Advertisement

ಅಂಬೇಡ್ಕರ್‌ ಕಂಡ ಕನಸು ಮೋದಿಯಿಂದ ನನಸು

01:03 PM Jul 04, 2022 | Team Udayavani |

ಸೇಡಂ: ಡಾ|ಬಾಬಾ ಸಾಹೇಬರು ದೇಶದ ಪ್ರಗತಿಯ ಬಗ್ಗೆ ತಮ್ಮದೇ ಆದ ಕನಸನ್ನು ಹೊತ್ತಿದ್ದವರು, ಅವರು ಕಂಡ ಕನಸುಗಳನ್ನು ಇಂದು ಪ್ರಧಾನಿ ಮೋದಿ ನನಸು ಮಾಡುವತ್ತ ಹೆಜ್ಜೆಯನ್ನಿಡುತ್ತಿದ್ದಾರೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಡಿಸಿಸಿ ಬ್ಯಾಂಕ್‌ ಅಧ್ಯಕ್ಷರೂ ಆದ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಹೇಳಿದರು.

Advertisement

ಪಟ್ಟಣದ ಕಲಬುರಗಿ ರಸ್ತೆಯಲ್ಲಿರುವ ಪೂರ್ಣಾನಂದ ಹೋಟೆಲ್‌ನಲ್ಲಿ ಭಾನುವಾರ ಬಿಜೆಪಿ ತಾಲೂಕು ಎಸ್ಸಿ ಮೋರ್ಚಾ ಆಯೋಜಿಸಿದ್ದ ಕಾರ್ಯಕಾರಣಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಬಾಬಾ ಸಾಹೇಬರ ಹೆಸರಿನ ಮೇಲೆ ಹತ್ತಾರು ವರ್ಷಗಳ ಕಾಲ ಅಧಿಕಾರ ಅನುಭವಿಸಿದ ಕಾಂಗ್ರೆಸ್‌, ಅವರ ಯಾವುದೇ ಆಶಯ ಈಡೇರಿಸಿಲ್ಲ. ತಮ್ಮ ಸ್ವಾರ್ಥಕ್ಕಾಗಿಯೇ ಅವರ ಹೆಸರು ಬಳಸಿಕೊಂಡರೆ ವಿನಃ ಅವರ ಬಯಸಿದ ಭಾರತ ನಿರ್ಮಾಣ ಮಾಡಲಿಲ್ಲ ಎಂದು ದೂರಿದರು.

ದೇಶದ ಸಂವಿಧಾನ ನಿರ್ಮಾತೃ ಡಾ|ಬಿ.ಆರ್‌.ಅಂಬೇಡ್ಕರವರ ಸ್ಮಾರಕಗಳ ಅಭಿವೃದ್ಧಿಗೆ ಪಂಚ ಪವಿತ್ರ ಸ್ಥಳಗಳ ಅಭಿವೃದ್ಧಿಯ ಹೆಸರಿನಲ್ಲಿ ಒತ್ತು ನೀಡಿದ್ದು ಮೋದಿ ನೇತೃತ್ವದ ಬಿಜೆಪಿ ಸರ್ಕಾರ. ನರೇಂದ್ರ ಮೋದಿಯವರು ಈ ದೇಶದ ಪ್ರಧಾನಿ ಆಗಿ ಅಧಿಕಾರ ವಹಿಸಿಕೊಂಡು ಬಾಬಾ ಸಾಹೇಬರ ಕನಸಿನ ಭಾರತ ನಿರ್ಮಾಣ ಮಾಡುತ್ತಿದ್ದಾರೆ. ಇದನ್ನು ಪ್ರತಿಯೊಬ್ಬರು ಅರಿತುಕೊಳ್ಳುವುದು ಅವಶ್ಯವಾಗಿದೆ ಎಂದರು.

ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಂಬಾ ರಾಯ ಅಷ್ಟಗಿ, ಕಾರ್ಯದರ್ಶಿ ನಾಮದೇವ ರಾಠೊಡ, ತಾಲೂಕು ಅಧ್ಯಕ್ಷ ಪರ್ವತರೆಡ್ಡಿ ಪಾಟೀಲ, ತಾಲೂಕು ಪ್ರಭಾರಿ ಧರ್ಮಣ್ಣ ಇಟಗಾ ಮಾತನಾಡಿದರು.

Advertisement

ಡಿಸಿಸಿ ಬ್ಯಾಂಕ್‌ ನಿರ್ದೇಶಕ ಕಲ್ಯಾಣಪ್ಪ ಪಾಟೀಲ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಾಗಪ್ಪ ಕೊಳ್ಳಿ, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಲಕ್ಷೀನಾರಾಯಣ ಚಿಮ್ಮನಚೋಡಕರ್‌, ತಿರುಪತಿ ಶಹಬಾದಕರ್‌, ಶರಣು ಮೆಡಿಕಲ್‌, ಮುಕುಂದ ದೇಶಪಾಂಡೆ, ಆನಂದ ಚಂದಾಪೂರ, ರವಿ ಭಂಟನಹಳ್ಳಿ, ರಾಜು ಕಟ್ಟಿ, ಮಾಣಿಕಗೌತಂ, ಲಕ್ಷ್ಮಣ ಮಂತ್ರಿ, ಲಾಲಪ್ಪ ಕಟ್ಟಿಮನಿ, ಮಲ್ಲಿಕಾರ್ಜುನ ಪಾಳಾದಿ ಸೇರಿದಂತೆ ಅನೇಕರಿದ್ದರು. ಶರಣು ಕೆರಳ್ಳಿ ಪ್ರಾರ್ಥಿಸಿದರು. ಎಸ್ಸಿ ಮೋರ್ಚಾ ತಾಲೂಕು ಅಧ್ಯಕ್ಷ ವಿಜಯಕುಮಾರ ಶರ್ಮಾ ಸ್ವಾಗತಿಸಿದರು, ತಾಲೂಕು ಪ್ರಧಾನ ಕಾರ್ಯದರ್ಶಿ ಓಂಪ್ರಕಾಶ ಪಾಟೀಲ ನಿರೂಪಿಸಿದರು. ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಜಯರಾಜ ಕೊಂಡಪಳ್ಳಿ ವಂದಿಸಿದರು.

ಕಷ್ಟದಲ್ಲಿದ್ದ ಅನ್ನದಾತರ ಕಣ್ಣಿರು ಒರೆಸುವ ಕೆಲಸ ನಾವು ಮಾಡುತ್ತಿದ್ದೇವೆ. ರೈತರನ್ನು ಸಿರಿವಂತರಾಗಿ ಮಾಡುವ ಕನಸು ನಾವು ಇಟ್ಟಿದ್ದರೆ. ಇದನ್ನು ಸಹಿಸಿಕೊಳ್ಳಲು ಆಗದ ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲರು ನಾವು ಭ್ರಷ್ಟಾಚಾರ ಮಾಡುತ್ತಿದ್ದೇವೆ ಎಂದು ಆರೋಪ ಮಾಡುತ್ತಿದ್ದಾರೆ. ಅವರು ತಮ್ಮ ಅವಧಿಯಲ್ಲಿ ಹೇಗೆಲ್ಲ ಭ್ರಷ್ಟಾಚಾರ ಮಾಡಿದ್ದಾರೆ ಎನ್ನುವ ಪಟ್ಟಿ ನಮ್ಮಲ್ಲಿಯೂ ಇದೆ ಸಮಯ ಬಂದಾಗ ಹೇಳುತ್ತೇನೆ. ರಾಜಕುಮಾರ ಪಾಟೀಲ ತೆಲ್ಕೂರ, ಶಾಸಕ ಸೇಡಂ.

Advertisement

Udayavani is now on Telegram. Click here to join our channel and stay updated with the latest news.

Next