Advertisement

ಅಂಬೇಡ್ಕರ್‌ ತುಳಿತಕ್ಕೊಳಗಾದವರ ದೇವರು:ಎ.ಎಸ್‌. ಪಾಟೀಲ

06:28 PM Apr 15, 2021 | Team Udayavani |

ಮುದ್ದೇಬಿಹಾಳ: ದೇಶದಲ್ಲಿ ಜಾತಿ ವ್ಯವಸ್ಥೆ ಇರುವರೆಗೂ ಡಾ| ಅಂಬೇಡ್ಕರ್ ಪ್ರತಿಪಾದಿಸಿದ ಮೀಸಲಾತಿ ವ್ಯವಸ್ಥೆ ಜಾರಿಯಲ್ಲಿರುತ್ತದೆ. ಈ ಬಗ್ಗೆ ನಾನು ವಿಧಾನಸಭೆ ಅಧಿ ವೇಶನದಲ್ಲೂ ಮಾತನಾಡಿದ್ದೇನೆ. ಡಾ|ಅಂಬೇಡ್ಕರ್ ಅವರನ್ನು ದೂರವಿರಿಸುವುದು ಯಾರಿಂದಲೂ ಸಾಧ್ಯವಿಲ್ಲ. ಅವರು ತುಳಿತಕ್ಕೊಳಗಾದ ಎಲ್ಲ ಜನರ ದೇವರು ಎಂದು ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಹೇಳಿದರು.

Advertisement

ಅಂಬೇಡ್ಕರ್‌ ವೃತ್ತದಲ್ಲಿ ದಲಿತ ಸಂಘಟನೆಗಳು ಆಯೋಜಿಸಿದ್ದ ಡಾ| ಅಂಬೇಡ್ಕರ್‌ರವರ 130ನೇ ಜಯಂತಿಯಲ್ಲಿ ಮೂರ್ತಿಗೆ ಹೂಮಾಲೆ ಹಾಕಿ, ಮಹಾನಾಯಕ ಕ್ಯಾಲೆಂಡರ್‌ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ದೇಶಾಭಿಮಾನಕ್ಕೆ ಇನ್ನೊಂದು ಹೆಸರೇ ಅಂಬೇಡ್ಕರ್‌. ತುಳಿತಕ್ಕೊಳಗಾದವರ ಪರ ನಿಂತು ನ್ಯಾಯ ಕೊಡಿಸಿದರು. ಅವರ ನೇತೃತ್ವದಲ್ಲಿ ರಚನೆಯಾದ ಸಂವಿಧಾನ ದೇಶಕ್ಕೆ ದೊಡ್ಡ ಕೊಡುಗೆ. ಸರ್ವರಿಗೂ ಸಮಬಾಳು, ಸಮಪಾಲು ಎನ್ನುವುದನ್ನು
ಬಿಂಬಿಸಿದ ಅಂಬೇಡ್ಕರ್‌ ಎಲ್ಲರಿಗೂ ಆದರ್ಶ ಎಂದರು.

ಎಲ್ಲರ ಬೇಡಿಕೆಯಂತೆ ಅಂಬೇಡ್ಕರ್ ವೃತ್ತದಲ್ಲಿ ಡಾ| ಅಂಬೇಡ್ಕರ್‌ರವರ ಬೃಹತ್‌ ಕಂಚಿನ ಅಥವಾ ಪಂಚಲೋಹದ ಮೂರ್ತಿ ಸ್ಥಾಪನೆಗೆ ವೈಯಕ್ತಿಕವಾಗಿ ಹಣ ಕೊಟ್ಟು ಮಹತ್ವ ಕೊಡುತ್ತೇನೆ. ಅಂಬೇಡ್ಕರ್‌ ಆದರ್ಶ, ವಿಚಾರ ಜನರಿಗೆ ತಿಳಿಸುವ ಅವರ ಮತ್ತು ಅವರ ಬರಹಗಳ ಕುರಿತ ವಿಚಾರ ಸಂಕಿರಣ ಹಮ್ಮಿಕೊಳ್ಳುವ ಯೋಜನೆ ಇದೆ. ನಾನು ಅಂಬೇಡ್ಕರ್‌ ಮತ್ತು ಅವರ ವಿಚಾರಧಾರೆ ಪ್ರೀತಿಸುವ ವ್ಯಕ್ತಿಯಾಗಿ ದಲಿತರು, ಬಡವರು, ತುಳಿತಕ್ಕೊಳಗಾದವರಿಗೆ ನನ್ನ ಕೈಲಾದ ನೆರವು ನೀಡುತ್ತಿದ್ದೇನೆ ಎಂದರು.

ಈ ವೇಳೆ ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ಉಪಾಧ್ಯಕ್ಷೆ ಶಾಜಾದಬಿ ಹುಣಚಗಿ, ಎಲ್ಲ ಸದಸ್ಯರು, ಪಿಎಸೈ ಎಂ.ಬಿ. ಬಿರಾದಾರ, ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ, ಸಮಾಜ ಕಲ್ಯಾಣಾಧಿಕಾರಿ ಉಮೇಶ ಲಮಾಣಿ, ದಲಿತ ಮುಖಂಡರಾದ ಡಿ.ಬಿ. ಮುದೂರ, ಹರೀಶ ನಾಟಿಕಾರ, ಚನ್ನಪ್ಪ ವಿಜಯಕರ, ರೇವಣೆಪ್ಪ ಹರಿಜನ, ಬಸವರಾಜ ಪೂಜಾರಿ, ಪ್ರಕಾಶ ಚಲವಾದಿ ಸರೂರ, ದೇವರಾಜ ಹಂಗರಗಿ, ಸಿದ್ದು ಚಲವಾದಿ, ಶಶಿಕಾಂತ ಮಾಲಗತ್ತಿ, ಪರಶುರಾಮ ಕೊಣ್ಣೂರ, ಅಶೋಕ ಇಲಕಲ್‌ ಇದ್ದರು.ಹರೀಶ ನಾಟಿಕಾರ ನಿರೂಪಿಸಿದರು.

ವಿದ್ಯುತ್‌ ಅಲಂಕಾರ-ಪೂಜೆ: ಜಯಂತಿ ಹಿನ್ನೆಲೆ ಪುರಸಭೆಯಿಂದ ಅಂಬೇಡ್ಕರ್ ವೃತ್ತದವರೆಗಿನ ರಸ್ತೆಯ ಎರಡೂ ಬದಿಯಲ್ಲಿ ಅಲಂಕಾರಿಕ ವಿದ್ಯುತ್
ದೀಪ ಅಳವಡಿಸಿ, ವೃತ್ತ ಹಾಗೂ ಅಂಬೇಡ್ಕರ್‌ ಮೂರ್ತಿ ಹೂಗಳಿಂದ ಅಲಂಕರಿಸಲಾಗಿತ್ತು. ವೃತ್ತದಲ್ಲಿರುವ ಭಗವಾನ್‌ ಬುದ್ಧ, ಅಂಬೇಡ್ಕರ್‌ ಚಿಕ್ಕ ಮೂರ್ತಿಗಳಿಗೆ ಶಾಸಕರಾದಿಯಾಗಿ ಎಲ್ಲರೂ ಪೂಜೆ ಸಲ್ಲಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next