Advertisement

ಅಂಬೇಡ್ಕರ್‌ ಆದರ್ಶ ಸಮಾಜಕ್ಕೆ ದಾರಿದೀಪ

08:13 PM Aug 27, 2019 | Lakshmi GovindaRaj |

ಗೌರಿಬಿದನೂರು: ಬುದ್ಧ, ಬಸವ, ಸಾವಿತ್ರಿಬಾಯಿಪುಲೆ, ಅಂಬೇಡ್ಕರ್‌ ಅವರ ಇತಿಹಾಸ ಅರಿತು ತತ್ವಗಳನ್ನು ಅಳವಡಿಸಿಕೊಂಡರೆ ಮಾತ್ರ ದೇಶದ ಉತ್ತಮ ಪ್ರಜೆ ಆಗಲು ಸಾಧ್ಯ ಎಂದು ಪಾವಗಡದ ಹಿರಿಯ ಶ್ರೇಣಿ ನ್ಯಾಯಾಧೀಶರಾದ ವಿ.ಹನುಮಂತಪ್ಪ ತಿಳಿಸಿದರು.

Advertisement

ಸಾವಿತ್ರಿ ಬಾಯಿಪುಲೆ ಸಂಸ್ಮರಣಾ ದಿನದ ಅಂಗವಾಗಿ ನಗರದ ಎಚ್‌.ಎನ್‌.ಕಲಾಭವನದಲ್ಲಿ ಭಾರತರತ್ನ ಡಾ.ಬಿ.ಆರ್‌.ಅಂಬೇಡ್ಕರ್‌ ವಿಚಾರ ವೇದಿಕೆ ಹಮ್ಮಿಕೊಂಡಿದ್ದ ಸರ್ಕಾರಿ ಅನುದಾನಿತ ಶಾಲೆ- ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಹೆಚ್ಚು ಅಂಕಗಳಿಸಿದ ಪ.ಜಾತಿ, ಇತರೆ ಹಿಂದುಳಿದ ವರ್ಗಗಳ 2018-19ನೇ ಶೈಕ್ಷಣಿಕ ವರ್ಷದ ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರದಲ್ಲಿ ಮಾತನಾಡಿದರು.

ಆದರ್ಶ ಮೈಗೂಡಿಸಿಕೊಳ್ಳಿ: ಇಂದಿನ ಯುವ ಪೀಳಿಗೆ ಶಿಕ್ಷಣ ಪಡೆದು ಮಹನೀಯರ ತತ್ವಗಳನ್ನು ಮೈಗೊಡಿಸಿಕೊಂಡಾಗ ಮಾತ್ರ ಉದ್ದೇಶ ಈಡೇರಿಕೆ ಸಾಧ್ಯ ಎಂದು ತಿಳಿಸಿದರು. ಸರ್ಕಾರ ನೀಡುವ ಉಚಿತ ಶಿಕ್ಷಣ ಪಡೆದು ವೈಚಾರಿಕತೆ ಮೈಗೊಡಿಸಿಕೊಂಡು ತಮ್ಮ ಬಾಳನ್ನು ಉಜ್ವಲಗೊಳಿಸಿಕೊಳ್ಳಬೇಕು ಎಂದು ತಿಳಿಸಿದರು.

ಪುಸ್ತಕ ಅಧ್ಯಯನಕ್ಕೆ ಒತ್ತು ನೀಡಿ: ಹಿರಿಯ ವಕೀಲ ಎಚ್‌.ಎಲ್‌.ವಿ.ವೆಂಕಟೇಶ್‌ ಮಾತನಾಡಿ, ಇಂದಿನ ಮಕ್ಕಳು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಮೊಬೈಲ್‌ ಗೀಳು ಬಿಟ್ಟು ಪುಸ್ತಕಗಳ ಅಧ್ಯಯನಕ್ಕೆ ಹೆಚ್ಚು ಶ್ರದ್ಧೆª ನೀಡಿದಾಗಿ ಮಾತ್ರ ಸ್ಪರ್ಧಾತ್ಮಕ ಯುಗದಲ್ಲಿ ಮುಂದೆ ಬರಲು ಸಾಧ್ಯವೆಂದರು. ಮನೆಗಳಲ್ಲಿ ಪೋಷಕರು ದೇವರ ಪೂಜೆಗಳ ಬದಲು ಮಕ್ಕಳಿಗೆ ಆದರ್ಶ ವ್ಯಕ್ತಗಳ ಬಗ್ಗೆ ತಿಳಿ ಹೇಳುವುದು ಒಳಿತು ಎಂದು ಕಿವಿಮಾತು ತಿಳಿಸಿದರು.

ಸಮಾಜಕ್ಕೆ ಬೆಳಕಾದರು: ವೇದಿಕೆ ಅಧ್ಯಕ್ಷ ಕೆ.ಪೂಜಪ್ಪ ಮಾತನಾಡಿ, ವಿಶ್ವಜ್ಞಾನಿ ಡಾ.ಬಿ.ಆರ್‌.ಅಂಬೇಡ್ಕರ್‌ ತಮ್ಮ ಕಾಲಮಾನವನ್ನು ಮೆಟ್ಟಿನಿಂತು ಮಹಾ ಮಾನವರಲ್ಲಿ ಒಬ್ಬರಾಗಿ ದಲಿತರ ಪಾಲಿಗೆ ಬೆಳಕಾದರು. ದೇಶದ ದೀನ ದಲಿತರ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಜೊತೆಗೆ ಸಂವಿಧಾನ ರಚಿಸಿ ಅವರಿಗೆ ಮೂಲಭೂತ ಹಕ್ಕು ನೀಡಿ ಸ್ವಾತಂತ್ರ ದಿಂದ ಬದುಕುವ ಎಲ್ಲಾ ಸೌಕರ್ಯ ನೀಡಿದರು ಎಂದು ಹೇಳಿದರು.

Advertisement

ಅಂಬೇಡ್ಕರ್‌ ಕನಸು ಈಡೇರಿಸಿ: ಆಳುವ ಸರ್ಕಾರಗಳು ಹಕ್ಕುಗಳನ್ನು ಯತಾವತ್ತಾಗಿ ಜಾರಿಗೊಳಿಸದಿದ್ದರಿಂದ ಇಂದಿಗೂ ದಲಿತರ ಬದುಕು ಸುಧಾರಿಸಿಯೇ ಇಲ್ಲದಂತಾಗಿದೆ. ಹೀಗಾಗಿ ಅಂಬೇಡ್ಕರ್‌ ಕನಸು ನನಸಾಗಿಯೇ ಇದೆ ಎಂದು ವಿಷಾದಿಸಿದರು. ವಕೀಲರ ಸಂಘದ ಅಧ್ಯಕ್ಷ ವಿ.ಸಿ.ಗಂಗಯ್ಯ, ಕನ್ನಡ ಉಪನ್ಯಾಸಕರಾದ ನರಸಿಂಹಪ್ಪ, ಅಂಬೇಡ್ಕರ್‌ ಜೀವನ ಚರಿತ್ರೆ ಕುರಿತು ಮಾಹಿತಿ ನೀಡಿದರು.

ಇದೇ ಸಮಯದಲ್ಲಿ ಸುಮಾರು 125 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಕರ ಸಂಘದ ಉಪಾಧ್ಯಕ್ಷ ಬಿ.ಸಂಜೀವರಾಯಪ್ಪ, ಕೃಷ್ಣಪ್ಪ, ಎನ್‌.ಅಶ್ವತ್ಥಯ್ಯ, ಉಪ ಪ್ರಾಂಶುಪಾಲರಾದ ಆಂಜನೇಯಲು, ಮುತ್ತಪ್ಪ, ಲಕ್ಷ್ಮಣ್‌, ದಲಿತ ಮುಖಂಡರಾದ ಪಿ.ನರಸಿಂಹಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿಲ್ಲ: ಶತಮಾನಗಳಿಂದ ದೇಶದಲ್ಲಿ ತಳ ಸಮುದಾಯಗಳ ತುಳಿತ ಹಾಗೂ ನಿರ್ಲಕ್ಷ್ಯದಿಂದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗದೇ ಕಗ್ಗತ್ತಲಲ್ಲಿ ಜೀವನ ಕಳೆಯುವಂತಾಗಿತ್ತು. ಆದರೆ, ಬುದ್ಧ, ಬಸವಣ್ಣ, ಸಾವಿತ್ರಿ ಬಾಯಿಪುಲೆ, ಅಂಬೇಡ್ಕರ್‌ರ ಜೀವನ, ತ್ಯಾಗದಿಂದ ತಳ ಸಮುದಾಯಗಳ‌ ಬಾಳಿಗೆ ಬೆಳಕು ಬಂದಿರುವುದು ಇತಿಹಾಸ. ಆದರೆ, ಅವರ ಕನಸು ನನಸಾಗದೇ ಇನ್ನೂ ಅಂಧಕಾರದಲ್ಲಿದೆ ಎಂದು ಪಾವಗಡದ ಹಿರಿಯ ಶ್ರೇಣಿ ನ್ಯಾಯಾಧೀಶರಾದ ವಿ.ಹನುಮಂತಪ್ಪ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next