Advertisement

ಅಂಬೇಡ್ಕರ್‌ ಯುವಶಕ್ತಿಯ ಹೊಸ ಐಕಾನ್‌: ಜಯನ್‌ ಮಲ್ಪೆ

02:25 AM Dec 11, 2018 | Karthik A |

ಮಲ್ಪೆ: ಅಂಬೇಡ್ಕರ್‌ ಅನಂತರ ಸಾಮುದಾಯಿಕ, ಸಾಮಾಜಿಕ, ರಾಜಕೀಯ ನಾಯಕತ್ವ ಗುರುತಿಸಿಕೊಳ್ಳುವಲ್ಲಿ ಸೋತಿದ್ದಾರೆ. ಈ ದುರಂತಕ್ಕೆ ದಲಿತರೇ ಹೊಣೆಗಾರರು ಎಂದೆನಿಸುತ್ತದೆ. ಪರಸ್ಪರ ದಲಿತ ಸಂಘಟನೆ, ರಾಜಕಾರಣಿಗಳು, ಹೋರಾಟಗಾರರು, ನೌಕರರು, ಅಧಿಕಾರಿಗಳು, ವಿದ್ಯಾರ್ಥಿಗಳ ನಡುವೆ ಸಾಧ್ಯವಾಗದ ಸಾಮರಸ್ಯದ ಸಂಬಂಧ, ದಲಿತ ಸಮುದಾಯದ ಬಹುತೇಕ ಕೇಡಿಗೆ ಕಾರಣವಾಗಿದೆ. ಅಂಬೇಡ್ಕರ‌ ಪ್ರಬುದ್ಧ ಭಾರತ ಕಟ್ಟಲು ಪ್ರಯತ್ನಿಸುವ ಮೂಲಕ ಅಂಬೇಡ್ಕರ್‌ ಈ ದೇಶದ ಯುವಶಕ್ತಿಯ ಹೊಸ ಐಕಾನ್‌ ಆಗುತ್ತಿದ್ದಾರೆ ಎಂದು ದಲಿತ ಚಿಂತಕ ಜಯನ್‌ ಮಲ್ಪೆ ಹೇಳಿದರು. ಅವರು ಮಲ್ಪೆಯಲ್ಲಿ ಅಂಬೇಡ್ಕರ್‌ ಯುವಸೇನೆ ಏರ್ಪಡಿಸಿದ ಡಾ| ಬಾಬಾ ಸಾಹೇಬ ಅಂಬೇಡ್ಕರರ 62ನೇ ಮಹಾ ಪರಿನಿರ್ವಾಣ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಂಬೇಡ್ಕರ್‌ ಯುವಸೇನೆಯ ಅಧ್ಯಕ್ಷ ಹರೀಶ್‌ ಸಾಲ್ಯಾನ್‌  ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ  ದಸಂಸದ ಉಡುಪಿ ತಾ| ಸಂಚಾಲಕ ಮಹಾಲಿಂಗ ಕೋಟ್ಯಾನ್‌ ಮಾತನಾಡಿ ದಲಿತ ನಾಯಕರು ತಮ್ಮ ಭಿನ್ನಾಭಿಪ್ರಾಯ ಬಿಟ್ಟು ದಲಿತ ಸಮಾಜಕ್ಕಾಗಿ ಒಂದಾಗಬೇಕಾಗಿದೆ ಎಂದವರು ತಿಳಿಸಿದರು.

Advertisement

ದಲಿತ ಮುಖಂಡರಾದ ಸುಂದರ್‌ ಕಪ್ಪೆಟ್ಟು, ಗಣೇಶ್‌ ನೆರ್ಗಿ, ಸಂಧ್ಯಾ ತಿಲಕ್‌ರಾಜ್‌, ಸುರೇಶ್‌ ಪಾಲನ್‌ ತೊಟ್ಟಂ, ಶಶಿಕಲಾ ತೊಟ್ಟಂ, ದಿನೇಶ್‌ ಮೂಡಬೆಟ್ಟು, ಮಂಜುನಾಥ ಕಪ್ಪೆಟ್ಟು, ಸುಶೀಲ್‌ ಕುಮಾರ್‌ ಕೊಡವೂರು, ಮೋಹನ್‌ದಾಸ್‌ ಮಲ್ಪೆ, ಶಶಿ ಅಮ್ಮುಂಜೆ, ಮಹೇಶ್‌ ಬಲರಾಮ ನಗರ, ಕೆ. ಶಂಕರ್‌ ಮಂಡ್ಯ, ದೀಪಕ್‌ ಕೊಡವೂರು, ಪ್ರಮೀಳಾ ಹರೀಶ್‌, ಶೇಖರ್‌ ಮಂಡ್ಯ, ಮಹೇಶ್‌ ಮೂಡಬೆಟ್ಟು, ಶಶಿ ಕುಮಾರ್‌ ಮಂಡ್ಯ, ಪ್ರಸಾದ್‌ ಮಲ್ಪೆ ಉಪಸ್ಥಿತರಿದ್ದರು. ಮಲ್ಪೆ, ನೆರ್ಗಿ, ತೊಟ್ಟಂ, ಬಲರಾಮ ನಗರದವರು  ಅಂಬೇಡ್ಕರ್‌ ಭಾವಚಿತ್ರಕ್ಕೆ ಗೌರವ ಸಲ್ಲಿಸಿದರು. ಅಂಬೇಡ್ಕರ್‌ ಯುವಸೇನೆಯ ಭಗವಾನ್‌ ದಾಸ್‌ ನೆರ್ಗಿ ಸ್ವಾಗತಿಸಿದರು. ಕವಿತಾ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next