ರಾಮನಗರ: ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ತಿಳಿಸಿದರು.
ಜಿಲ್ಲಾಡಳಿತ, ಜಿಪಂ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜನ್ಮದಿನಾಚರಣೆ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು, ಡಾ.ಬಿ.ಆರ್. ಅಂಬೇಡ್ಕರ್ ಅವರ ಬದುಕು ಎಲ್ಲರಿಗೂ ಸ್ಫೂರ್ತಿ. ಸಮಾನತೆ, ಪ್ರಗತಿಯ ಕನಸು ಕಂಡ ಮೇರು ನಾಯಕ. ನಮ್ಮೆಲ್ಲರ ಹೆಮ್ಮೆಯ ಸಂವಿಧಾನ ಶಿಲ್ಪಿ. ಇವರ ಆದರ್ಶ ಎಲ್ಲರ ಜೀವನಕ್ಕೆ ದಾರಿ. ಬಾಬಾ ಸಾಹೇಬರ ಚಿಂತನೆ ಇಂದಿಗೂ ಯುವಜನೆತೆಗೆ ಸ್ಫೂರ್ತಿ ನೀಡುತ್ತಲೇ ಇದೆ ಎಂದರು.
ಜ್ಞಾನ ಜೀವನಕ್ಕೆ ಆಧಾರ: ಮುಕುಂದ್ ರಾಜ್ ಉಪ ನ್ಯಾಸ ನೀಡಿ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಒಂದೇ ಜಾತಿಗೆ ಸೀಮಿತವಾಗಿರಲಿಲ್ಲ. ಎಲ್ಲಾ ಜಾತಿಗೂ ಮೀಸಲಾತಿಯನ್ನು ಕಲ್ಪಿಸಿದ ಮಹಾನ್ ಪುರುಷರು. ಶಿಕ್ಷಣ ಎನ್ನುವಂತಹದ್ದು ಪುರುಷರಿಗೆ ಎ ಷ್ಟು ಮುಖ್ಯವೋ, ಮಹಿಳೆಯರಿಗೂ ಅಷ್ಟೇ ಮುಖ್ಯ. ಜ್ಞಾನವು ಪ್ರತಿಯೊಬ್ಬ ವ್ಯಕ್ತಿಯ ಜೀವನಕ್ಕೆ ಆಧಾರವಾಗಿದೆ. ದೊಡ್ಡ ಪ್ರಯತ್ನಗಳನ್ನು ಹೊರತು ಪಡಿಸಿ ಈ ಜಗತ್ತಿನಲ್ಲಿ ಯಾವುದೂ ಮೌಲ್ಯಯುತವಾಗಿಲ್ಲ. ಸಂವಿಧಾನ ದುರ್ಬ ಳಕೆಯಾಗುತ್ತಿದೆ ಎಂ ದು ಗೊತ್ತಾದರೆ ಅದನ್ನು ಸುಡುವ ಮೊದಲಿಗ ನಾ ನಾ ಗಿರುತ್ತೇನೆ. ವಿದ್ಯಾವಂತ ರಾಗಿ, ಸಂಘಟಿತ ರಾಗಿರಿ ಎಂಬ ಸಂದೇಶಗಳನ್ನು ನೀಡಿದ್ದಾರೆ ಎಂದರು.
ಮಹಿಳೆಯರು ಪೂಜೆ ಸಲ್ಲಿಸಬೇಕು: ಕಾರ್ಮಿಕರು ಈ ಹಿಂದೆ 12 ಗಂಟೆಗಳ ಕಾಲ ದುಡಿಯುತ್ತಿದ್ದರು. ಅದನ್ನು 8 ಗಂಟೆಗಳಿಗೆ ಇಳಿಸಿದರು. ಅಲ್ಲದೆ ಅವರಿಗೆ ಪಿಂಚಣಿ, ಭವಿಷ್ಯ ನಿಧಿಯನ್ನು ಜಾರಿಗೆ ತಂದರು. ದುಡಿಯುವ ಕೈಗಳಿಗೆ ಕೆಲಸ ನೀಡುವಂತೆ ಮಾಡಿದರು ಎಂದ ಅವರು, ಮಹಿಳೆಯವರಿಗೆ ಮೀಸಲಾತಿಯನ್ನು ಜಾರಿಗೊಳಿಸದೆ ಇದ್ದ ಕಾರಣದಿಂದ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದರು. ಇಂತಹ ಮಹಾನ್ ವ್ಯಕ್ತಿಯ ಭಾವಚಿತ್ರಕ್ಕೆ ಪ್ರತಿಯೊಬ್ಬ ಮಹಿಳೆಯು ಪೂಜೆ ಸಲ್ಲಿಸಬೇಕು ಎಂದರು.
ವಿದ್ಯಾರ್ಥಿಗಳಿಗೆ ಸನ್ಮಾನ: ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಜಿಲ್ಲೆಯ ವಿದ್ಯಾರ್ಥಿಗಳಿಗೆ ಹಾಗೂ ಪೌರಕಾರ್ಮಿಕರಿಗೆ ಸನ್ಮಾನ ಮಾಡಲಾಯಿತು. ಭೌದ್ದ ಧರ್ಮಗುರು ಬುದ್ದಮ್ಮ ಬಂತೇಜು ಹಾಗೂ ಬೌದಿಪಾಲ ಬಂತೇಜು ಅವರು ಬೌದ್ದ ಧರ್ಮದ ಉಪನ್ಯಾಸ ಮತ್ತು ಆರ್ಶಿವಚನವನ್ನು ನೀಡಿದರು. ನಗರದ ವಾಟರ್ ಟ್ಯಾಂಕ್ ವೃತ್ತದಿಂದ ಡೀಸಿ ಕಚೇರಿ ಸಂಕೀರ್ಣದವರಿಗೆ ವಿವಿಧ ಕಲಾತಂಡಗಳೊಂದಿಗೆ ಬೆಳ್ಳಿರಥದಲ್ಲಿ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು.
ಜಿಪಂ ಸಿಇಒ ದಿಗ್ವಿಜಯ್ ಬೋಡ್ಕೆ, ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಅಪರ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ, ಉಪ ವಿಭಾಗಾಧಿಕಾರಿ ಮಂಜುನಾಥ್, ಉಪ ಪೊಲೀಸ್ ವರಿಷ್ಠಾಧಿಕಾರಿ ದಿನಕರ್ ಶೆಟ್ಟಿ, ತಹಶೀಲ್ದಾರ್ ತೇಜಸ್ವಿನಿ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಸರೋಜ ದೇವಿ, ಕೆ. ಸತೀಶ್, ಡಾ. ಎಸ್.ಬಿ.ಯೋಗೀಶ್ ಮತ್ತಿತರರು ಇದ್ದರು.