Advertisement

ಅಂಬೇಡ್ಕರ್‌ ಚಿಂತನೆಗಳೇ ದೇಶದ ಸಂಪತ್ತು

02:17 PM Dec 07, 2019 | Team Udayavani |

ಮೈಸೂರು: ಪ್ರಸ್ತುತ ನಮ್ಮ ದೇಶಕ್ಕೆ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಚಿಂತನೆಗಳು ಸಂಪತ್ತಾಗಿದ್ದು, ನಾವೆಲ್ಲರೂ ಅದರ ನೈತಿಕ ವಾರಸುದಾರ ರಾಗಿದ್ದೇವೆ ಎಂದು ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಜಿ.ಹೇಮಂತ ಕುಮಾರ್‌ ಹೇಳಿದರು.

Advertisement

ಮೈವಿವಿ ಡಾ.ಬಿ.ಆರ್‌. ಅಂಬೇಡ್ಕರ್‌ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ದಲ್ಲಿ ನಡೆದ ಅಂಬೇಡ್ಕರ್‌ ಪರಿನಿಬ್ಟಾಣ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನೈತಿಕತೆಗೆ ಮತ್ತೂಂದು ಹೆಸರೇ ಬಾಬಾಸಾಹೇಬರು. ಇಂದು ಎಲ್ಲಾ ರಂಗದಲ್ಲೂ ಅಧಃಪತನವನ್ನು ಕಾಣುವಂತ ಸ್ಥಿತಿಗೋಚರ ಗೊಂಡಿದೆ. ಮೌಲ್ಯಗಳ ಅಧಃಪತನವೇ ರಾಷ್ಟ್ರಗಳ ಬಲಹೀನತೆಯ ಲಕ್ಷಣ. ಮಾನವ ಅಭಿವೃದ್ಧಿಯೇ ಇದಕ್ಕೆಲ್ಲ ಪರಿಹಾರ ಎಂದರು.

ವಿದ್ಯಾರ್ಥಿಗಳಿಗೆ ದಾರಿ ದೀಪ: ಜಗತ್ತಿನ ಆಧುನಿಕ ಇತಿಹಾಸದಲ್ಲಿ ಚಾರಿತ್ರಿಕ ವಾದಂತಹ ವ್ಯಕ್ತಿತ್ವ ಡಾ.ಬಿ.ಆರ್‌. ಅಂಬೇಡ್ಕರ್‌ ಅವರದ್ದು. ಇಡೀ ಜಗತ್ತೇ ಇಂದು ಅವರ ಚಿಂತನೆಗಳ ಕಡೆಗೆ ನೋಡುತ್ತಿದೆ. ಅಕ್ಷರ ವಂಚಿತ ಸಮುದಾಯದಿಂದ ಬಂದು ವಿಶ್ವಜ್ಞಾನಿಯಾಗಿ ರೂಪುಗೊಂಡಂಥ ಅವರ ಶ್ರಮ, ಹೋರಾಟ ಮತ್ತು ವ್ಯಕ್ತಿತ್ವ ಇಂದಿನ ವಿದ್ಯಾರ್ಥಿಗಳಿಗೆ ದಾರಿದೀಪವಾಗಬೇಕು ಎಂದು ಸಲಹೆ ನೀಡಿದರು.

ಅಜ್ಞಾನದಿಂದ ಜ್ಞಾನದ ಕಡೆಗೆ: ಶಿಕ್ಷಣದ ಏಕಸ್ವಾಮ್ಯತೆಯನ್ನು ಮುರಿದು ಎಲ್ಲರಿಗೂ ಶಿಕ್ಷಣದ ಮೂಲಕ ಬಿಡು ಗಡೆಯ ಕ್ರಾಂತಿಯನ್ನು ಮೊಳಗಿಸುವ ಮೂಲಕ ಅಜ್ಞಾನದಿಂದ ಜ್ಞಾನದಕಡೆಗೆ, ಸಂಕೋಲೆಯಿಂದ ಸ್ವಾತಂತ್ರ್ಯದೆಡೆಎಗೆ ಹಾಗೂ ಅಸಮಾನತೆಯಿಂದ ಸಮಾನತೆ ಯೆಡೆಗೆ ನಡೆದು ಬಂದ ದಾರಿಯನ್ನು ಇಂದು ಯುವಜನರು ಮತ್ತು ವಿದ್ಯಾರ್ಥಿಗಳು ಅನುಸರಿಸುವ ಸಂಕಲ್ಪ ದಿನವಾಗಬೇಕು ಎಂದರು.

ವಿವಿಗಳಲ್ಲಿ ಕ್ರಿಯಾಶೀಲತೆ ಇರಲಿ: ವಿಶ್ವ ಬ್ಯಾಂಕ್‌ ಮಾನವ ಅಭಿವೃದ್ಧಿ ಬಗ್ಗೆ ಚಿಂತಿಸುವುದಕ್ಕಿಂತ ಮೊದಲು ಅಂಬೇಡ್ಕರ್‌ ಚಿಂತಿಸಿದ್ದರು. ಯಾವ ವ್ಯಕ್ತಿ ನೈತಿಕವಾಗಿ ಬಲಗೊಂಡಿರುತ್ತಾನೋ ಆ ವ್ಯಕ್ತಿಯ ಕುಟುಂಬ, ಸಮಾಜ ಮತ್ತು ರಾಷ್ಟ್ರಬಲಗೊಂಡಿರುತ್ತದೆ. ಬಾಲ್ಯದಿಂದ ಮುಪ್ಪಿನವರೆಗೂ ನೈತಿಕತೆಯನ್ನು ಒಳಗೊಂಡು ಸದೃಢ ಮನಸ್ಸುಗಳು ಇಂದು ಭಾರತಕ್ಕೆ ಅಗತ್ಯವಿದೆ. ಇವು ಗಳನ್ನು ತಯಾರಿಸುವ ವಿವಿಗಳು ಬದ್ಧತೆ ಯಿಂದ, ಕ್ರಿಯಾಶೀಲತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

Advertisement

ಹುಟ್ಟಿನಿಂದಲೇ ಅಸ್ಪೃಶತೆ ತಿಳಿದಿದ್ದ ಅಂಬೇಡ್ಕರ್‌: ರಂಗಾಯಣ ಜಂಟ ನಿರ್ದೇಶಕ ವಿ.ಎನ್‌. ಮಲ್ಲಿಕಾರ್ಜುನಸ್ವಾಮಿ ಮಾತನಾಡಿ, ಅಂಬೇಡ್ಕರ್‌ ತಾವು ಅನುಭವಿಸಿದ ನೋವನ್ನು ಇತರರ ಅನುಭವಿಸಬಾರದೆನ್ನುವ ಕಾರಣಕ್ಕೆ ತ್ಯಾಗ ಮಾಡಿ ಹೋಗಿದ್ದಾರೆ. ಆಫ್ರಿಕಾಕ್ಕೆ ಹೋದ ಗಾಂಧೀಜಿಯವರನ್ನು ಅಲ್ಲಿನವರು ರೈಲಿನಿಂದ ಹೊರಗೆ ಹಾಕಿದಾಗ ಅಸ್ಪೃಶ್ಯತೆ ಗೊತ್ತಾಯಿತು. ಅದೇ ಅಂಬೇಡ್ಕರ್‌ಗೆ ಹುಟ್ಟುವಾಗಿನಿಂದಲೇ ಗೊತ್ತಾ ಗಿತ್ತು. ಹೀಗಾಗಿ ದುಂಡು ಮೇಜಿನ ಸಭೆಯಲ್ಲಿ ಅಸ್ಪೃಶ್ಯರ ಪರ ಅಂಬೇಡ್ಕರ್‌ ದನಿ ಎತ್ತಿದರು ಎಂದು ಸ್ಮರಿಸಿದರು.

ಇದೇ ವೇಳೆ ಅಂಬೇಡ್ಕರ್‌ ಕುರಿತ ಛಾಯಾಚಿತ್ರ ಪ್ರದರ್ಶನವನ್ನೂ ಆಯೋಜಿಸಲಾಗಿತ್ತು. ಅಂಬೇಡ್ಕರ್‌ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಸಂದರ್ಶಕ ಪ್ರಾಧ್ಯಾಪಕ ಬಸವರಾಜ ದೇವನೂರ, ಸಾಹಿತಿ ಡಾ... ಜವರಯ್ಯ, ಅಂಬೇಡ್ಕರ್‌ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ನಿರ್ದೇಶಕ ಡಾ.ಜೆ. ಸೋಮಶೇಖರ್‌, ಹೋರಟಗಾರ್ತಿ ಪದ್ಮಾಲಯ ನಾಗರಾಜ, ವಿದ್ಯಾಶ್ರಮ ಕಾಲೇಜು ಪ್ರಾಂಶುಪಾಲೆ ಎ.. ಖುಷಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next