Advertisement

ಸ್ವಾಭಿಮಾನ ಜೀವನಕ್ಕೆ ದಾರಿ ತೋರಿದ ಅಂಬೇಡ್ಕರ್‌

07:00 PM Apr 16, 2021 | Team Udayavani |

ಯಾದಗಿರಿ: ಡಾ| ಬಿ.ಆರ್‌. ಅಂಬೇಡ್ಕರ್‌ ನಮಗೆ ಸ್ವಾಭಿಮಾನದಿಂದ ಜೀವನ ಸಾಗಿಸುವ ಮಾರ್ಗ ತೋರಿಸಿಕೊಟ್ಟಿದ್ದು ಅವರು ರಚಿಸಿದ ಸಂವಿಧಾನದಲ್ಲಿ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ನೀಡಿದೆ ಎಂದು ಗುರುಮಠಕಲ್‌ ಖಾಸಾಮಠದ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮಿಗಳು ಹೇಳಿದರು.

Advertisement

ಡಾ| ಅಂಬೇಡ್ಕರ್‌ ವೃತ್ತದಲ್ಲಿ ಅಂಬೇಡ್ಕರ್‌ ಜಯಂತ್ಯುತ್ಸವ ಸಮಿತಿಯಿಂದ ಹಮ್ಮಿಕೊಂಡಿದ್ದ ಡಾ| ಬಿ.ಆರ್‌. ಅಂಬೇಡ್ಕರ್‌ ಅವರ 130ನೇ ಜಯಂತ್ಯುತ್ಸವದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಮಾಜಿ ಶಾಸಕ ಡಾ| ವೀರಬಸವಂತರೆಡ್ಡಿ ಮುದ್ನಾಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶಕ್ಕೆ ಸಂವಿಧಾನವೆಂಬ ಮಹಾನ್‌ ಗ್ರಂಥ ನೀಡಿದ ವಿಶ್ವರತ್ನ ಡಾ| ಬಿ.ಆರ್‌. ಅಂಬೇಡ್ಕರ್‌ ಮಹಾ ಮಾನವತಾವಾದಿ. ದೇಶದಲ್ಲಿ ಈ ಹಿಂದೆ ಬೇರೂರಿದ್ದ ಅಸ್ಪೃಶ್ಯತೆಯನ್ನು ಸಂವಿಧಾನದ ಮೂಲಕ ಹೋಗಲಾಡಿಸುವಲ್ಲಿ ಅಂಬೇಡ್ಕರ್‌ ವಹಿಸಿದ್ದ ಪಾತ್ರ ಅತ್ಯಂತ ಮಹತ್ವದ್ದು ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್‌ ಮಾಜಿ ಸದಸ್ಯ ಚೆನ್ನಾರಡ್ಡಿ ಪಾಟೀಲ್‌ ತುನ್ನೂರ, ಜೆಡಿಎಸ್‌ ರಾಜ್ಯ ಸಂಘಟನಾ ಕಾರ್ಯದರ್ಶಿ ಹನಮೇಗೌಡ ಬೀರನಕಲ್‌, ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಎಂ. ಈಟೆ, ನಗರಸಭೆ ಉಪಾಧ್ಯಕ್ಷೆ ಪ್ರಭಾವತಿ ಕಲಾಲ್‌, ಸದಸ್ಯರಾದ ಚನ್ನಕೇಶವಗೌಡ ಬಾಣತಿಹಾಳ, ಬಸಪ್ಪ ಕುರಕುಂಬಳ, ಸ್ವಾಮಿದೇವ ದಾಸನಕೇರಿ, ಮಂಜುನಾಥ ದಾಸನಕೇರಿ, ಪ್ರಮುಖರಾದ ಮಲ್ಲಣ್ಣ ದಾಸನಕೇರಿ, ಸ್ಯಾಮಸನ್‌ ಮಾಳಿಗೇರಿ, ಸಾಬಣ್ಣ ಸುಂಗಲಕರ್‌, ಗೋಪಾಲ ತಳಗೇರಿ, ಮಲ್ಲಿನಾಥ ಸುಂಗಲಕರ್‌ ಇತರರು ಇದ್ದರು. ಮರೆಪ್ಪ ಚಟ್ಟೇರಕರ್‌ ನಿರೂಪಿಸಿದರು. ಮಂಜುನಾಥ ಗುರುಸಣಗಿ ಸ್ವಾಗತಿಸಿದರು.
ಶ್ರೀಕಾಂತ ಸುಂಗಲಕರ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next