Advertisement

ಮುಂಬಯಿಯಲ್ಲಿ “ಅಂಬರ್‌ ಕ್ಯಾಟರರ್ಸ್‌’ತುಳು ಸಿನೆಮಾ

10:51 AM Feb 01, 2018 | Team Udayavani |

ಮುಂಬಯಿ: ಮುಂಬಯಿ ಯಾದ್ಯಂತ ನೆಲೆಯಾಗಿರುವ ಕರಾವಳಿ ಜನತೆ ಕಳೆದೊಂದು ವರ್ಷದಿಂದ ಕಾತರದಿಂದ ನಿರೀಕ್ಷಿಸುತ್ತಿರುವ ಕಡಂದಲೆ ಸುರೇಶ್‌ ಎಸ್‌. ಭಂಡಾರಿ ನಿರ್ಮಾಪಕ ತ್ವದ ನಾಗೇಶ್ವರ ಸಿನಿ ಕ್ರಿಯೇಷನ್ಸ್‌ ಲಾಂಛನದಡಿಯಲ್ಲಿ ನಿರ್ಮಾಣಗೊಂಡ  ಅವಿಭಜಿತ ಜಿಲ್ಲೆಯಾದಾದ್ಯಂತ ತೆರೆಕಂಡು ಸಿನಿ ಪ್ರೇಮಿಗಳ ಮನಗೆದ್ದು ನಿರಂತರ ಐವತ್ತಕ್ಕೂ ಅಧಿಕ ದಿನಗಳಿಂದ ಪ್ರದರ್ಶಿಸಲ್ಪಡುವ ತುಳು ಹಾಸ್ಯ ರಸಪ್ರಧಾನ “ಅಂಬರ್‌  ಕ್ಯಾಟರರ್ಸ್‌’ ಸಿನೆಮಾ ಇದೀಗ ಮುಂಬಯಿ ಸಿನೆಮಾ ಮಂದಿರಗಳಲ್ಲಿ ತೆರೆಕಾಣಲು ಸಜ್ಜಾಗಿದೆ.

Advertisement

ಫೆ. 4ರಂದು ಬೆಳಗ್ಗೆ  9.15ರಿಂದ  ಉಪನಗರ ಥಾಣೆ ಪೂರ್ವದ ಆನಂದ್‌ ಟಾಕೀಸ್‌ನಲ್ಲಿ ಪ್ರಥಮ ಪ್ರದರ್ಶನ ತೆರೆಕಾಣಲಿದೆ ಎಂದು ತೌಳವ ಸೂಪರ್‌ಸ್ಟಾರ್‌ ಬಿರುದಾಂಕಿತ ಚಿತ್ರದ ನಾಯಕನಟ ಸೌರಭ್‌ ಸುರೇಶ್‌ ಭಂಡಾರಿ ತಿಳಿಸಿದ್ದಾರೆ. ಫೆ. 11ರಂದು  ಬೆಳಗ್ಗೆ 9.15ರಿಂದ  ಉಪನಗರ ಥಾಣೆ ಪೂರ್ವದ ಆನಂದ್‌ ಟಾಕೀಸ್‌ನಲ್ಲಿ ಹಾಗೂ ಬೆಳಗ್ಗೆ 9.15ರಿಂದ  ತಿಲಕ್‌ ಟಾಕೀಸ್‌ ಡೊಂಬಿವಲಿ ಪೂರ್ವ ಮತ್ತು ಬೆಳಗ್ಗೆ 9.15 ಗಂಟೆಗೆ ಮೆಹುಲ್‌ ಟಾಕೀಸ್‌ ಮುಲುಂಡ್‌ ಪಶ್ಚಿಮ ಇಲ್ಲಿ ಪ್ರದರ್ಶನಗೊಳ್ಳಲಿದೆ.

ಈ ಚಿತ್ರವನ್ನು ಬೃಹನ್ಮುಂಬಯಿ ಯಲ್ಲಿನ ಲಕ್ಷಾಂತರ ಜನತೆ ವೀಕ್ಷಿಸುತ್ತಾ   ನೂರಾರು ದಿನ ಪ್ರದರ್ಶನ ಕಾಣುವಂತಾಗಬೇಕು. ಕೋಸ್ಟಲ್‌ವುಡ್‌ ರಂಗದ ಜನಪ್ರಿಯ, ಸರ್ವೋತ್ಕೃಷ್ಟ ಚಿತ್ರವಾಗಿ ಮೂಡುತ್ತಾ ಸಮಗ್ರ ಜನರ ಮನಮನೆಗಳಲ್ಲಿ ಕಂಗೊಳಿಸುವಂತಾಗಬೇಕು. ಆವಾಗಲೇ ಮುಂದಿನ ಸಿನೆಮಾ ನಿರ್ಮಾಣಕ್ಕೆ ಪ್ರೋತ್ಸಾಹ ಲಭಿಸುವಂತಾಗುವುದು ಎಂದು ಚಿತ್ರ ನಿರ್ಮಾಪಕ ಕಡಂದಲೆ ಸುರೇಶ್‌ ಎಸ್‌. ಭಂಡಾರಿ ತಿಳಿಸಿದ್ದಾರೆ.  “ಅಂಬರ್‌ ಕ್ಯಾಟರರ್ಸ್‌’ ತುಳು ಸಿನೆಮಾ ಮೂಲಕ ಚಲನಚಿತ್ರಕ್ಕೆ ತನ್ನ ಸುಪುತ್ರ, ಪ್ರತಿಭಾನ್ವಿತ ಉದಯೋನ್ಮುಖ ಕಲಾವಿದ ಸೌರಭ್‌ ಭಂಡಾರಿ ಅವರನ್ನು ಪರಿಚಯಿಸಿರುವೆ. ತಾವೆಲ್ಲರೂ ಅತ್ಯಧಿಕ  ಸಂಖ್ಯೆಯಲ್ಲಿ ಈ ಚಿತ್ರವನ್ನು ಹಾರೈಸಬೇಕು ಎಂದು ನಿರ್ಮಾಪಕ ಕಡಂದಲೆ ಸುರೇಶ್‌ ಎಸ್‌. ಭಂಡಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next