ಎಚ್.ಡಿ.ಕೋಟೆ: ಜಾತಿ ವ್ಯವಸ್ಥೆ ಕೂಪದಲ್ಲಿ ಅಂಬೇಡ್ಕರ್ ಅವರು ಹಲವು ಟೀಕೆ ಟಿಪ್ಪಣಿಗಳನ್ನು ಎದುರಿಸಿ ತಮ್ಮ ಜಾnನದಿಂದಲೇ ಉತ್ತರಿಸಿದ ಅವರು ಮಹಾನ್ ಮಾನವತಾವಾದಿಯಾಗಿ ನಿಲ್ಲುತ್ತಾರೆ ಎಂದು ಜಿಪಂ ಸದಸ್ಯ ಶ್ರೀಕೃಷ್ಣ ಅಭಿಪ್ರಾಯಪಟ್ಟರು.
ತಾಲೂಕಿನ ಮೂಲಭೂತ ಸೌಲಭ್ಯ ವಂಚಿತ ಎಂ.ಮಲ್ಲಹಳ್ಳಿಯ ಪೌರಕಾರ್ಮಿಕರ ಕಾಲೋನಿಯಲ್ಲಿ ಬುಧವಾರ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ)ದ ವತಿಯಿಂದ 62ನೇ ಅಂಬೇಡ್ಕರ್ ಪರಿನಿರ್ವಾಣ ದಿನದ ಅಂಗವಾಗಿ ಆಯೋಜಿಸಿದ್ದ ದಲಿತ ಜಾಗೃತಿ ಸಭೆ ಮತ್ತು ಸಹಪಂಕ್ತಿ ಭೋಜನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶೋಷಿತರಿಗೆ, ಮಹಿಳೆಯರಿಗೆ, ದಲಿತರಿಗೆ ಅಂಬೇಡ್ಕರ್ ಸಂವಿಧಾನದಲ್ಲಿ ವಿಶೇಷ ಸ್ಥಾನಮಾನ ನೀಡಿದ್ದಾರೆಂದರು.
ಹಂಪಾಪುರ ಹೋಬಳಿಗೆ 5 ಕೋಟಿ ರೂ., ವಿಶೇಷ ಅನುದಾನವನ್ನು ಸರ್ಕಾರ ನೀಡಿದೆ. ಈ ಹಣದಲ್ಲಿ ಎಂ.ಮಲ್ಲಹಳ್ಳಿ ಗ್ರಾಮದ ರಸ್ತೆ ಅಭಿವೃದ್ಧಿಗೆ 15 ಲಕ್ಷ ರೂ., ನೀಡುವುದರ ಜೊತೆಗೆ, ಗ್ರಾಮಕ್ಕೆ ಬೇಕಾಗಿರುವ ಕುಡಿಯುವ ನೀರು ಮತ್ತು ಅಂಗನವಾಡಿ ಕೇಂದ್ರ ಮಂಜೂರು ಮಾಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ದಲಿತ ಮುಖಂಡ ಭೀಮನಹಳ್ಳಿ ಮಹದೇವು, ಭಾರತದಲ್ಲಿ ಜಾತಿ ವ್ಯವಸ್ಥೆ ಇನ್ನೂ ಜೀವಂತವಾಗಿದೆ. ಈ ವ್ಯವಸ್ಥೆಯನ್ನು ತೊಲಗಿಸುವುದಕ್ಕಾಗಿಯೇ ದಸಂಸ ಹುಟ್ಟಿಕೊಂಡಿದೆ ಎಂದು ತಿಳಿಸಿದರು. ನಂತರ ಎಲ್ಲರೂ ಒಟ್ಟಾಗಿ ಪೌರಕಾರ್ಮಿಕರ ಕಾಲೋನಿಯಲ್ಲಿ ಸಹಪಂಕ್ತಿ ಭೋಜನದಲ್ಲಿ ಪಾಲ್ಗೊಂಡರು.
ಚಿಕ್ಕೆರೆಯೂರು ಗ್ರಾಪಂ ಅಧ್ಯಕ್ಷೆ ಸಣ್ಣತಾಯಮ್ಮ, ಜಿಲ್ಲಾ ಸಂಘಟನಾ ಸಂಚಾಲಕ ಹಾದನೂರು ದೊಡ್ಡಸಿದ್ದು, ತಹಶೀಲ್ದಾರ್ ಎಂ.ನಂಜುಂಡಯ್ಯ, ಇಒ ಶ್ರೀಕಂಠರಾಜೇಅರಸ್, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಸಿದ್ದೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸುಂದರ್, ಮಲಾರಪುಟ್ಟಯ್ಯ, ದಸಂಸ ತಾಲೂಕು ಸಂಚಾಲಕ ಚಾ.ಶಿವಕುಮಾರ್, ಜೀವಿಕ ಬಸವರಾಜು, ಯಡತೊರೆ ಶಿವರಾಜು, ಸಣ್ಣಕುಮಾರ್, ಚಂದ್ರಶೇಖರ್ ಆರಾಧ್ಯ ಮತ್ತಿತರರಿದ್ದರು.