Advertisement

ಅಂಬೇಡ್ಕರ್‌ ತತ್ವದ ಧಾಂಗಡಿ

06:00 AM Jul 06, 2018 | |

ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಕುರಿತಾಗಿ ಈಗಾಗಲೇ ಅನೇಕ ಸಿನಿಮಾಳು ಬಂದಿವೆ. ಕನ್ನಡ ಸೇರಿದಂತೆ ನಾನಾ ಭಾಷೆಗಳಲ್ಲಿ ಅವರ ಹಾದಿಯ ಕುರಿತಾದ ಸಿನಮಾಗಳು ಬಂದಿವೆ. ಈಗ ಆ ಸಾಲಿಗೆ ಹೊಸ ಸೇರ್ಪಡೆ “ಧಾಂಗಡಿ’. ಹೌದು, “ಧಾಂಗಡಿ’ ಎಂಬ ಚಿತ್ರವೊಂದು ಚಿತ್ರೀಕರಣ ಮುಗಿಸಿದ್ದು, ಚಿತ್ರ ಇಂದು ತೆರೆಕಾಣುತ್ತಿದೆ. ಅಂಬೇಡ್ಕರ್‌ ಅವರ ಜೀವನ, ಅವರ ಸಿದ್ಧಾಂತದ ಕುರಿತಾಗಿ ಈ ಸಿನಿಮಾ ಸಾಗುತ್ತದೆಯಂತೆ. ಶರತ್‌ ಈ ಸಿನಿಮಾದ ನಿರ್ದೇಶಕರು. ಆರಂಭದಲ್ಲಿ ಡಾ.ಸಿದ್ರಾಮ್‌ ಕಾರಣಿಕ ನಿರ್ದೇಶಕರಾಗಿದ್ದರು. ಆ ನಂತರ ಅವರ ಜಾಗಕ್ಕೆ ಶರತ್‌ ಬಂದಿದ್ದಾರೆ. 

Advertisement

ಶರತ್‌ ಅವರಿಗೆ ಈ ಪ್ರಾಜೆಕ್ಟ್ ಬಂದಾಗ, ತನ್ನ ಕೈಯಿಂದ ಈ ಸಿನಿಮಾ ಮಾಡಲು ಸಾಧ್ಯನಾ ಎಂದು ಯೋಚಿಸಿದರಂತೆ. ಆ ನಂತರ ಅಂಬೇಡ್ಕರ್‌ ಕುರಿತಾದ ಪುಸ್ತಕಗಳನ್ನು ಓದಿ, ಸಿನಿಮಾಕ್ಕೆ ಬೇಕಾದ ಅಂಶವನ್ನು ಸಂಗ್ರಹಿಸಿ ಸಿನಿಮಾ ಮಾಡಿದ್ದಾಗಿ ಹೇಳಿಕೊಂಡರು ಶರತ್‌. ಈ ಸಿನಿಮಾದ ಚಿತ್ರೀಕರಣ ಬೆಳಗಾವಿ ಸುತ್ತಮುತ್ತ ನಡೆದಿದೆ. ಅಮಾವಾಸ್ಯೆಯ ದಿನ ಆರಂಭವಾದ ಚಿತ್ರೀಕರಣಕ್ಕೆ ಅಮಾವಾಸ್ಯೆಯ ದಿನವೇ ಕುಂಬಳಕಾಯಿ ಒಡೆಯಲಾಗಿದೆ. ಈ ಮೂಲಕ ಚಿತ್ರ ಮೂಢನಂಬಿಕೆಯ ವಿರುದ್ಧ ಎಂಬುದನ್ನು ತೋರಿಸಿಕೊಟ್ಟಿದೆ. 

ಈ ಚಿತ್ರವನ್ನು ಸುರೇಂದ್ರ ಉಗಾರೆ ನಿರ್ಮಿಸಿದ್ದಾರೆ. ಅಂಬೇಡ್ಕರ್‌ ಅವರ ತತ್ವ-ಸಿದ್ಧಾಂತಗಳನ್ನು ಜನರಿಗೆ ತಿಳಿಯಪಡಿಸುವ ಉದ್ದೇಶದಿಂದ ಈ ಸಿನಿಮಾ ಮಾಡಿದ್ದಾಗಿ ಹೇಳಿಕೊಂಡರು ಅವರು. ಜೊತೆಗೆ ಮುಂದಿನ ದಿನಗಳಲ್ಲಿ ಗೌತಮ ಬುದ್ಧ ಹಾಗೂ ಟಿಪ್ಪು ಸುಲ್ತಾನ್‌ ಕುರಿತ ಸಿನಿಮಾ ಮಾಡುವುದಾಗಿ ಘೋಷಿಸಿದರು. ಈ ಚಿತ್ರದಲ್ಲಿ ಸಂಜು, ಬಿರಾದಾರ್‌, ಡಾ.ಸಿದ್ರಾಮ್‌ ಕಾರಣಿಕ, ಕನಕ ಲಕ್ಷ್ಮೀ, ಡಾ.ಸವಿತಾ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರಕ್ಕೆ ಪ್ರಮೋದ್‌ ಸಂಗೀತ ನೀಡಿದ್ದಾರೆ. ಚಿತ್ರವನ್ನು ವೆಂಕಟ್‌ ಸುಮಾರು 40ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next