ಮೈಸೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಭಾರತದ ಆಧುನಿಕ ಬುದ್ಧ ಎಂದು ಮೈಸೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ ಬಣ್ಣಿಸಿದರು.
ಮೈಸೂರು ಜಿಲ್ಲಾ ವೈಚಾರಿಕ ಚಿಂತಕರ ವೇದಿಕೆದಟ್ಟಗಳ್ಳಿಯ ಓಂ ಶ್ರೀ ಸಾಯಿ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಜನ್ಮ ದಿನಾಚರಣೆ ಹಾಗೂ ವಿಶ್ವ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಅಂಬೇಡ್ಕರ್ ಅವರು ತಮ್ಮ ಸಮಾನತೆ, ವೈಚಾರಿಕ ನಿಲುವುಗಳಿಂದ ಮಹಿಳಾ ಸಬಲೀಕರಣಕ್ಕೆ ಕಾರಣಕರ್ತರಾಗಿದ್ದಾರೆ. ಅಂಬೇಡ್ಕರ್ ಅವರು ಲೋಕಸಭೆಯಲ್ಲಿ ಮಂಡಿಸಿದ ಮಹಿಳಾ ಪರ ಮಸೂದೆ ಅಂಗೀಕಾರವಾಗದಿದ್ದಾಗ ಇದನ್ನು ಪ್ರತಿಭಟಿಸಿ ರಾಜೀನಾಮೆ ನೀಡಿದರು. ದೇಶದಲ್ಲಿ ಮಹಿಳೆಯರಿಗೆ ಲೋಕಸಭೆ, ವಿಧಾನಸಭೆಗಳಲ್ಲಿ ಶೇ.50ರಷ್ಟು ಮೀಸಲಾತಿ ಇನ್ನೂ ದೊರೆತಿಲ್ಲ. ಇದಕ್ಕಾಗಿ ಹೋರಾಟ ಆಗಬೇಕು ಎಂದರು.
ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ ಸಾನ್ನಿಧ್ಯ ವಹಿಸಿದ್ದರು. ಶ್ರೀ ನಟರಾಜ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ. ಶಾರದಾ ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ನಾಪೋಕ್ಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಡಾ.ಕಾವೇರಿ ಪ್ರಕಾಶ್, ವೇದಿಕೆ ಅಧ್ಯಕ್ಷ ಕ್ಯಾತನಹಳ್ಳಿ ಎಚ್. ಪ್ರಕಾಶ್, ಡಾ.ಎಂ.ಪಿ. ವರ್ಷ ಇದ್ದರು. ಶ್ರೀ ವೇದವ್ಯಾಸ ಸೇವಾ ಟ್ರಸ್ಟ್ ಅಧ್ಯಕ್ಷೆ ಪನ್ನಗ ವಿಜಯಕುಮಾರ್, ಸದಸ್ಯೆ ಕವಿತಾ ಶಿರೂರ್, ಸಮಾಜ ಸೇವಕಿ ಗಾಯತ್ರಿ ಪಾಂಡೂಜಿ ಮುಖ ಅತಿಥಿಗಳಾಗಿದ್ದರು.
ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಮನೋವಿಜ್ಞಾನ ವಿಭಾಗದ ಮುಖ್ಯಸ್ಥೆ ಪ್ರೊ. ಎಂ.ಎಸ್. ಮನೋನ್ಮಣಿ ಅವರಿಗೆ ಕರುನಾಡ ಮಹಿಳಾ ಸೇವಾಭೂಷಣ, ಓಂ ಶ್ರೀ ಸಾಯಿ ಸಂಸ್ಥೆ ಅಧ್ಯಕ್ಷೆ ಎಚ್ .ಪಿ. ರಾಣಿಪ್ರಭಾ ಅವರಿಗೆ ಕರುನಾಡ ಮಹಿಳಾ ಸೇವಾರತ್ನ, ಗಾಯಕಿ ಎಂ. ರಾಜೇಶ್ವರಿ ನಾಯಕ ಅವರಿಗೆ ಕರುನಾಡ ಮಹಿಳಾ ಗಾನಕೋಗಿಲೆ, ಶ್ರೀ ವೇದವ್ಯಾಸ ಸೇವಾ ಟ್ರಸ್ಟ್ ಸದಸ್ಯೆ ಸ್ವಾತಿ ಸತ್ಯ ಅವರಿಗೆ ಕರುನಾಡ ಮಹಿಳಾ ಮಾಣಿಕ್ಯ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾಲೇಜು ಶಿಕ್ಷಣ ಇಲಾಖೆ ಹೆಚ್ಚುವರಿ ನಿರ್ದೇಶಕ ಪೊ›.ಅಪ್ಪಾಜಿಗೌಡ ಅವರನ್ನು ಸನ್ಮಾನಿಸಲಾಯಿತು.