Advertisement

ಅಕ್ರಮ ಚಟುವಟಿಕೆ ತಾಣವಾದ ಅಂಬೇಡರ್‌ ಭವನ

05:04 PM Apr 14, 2022 | Team Udayavani |

ಕೋಲಾರ: ಸರ್ಕಾರ ಲಕ್ಷಾಂತರ ರೂ. ವೆತ್ಛ ಮಾಡಿ ನಿರ್ಮಿಸಿರುವ ಅಂಬೇಡ್ಕರ್‌ ಭವನ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿ ತನದಿಂದ ಅನಾಥವಾಗಿ ಅನೈತಿಕ ಚಟುವಟಿಕೆಗಳ ತಾಣವಾಗಿರುವುದು ಬೆಳಕಿಗೆ ಬಂದಿದೆ.

Advertisement

ಪ್ರತಿ ವರ್ಷವೂ ಪರಿಶಿಷ್ಟರ ಅಭಿವೃದ್ಧಿಗಾಗಿ ಸರ್ಕಾರ ಬಜೆಟ್‌ನಲ್ಲಿ ಕೋಟ್ಯಾಂತರ ರೂ.ಗಳನ್ನು ಘೋಷಿಸುತ್ತದೆ. ಅನುಷ್ಠಾನಾಧಿಕಾರಿಗಳ ನಿರ್ಲಕ್ಷ್ಯದಿಂದ ಈ ಪೈಕಿ ಸಾಕಷ್ಟು ಹಣ ವೆಚ್ಧಚ್ಚವಾಗದೆವಾಪಸಾಗುತ್ತದೆ. ವೆತ್ಛ ವಾಗಿರುವ ಕಾಮಗಾರಿಯೂ ಪೂರ್ಣಗೊಳ್ಳದೆ ನೆನೆಗುದಿಗೆ ಬೀಳುತ್ತದೆ. ಪರಿಶಿಷ್ಟರ ಕಲ್ಯಾಣಕ್ಕಾಗಿ ವಿನಿಯೋಗಿಸಬೇಕಾದ ಹಣ ಹೇಗೆ ವ್ಯರ್ಥವಾಗುತ್ತದೆ ಎನ್ನುವುದಕ್ಕೆ ಶ್ರೀನಿವಾಸಪುರ ತಾಲೂಕಿನ ಜನ್ನಘಟ್ಟ ಗ್ರಾಪಂ ವ್ಯಾಪ್ತಿಯ ಈಚಲ ದಿನ್ನೂರು ಗ್ರಾಮದ ಅಂಬೇಡ್ಕರ್‌ ಭವನ ಸಾಕ್ಷಿಯಾಗಿದೆ.

2017-18 ಸಾಲಿನಲ್ಲಿ ಜನ್ನಘಟ್ಟ ಗ್ರಾಪಂಗೆ ಪರಿಶಿಷ್ಟ ಸಮುದಾಯದ ವ್ಯಕ್ತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ತಮ್ಮ ಅವಧಿಯಲ್ಲಿ ಈಚಲ ದಿನ್ನೂರಿಗೆ ಅಂಬೇಡ್ಕರ್‌ ಭವನ ನಿರ್ಮಾಣ ಮಾಡುವ ಸಂಕಲ್ಪವನ್ನು ಅವರು ಮಾಡಿ ಮುಂದುವರೆದಿದ್ದರು. ಭವನ ನಿರ್ಮಾಣಕ್ಕೆ 10 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿತ್ತು. ಕರ್ನಾಟಕ ರೂರಲ್‌ ಇನ್‌ಫ್ರಾಸ್ಟ್ರಕ್ಚರ್‌ ಡೆವೆಲಪ್‌ ಮೆಂಟ್‌ ಲಿಮಿಟೆಡ್‌ನಿಂದ ಕಾಮಗಾರಿಯನ್ನು ನಿರ್ವ ಹಿಸಲಾಗಿದೆ. ಅಂತಿಮವಾಗಿ 2018 ಆ. 18ನಲ್ಲಿ ಭವನ ಕಾಮಗಾರಿ ಪೂರ್ಣಗೊಂಡಿದೆ ಎಂದು ಭವನವನ್ನು ಗ್ರಾಪಂಗೆ ಹಸ್ತಾಂತರಿಸಿ ಕೈತೊಳೆದುಕೊಳ್ಳಲಾಗಿದೆ.

ವಾಸ್ತವವಾಗಿ ಅಂಬೇಡ್ಕರ್‌ ಭವನದ ಕಾಮಗಾರಿ ಪೂರ್ಣಗೊಂಡೇ ಇರಲಿಲ್ಲ. ಭವನಕ್ಕೆ ಬಾಗಿಲು, ಕಿಟಕಿಗಳನ್ನು ಇಟ್ಟಿಲ್ಲ. ಕೇವಲ ಗೋಡೆಗಳ ನಿರ್ಮಾಣ ಮಾಡಿ ಭವನ ಕಾಮಗಾರಿ ಪೂರ್ಣಗೊಂಡಿದೆಯೆಂದು ನಂಬಿಸಿ ದಾಖಲೆಗಳನ್ನು ಸೃಷ್ಟಿಸಿ ಗ್ರಾಪಂಗೆ ಹಸ್ತಾಂತರ ಮಾಡಲಾಗಿದೆ. ಅಂಬೇಡ್ಕರ್‌ ಭವನಕ್ಕೆ ಮಂಜೂ ರಾಗಿದ್ದ ಸಿಮೆಂಟ್‌, ಕಂಬಿಗಳು ಹಾಗೂ ಬಾಗಿಲು, ಕಿಟಕಿಗಳನ್ನು ಗ್ರಾಪಂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಖಾಸಗಿ ಬಳಕೆಗೆ ಸಾಗಿಸಿದ್ದಾರೆಂಬ
ಆರೋಪವೂ ಇದೆ.

ಇದೀಗ ಅಂಬೇಡ್ಕರ್‌ ಭವನದ ಸುತ್ತಲೂ ಗಿಡಗಂಟಿಗಳು ಬೆಳೆದಿವೆ. ಭವನಕ್ಕೆ ಮುಂಬಾಗಿಲನ್ನು ತಾತ್ಕಾಲಿಕವಾಗಿ ಇಡಲಾಗಿದೆ. ಹಿಂಬಾಗಿಲು, ಕಿಟಕಿ ರೆಕ್ಕೆಗಳು
ಕಾಣಿಸುತ್ತಿಲ್ಲ. ಇಡೀ ಭವನಕ್ಕೆ ಸುಣ್ಣ ಬಣ್ಣ ಇಲ್ಲವಾಗಿದೆ. ಕನಿಷ್ಠ ಅಂಬೇಡ್ಕರ್‌ ಭವನ ಎಂಬುದಕ್ಕೆ ಭವನದಲ್ಲಿ ಕನಿಷ್ಠ ಚಟುವಟಿಕೆಗಳನ್ನು ನಡೆಸಿಲ್ಲ. ಧರ್ಮಸ್ಥಳ
ಸಂಘದ ಪದಾಧಿಕಾರಿಗಳು ಸಭೆ ನಡೆಸಲು ಇದೇ ಭವನವನ್ನು ಕೆಲ ದಿನಗಳ ಕಾಲ ಉಪಯೋಗಿಸಿದ್ದರು. ಆದರೆ, ಮೂಲ ಸೌಕರ್ಯಗಳಿಲ್ಲದ ಕಾರಣ ಅವರ
ಸಭೆಗೂ ಭವನ ಉಪಯೋಗವಾಗುತ್ತಿಲ್ಲ. ಈಗ ಭವನವು ಗ್ರಾಮದ ಕುಡುಕರ ಅನೈತಿಕ ಚಟು ವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಅಂಬೇಡ್ಕರ್‌
ಭವನಕ್ಕೆ 10 ಲಕ್ಷ ರೂ. ವೆತ್ಛ ಮಾಡಿದ್ದರೂ ಅದನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ಜನ್ನಘಟ್ಟ ಗ್ರಾಪಂ ಸಂಪೂರ್ಣ ವಿಫ‌ಲವಾಗಿದೆ.

Advertisement

ಇದೇ ಕ್ಷೇತ್ರದ ಶಾಸಕ ರಮೇಶ್‌ಕುಮಾರ್‌, ಜನ್ನಘಟ್ಟ ಗ್ರಾಪಂ ಈಗಿನ ಅಧ್ಯಕ್ಷರು ಹಾಗೂ ಪಿಡಿಒಗೆ ಅಂಬೇಡ್ಕರ್‌ ಭವನವನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ಆಸಕ್ತಿ ಇದ್ದಂತಿಲ್ಲ. ಅಂಬೇಡ್ಕರ್‌ ಜಯಂತಿ ಆಚರಿಸುತ್ತಿರುವ ಸಂದರ್ಭ ದಲ್ಲಾದರೂ ಹೀಗೆ ಅನಾಥವಾಗಿರುವ ಅಂಬೇಡ್ಕರ್‌ ಭವನವನ್ನು ದುರಸ್ತಿಪಡಿಸಿ ವಿವಿಧ ಚಟುವಟಿಕೆಗಳಿಗೆ ವಿನಿಯೋಗಿಸಲು ಸಂಬಂಧಪಟ್ಟ ಗ್ರಾಪಂ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮುಂದಾಗಬೇಕಿದೆ.

ಈಚಲ ದಿನ್ನೂರು ಗ್ರಾಮದಲ್ಲಿ ನಾಲ್ಕು ವರ್ಷಗಳ ಹಿಂದೆ ನಿರ್ಮಾಣ ಮಾಡಿ ಗ್ರಾಪಂಗೆ ಹಸ್ತಾಂತರ ಮಾಡಿರುವ ಅಂಬೇಡ್ಕರ್‌ ಭವನಕ್ಕೆ ದಿಕ್ಕು ದೆಸೆ ಇಲ್ಲವಾಗಿದೆ. ಭವನಕ್ಕೆ ಕಿಟಕಿ, ಬಾಗಿಲು ಇಲ್ಲದೆ ಅನಾಥವಾಗಿ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಗ್ರಾಪಂಗೆ ಈ ಬಗ್ಗೆ ಸಾಕಷ್ಟು ಬಾರಿ ದೂರಿದರು ಭವನ ಪುನಶ್ಚೇತನಕ್ಕೆ ಆಸಕ್ತಿವಹಿಸುತ್ತಿಲ್ಲ. ಇದರಿಂದ ಸರ್ಕಾರದ 10 ಲಕ್ಷ ರೂ. ಅನುದಾನ ಪೋಲಾಗಿದೆ.

●ಶೆಂಬಪ್ಪ, ತುರಾಂಡಹಳ್ಳಿ

ಕೆ.ಎಸ್‌.ಗಣೇಶ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next