Advertisement

ಅಂಬಿಗರ ಚೌಡಯ್ಯ ಮಹಾನ್‌ ಮಾನವತಾವಾದಿ; ಜಿಲ್ಲಾಧಿಕಾರಿ ಡಾ|ಔದ್ರಾಮ್‌

05:03 PM Jan 22, 2021 | Nagendra Trasi |

ವಿಜಯಪುರ: ಜಾತಿ ರಹಿತ ಸಮಾನತೆ ತತ್ವಗಳ ಮೇಲೆ ಸಮಾಜದ ಎಲ್ಲರೂ ಬದುಕಬೇಕು ಎಂಬುದನ್ನು ತಮ್ಮ ವೈಚಾರಿಕ ವಚನಗಳ ಮೂಲಕ ಸಾರಿದ ಮಹಾನ್‌ ವಚನಕಾರ ಅಂಬಿಗರ ಚೌಡಯ್ಯ ಎಂದು ಅಪರ ಜಿಲ್ಲಾಧಿಕಾರಿ ಡಾ| ಔದ್ರಾಮ್‌ ಬಣ್ಣಿಸಿದರು. ಜಿಲ್ಲಾಧಿ ಕಾರಿ ಕಚೇರಿಯಲ್ಲಿ ಗುರುವಾರ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಪ್ರಯುಕ್ತ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.

Advertisement

ಅಂಬಿಗರ ಚೌಡಯ್ಯ ಶರಣರು ನೇರ ನುಡಿ ಮೂಲಕ ಸರಳ ಭಾಷೆಯಲ್ಲಿ ಸಮಾಜದ ಓರೆ ಕೋರೆ ತಿದ್ದಿದವರು. ಜಾತಿ, ಮತ, ಪಂಥಗಳ ಭೇದ ಸರಿಸಿ ಸರ್ವರನ್ನೂ ಒಂದುಗೂಡಿಸುವಲ್ಲಿ ಶ್ರಮಿಸಿದರು. ಮಾನವ ಸಮುದಾಯದಲ್ಲಿ ಮನುಜ ಜಾತಿ ಮಾತ್ರ, ಗಂಡು-ಹೆಣ್ಣು ಎರಡು ಲಿಂಗಗಳು ಮಾತ್ರ, ಎರಡು ಲಿಂಗಗಳಿದ್ದರೂ ಭೇದವಿಲ್ಲ, ಎಲ್ಲರೂ ಸಮಾನರು ಎಂದು ಎಂದು ಸಾರಿದ ಮಹಾನ್‌ ಮಾನವತಾವಾದಿ ಶರಣರಾಗಿದ್ದರು. ಆದ್ದರಿಂದಲೇ ಅವರ ವಚನಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು.

ವಿದ್ಯಾವತಿ ಅಂಕಲಗಿ ಮಾತನಾಡಿ, ಕಲ್ಯಾಣ ಕ್ರಾಂತಿಯ ರೂವಾರಿಯಾದ ಸಾಮಾಜಿಕ ಸಮಾನತೆ ಹರಿಕಾರ ಬಸವೇಶ್ವರರದಿಂದಲೇ ಅಂಬಿಗರ ಚೌಡಯ್ಯ ಶರಣರು ನಿಜಶರಣ ಎಂದು ಕರೆಸಿಕೊಂಡವರು. ತಮ್ಮ ವಚನಗಳ ಮೂಲಕ ಸಾಮಾಜಿಕ ನ್ಯಾಯ ಎತ್ತಿ ಹಿಡಿದ ಮಹಾನ್‌ ಶರಣ ಅಂಬಿಗರ ಚೌಡಯ್ಯ ಎಂದು
ಹೇಳಿದರು.

ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈರಪ್ಪ ಆಶಾಪುರ, ಹನಮಂತಪ್ಪ ದೇವಣಗಾಂವ್‌, ಸಾಹೇಬಗೌಡ ಬಿರಾದಾರ, ಶಿವಾನಂದ ಅಂಬಿಗೇರ, ಎಸ್‌.ಎನ್‌ ಕಣಬೂರ, ಗುರುನಾಥ ಅಂಬಿಗೇರ, ಧರ್ಮರಾಜ ವಾಲಿಕಾರ, ಸತೀಶ, ಶ್ರೀಮಂತ ಝಳಕಿ, ಅಭಿಲಾಷ ಅಂಬಿಗೇರ,
ಶ್ರೀ ನಾಟಿಕಾರ, ಸೋಮನಗೌಡ ಕಲ್ಲೂರ, ಭೀಮರಾಯ ಜಿಗಜಿಣಗಿ, ಗಿರೀಶ ಕುಲಕರ್ಣಿ, ಉಮೇಶ ರಾಠೊಡ, ಮಹಾದೇವ ಗದ್ಯಾಳ, ಶ್ರೀನಾಥ ಪೂಜಾರಿ, ಹನಮಂತ ತೊನಶ್ಯಾಳ, ಅಮೋಘ ಲೋಗಾಂವಿ, ಅರವಿಂದ ಕೋಲಕಾರ, ಸುಭಾಷ ಹೊರ್ತಿ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next