ ಅಂಬಿಕಾ. ಸುಮಾರು ಆರು ವರ್ಷಗಳ ಹಿಂದೆ ನ್ಯೂ ಟಿವಿ, ರಿಪೋರ್ಟರ್‌ ಚಾನೆಲ್‌ಗ‌ಳಲ್ಲಿ 3 ನಿಮಿಷದ ಕಾರ್ಯಕ್ರಮನೀಡುವ ಅವಕಾಶ ಲಭಿಸಿತ್ತಾದರೂ ಅದು ಅಷ್ಟೊಂದು ಸುದ್ದಿಯಾಗಲಿಲ್ಲ.

ಮಾಸ್ಟರ್ ಟ್ಯೂಶನ್‌ ಸೆಂಟರ್‌ನ ನಿರ್ದೇಶಕರಾದ ಉಮೇಶ್‌ ಕಾಸರಗೋಡು ಅವರ ಮಾರ್ಗದರ್ಶನ ತನ್ನ ನಾಸಿಕ ನಾದ ವಿಸ್ಮಯಕ್ಕೆ ಒಂದು ಹೊಸ ಆಯಾಮವನ್ನು ಕಟ್ಟಿಕೊಡುವಲ್ಲಿ ಮಹತ್ವದ ಪಾತ್ರವಹಿಸಿತು ಎನ್ನುವುದು ಅಂಬಿಕಾ ಅವರ ಅಭಿಪ್ರಾಯ. ಉಮೇಶ್‌ ಅವರ ಸಲಹೆಯಂತೆ ಹಿನ್ನೆಲೆ ಸಂಗೀತದ ಜತೆಯಲ್ಲಿ ತನ್ನ  ನಾಸಿಕದಿಂದ ಹೊರಹೊಮ್ಮುವ ಹಾಡುಗಳನ್ನು ಸೇರಿಸಿದಾಗ ವಿಸ್ಮಯವನ್ನು ಸೃಷ್ಟಿಸಲು ಸಾಧ್ಯವಾಯಿತು. ಆ ನಂತರ ಪಯ್ಯನ್ನೂರಿನ ತಾಯನ್ನೇರಿ ಕ್ಷೇತ್ರದಲ್ಲಿ ಸುಮಾರು ಒಂದು ಗಂಟೆಯ ಕಾಲ ಸತತವಾಗಿ 17 ಹಾಡುಗಳನ್ನು ಹಿನ್ನೆಲೆ ಸಂಗೀತದೊಂದಿಗೆ ನಾಸಿಕದ ನಾದವನ್ನೂ ಸೇರಿಸಿ ನುಡಿಸಿ ಸೇರಿದ ಸಾವಿರಾರು ಪ್ರೇಕ್ಷಕರ ಹೃನ್ಮನ ತಣಿಸುವಲ್ಲಿ ಸಫಲರಾದರು. ನೂರಾರು ವೇದಿಕೆಗಳಲ್ಲಿ ತನ್ನ ಸಾಧನೆಯನ್ನು ಮೆರೆದು ಸುಮಾರು 9 ವೇದಿಕೆಗಳಲ್ಲಿ ಹಿನ್ನೆಲೆ ಸಂಗೀತದೊಂದಿಗೆ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಕುಟುಂಬಶ್ರೀ ವೇದಿಕೆಗಳಲ್ಲಿ ಸಾಮಾನ್ಯವಾಗಿ ಅಂಬಿಕಾ ಅವರ ಹಾಡು ಇಲ್ಲವೆ ಮಿಮಿಕ್ರಿ ಕೇಳಿಬರುತ್ತದೆ. ಕುಟುಂಬಶ್ರೀ ಕೇರಳ್ಳೋತ್ಸವಲ್ಲಿ ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಬಹುಮಾನಗಳನ್ನೂ ತನ್ನದಾಗಿಸಿಕೊಂಡಿದ್ದಾರೆ.

Advertisement

ಸುಮಾರು ಎರಡು ವರ್ಷಗಳ ಕಾಲ ಯಾವುದೇ ಕಾರ್ಯಕ್ರಮ ನೀಡದೆ ಮೌನವಾಗಿದ್ದ ಅಂಬಿಕಾ ಅವರಿಂದ ಮತ್ತೆ ಪುನ: ನಾಸಿಕ ನಾದ ಹೊರಹೊಮ್ಮುವಂತೆ ಮಾಡಿದವರು ಪಾಂಚಜನ್ಯ ತಂಡದ ಸದಸ್ಯರು. 

ರಾಜಪುರಂನಲ್ಲಿ ಆಯೋಜಿಸಿದ ಕಾರ್ಯಕ್ರಮ ದಲ್ಲಿ ಭಾಗವಹಿಸುವಂತೆ ಒತ್ತಾಯಿಸಿದಾಗ ತನ್ನ ಅಭ್ಯಾಸವನ್ನು ಪುನರಾರಂಭಿಸಿದ ಅಂಬಿಕಾ ಅವರು ಕಾಕತಾಳೀಯ ಎಂಬಂತೆ ಪ್ಲವರ್ ಚಾನೆಲ್‌ನ ಕೋಮಡಿ ಉತ್ಸವ್‌ ಶೋದ ಓಡಿಶನ್‌ ಬಗೆಗಿನ ಜಾಹೀರಾತನ್ನು ಪತ್ರಿಕೆಯಲ್ಲಿ ಕಂಡರು. ಒಂದು ಪ್ರಯತ್ನ ಎಂಬಂತೆ ಕೊಚ್ಚಿಗೆ ಹೋದ ಅಂಬಿಕಾ ಅವರ ಒಂದೇ ಹಾಡು ಅವರನ್ನು ಪ್ಲÉವರ್ ಚಾನೆಲ್‌ನ ವೇದಿಕೆಯೇರುವಂತೆ ಮಾಡಿತು. ಕೋಮಡಿ ಉತ್ಸವ್‌ ಸ್ಪೆಷಲ್‌ ಸೆಗೆ¾ಂಟ್‌ ಮುಖಾಂತರ ಕೆರಳದಾದ್ಯಂತ ನಾಸಿಕ ನಾದ ವಿಸ್ಮಯದ ಅಲೆ ಮೂಡಿಸಿತು. 

ಸುಮಾರು 3 ಗಂಟೆಗಳ ಕಾಲ ಸತತವಾಗಿ ಶಾಸ್ತ್ರೀಯ ಸಂಗೀತ, ಜಾನಪದ ಗೀತೆ, ಮೆಲಡಿ ಹಾಡುಗಳೂ ಸೇರಿದಂತೆ ನೂರಾರು ಸಿನಿಮಾ ಹಾಡುಗಳನ್ನೂ ನುಡಿಸಬಲ್ಲ ಅಂಬಿಕಾ ಅವರು ನಾಟಕ ಗೀತೆಗಳನ್ನೂ ತನ್ನ ನಾಸಿಕದ ಮೂಲಕ ನುಡಿಸಿ ವಿಸ್ಮಯವನ್ನುಂಟುಮಾಡಿದ್ದಾರೆ. ಆಧುನಿಕ ಅಬ್ಬರದ ಸಿನಿಮಾ ಹಾಡುಗಳನ್ನು ನುಡಿಸುವುದು ಸ್ವಲ್ಪ ಕಷ್ಟವಾದರೂ ಸÒಷ್ಟವಾಗಿ ನುಡಿಸುವ ಇವರ ಸಾಧನೆಗೆ ಸಾಟಿಯಿಲ್ಲ. ಅಯ್ಯಂಗಾವ್‌ ಅಯ್ಯಪ್ಪ ಕ್ಷೇತ್ರದಲ್ಲಿ ಅಂಬಿಕಾ ಅವರನ್ನು ಅಭಿನಂ ದಿಸಿ ಗೌರವಿಸಿದ ಕ್ಷಣ ಜೀವನದಲ್ಲಿ ಮರೆಯಲಾಗದ ನೆನಪನ್ನು ನೀಡಿದೆ ಎನ್ನುವ ಈ ಸಾಧಕಿಯನ್ನು ಮಂಜೇಶ್ವರದಲ್ಲಿ ಜರುಗಿದ ಪಾಲಿಯೇಟಿವ್‌ ಮಿತ್ರಸಂಗಮ ಕಾರ್ಯಕ್ರಮದಲ್ಲಿ ಮಂಜೇಶ್ವರ ಬ್ಲಾಕ್‌ ಪಂಚಾಯತ್‌ ಅಧ್ಯಕ್ಷ ಎ.ಕೆ.ಆಶ್ರಫ್‌ ಸ್ಮರಣಿಕೆ ನೀಡಿ ಅಭಿನಂ ದಿಸಿದ್ದಾರೆ.
ಈಕೆ ಉದ್ಯೋಗ ಖಾತರಿ ಯೋಜನೆಯ ಲೆಕ್ಕ ಪರಿಶೋಧಕಿಯಾಗಿರುವ ಅಂಬಿಕಾ ಅವರ ಪತಿ ಪ್ರಸನ್ನಕುಮಾರ್‌ ಕೈಗಾರಿಕೋದ್ಯಮಿಯಾಗಿದ್ದಾರೆ. ಹಿರಿಯ ಪುತ್ರಿ  ಅ±ರ್ಣಾ ಸಿ.ಎ. ವಿದ್ಯಾರ್ಥಿ ಹಾಗೂ ಅನುಪಮಾ ಮುಳ್ಳೇರಿಯ ವಿದ್ಯಾಶ್ರೀ ಶಿಕ್ಷಣ ಕೇಂದ್ರದಲ್ಲಿ 8ನೇ ತರಗತಿ ಓದುತ್ತಿದ್ದಾಳೆ. ಮನೆಯವರ ಪ್ರೋತ್ಸಾಹವೇ ತನ್ನ ಈ ಸಾಧನೆಗೆ ಕಾರಣ ಎನ್ನುವ ಅಂಬಿಕಾ ತನಗೆ ಸದಾ ಬೆಂಬಲವಾಗಿ ನಿಂತ ಕುಟುಂಬಶ್ರೀ  ಸದಸ್ಯರಿಗೂ ತಾನು ಅಭಾರಿ ಎನ್ನುತ್ತಾರೆ.

ಗೌರವ ಸಿಗ ಉವಂತಾಗಲಿ
ಈ ರೀತಿಯ ವಿಶಿಷ್ಟವಾದ ಸಂಗೀತ ಸಾಧಕರು ನಮ್ಮ ದೇಶದಲ್ಲಿ ಯಾರೂ ಇಲ್ಲವೆಂದೇ ನನ್ನ ಭಾವನೆ. ವರದಾನವಾಗಿ ಲಭಿಸಿದ ಈ ಕಲಾನೈಪುಣ್ಯಕ್ಕೆ  ಸರಿಯಾದ ಗೌರವಾಧಾರಗಳು ದೊರೆಯುವಂತಾಗಬೇಕು. ಗಡಿನಾಡಿನ ಈ ಮಿಮಿಕ್ರಿ ಕಲಾವಿದೆಯ ಹೆಸರು ಗಿನ್ನಿಸ್‌ ಪುುಸ್ತಕದಲ್ಲಿ ಸೇರುವಂತಾಗಲಿ.

– ಸರಿತಾ ಮಲ್ಲ, ಮಿಮಿಕ್ರಿ ಕಲಾವಿದೆ

ಅಡಿಶನ್‌ ಇಂದು
ಪ್ಲವರ್ ಚಾನಲ್‌ ನಡೆಸುವ ಕಾಮಿಡಿ ಉತ್ಸವದ ಅಡಿಶನ್‌ ಜ.2 ರಂದು ಕಾಸರ ಗೋಡಿನ ಮುಳಿಯಾರು ಬೋವಿಕ್ಕಾನದ ಪಾಂಚಜನ್ಯ ಅಡಿಟೋರಿಯಂನಲ್ಲಿ ನಡೆಯ ಲಿದೆ. ಅಸಾಮಾನ್ಯ ಪ್ರತಿಭೆಗಳಿಗೆ ಅವಕಾಶ ವಿದ್ದು ವಿಶಿಷ್ಟ ರೀತಿಯ ಕಲಾ ಸಾಧಕರು ಇದರ ಪ್ರಯೋಜನವನ್ನು ಪಡೆಯ ¸ಹುದಾ ಗಿದೆ. ಬೆಳಗ್ಗೆ 9ಕ್ಕೆ ಹೆಸರು ನೋಂದಾ ವಣೆ ಪ್ರಾರಂಭವಾಗುವುದು. 
ಹೆಚ್ಚಿನ ಮಾಹಿತಿಗಾಗಿ ಈ ದೂರವಾಣಿ ಸಂಖ್ಯೆಗಳಲ್ಲಿ ಸಂಪರ್ಕಿಸಬಹುದಾಗಿದೆ. 9847428729, 9495829139.

– ಅಖೀಲೇಶ್‌ ನಗುಮುಗಂ

Advertisement

Udayavani is now on Telegram. Click here to join our channel and stay updated with the latest news.

Next