ಮುಳಬಾಗಿಲು: ಡಾ.ಬಿ.ಆರ್.ಅಂಬೇಡ್ಕರ್ ಸಮಾಜದ ಎಲ್ಲಾ ಶೋಷಿತ ವರ್ಗಗಳಧ್ವನಿಯಾಗಿದ್ದರು ಎಂದು ತಹಶೀಲ್ದಾರ್ ರಾಜಶೇಖರ್ ತಿಳಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಪ್ರಯುಕ್ತ ಮುಳಬಾಗಿಲು ತಾಲೂಕುಆಡಳಿತ ಹಾಗೂ ನಗರಸಭೆಯಿಂದ ಬುಧವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್‌ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಮಿನಿ ವಿಧಾನಸೌಧದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಒಂದೇ ಜನಾಂಗಕ್ಕೆ ಸೀಮಿತವಲ್ಲ.
ಅವರುಎಲ್ಲಾ ಶೋಷಿತ ವರ್ಗಗಳ ಅಭಿವೃದ್ಧಿಗಾಗಿ ಶ್ರಮಿಸಿದರು. ಎರಡು ಬಾರಿಚುನಾವಣೆಯಲ್ಲಿ ಸೋತರೂ, ವಿಶ್ವವೇ ಕೊಂಡಾಡುವಂತೆ ಸಂವಿಧಾನವನ್ನು ರಚಿಸಿ,ದೇಶಕ್ಕೆ ಸಮರ್ಪಿಸಿದರು ಎಂದರು.
ತಪ್ಪದೇ ವಿದ್ಯಾಭ್ಯಾಸ ಮಾಡಿ: ಡಾ.ಬಿ.ಆರ್.ಅಂಬೇಡ್ಕರ್ ಕನಸನ್ನು ನನಸು ಮಾಡಲುಶೋಷಿತ ವರ್ಗದ ಮಕ್ಕಳು ತಪ್ಪದೇ ವಿದ್ಯಾಭ್ಯಾಸ ಮಾಡಬೇಕು. ಆಗಲೇ ಅಂಬೇಡ್ಕರ್‌ಅವರ ಶಿಕ್ಷಣ, ಸಂಘಟನೆ, ಹೋರಾಟ ಎಂಬ ತತ್ವಕ್ಕೆ ಅರ್ಥ ಸಿಗುತ್ತದೆ. ಸರ್ಕಾರಕೊರೊನಾ ನಿಯಂತ್ರಣಕ್ಕೆ ಶ್ರಮಿಸುತ್ತಿದೆ.
ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಇರಬೇಕುಎಂದು ಹೇಳಿದರು.ತಾಪಂ ಅಧ್ಯಕ್ಷ ಎ.ವಿ.ಶ್ರೀನಿವಾಸ್, ನಗರಸಭೆ ಅಧ್ಯಕ್ಷ ರಿಯಾಜ್ ಅಹಮದ್, ಇಒಶ್ರೀನಿವಾಸ್, ನಗರಸಭೆ ಪೌರಾಯುಕ್ತ ಶ್ರೀನಿವಾಸಮೂರ್ತಿ, ಸಿಪಿಐ ಗೋಪಾಲ್‌ನಾಯಕ್ ಹಾಜರಿದ್ದರು.