Advertisement
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಳೆದ ವರ್ಷ ಅಂಬೇಡ್ಕರ್ ಭವನವನ್ನು ಉದ್ಘಾಟಿಸಿದ್ದು, ಇನ್ನೂ ಕಾರ್ಯ ಕ್ರಮಗಳಿಗೆ ತೆರೆದುಕೊಂಡಿಲ್ಲ. ಈಗಾಗಲೇ ಸುಮಾರು 40 ಸಾವಿರ ರೂ. ನಷ್ಟು ವಿದ್ಯುತ್ ಬಿಲ್ ಬರುತ್ತಿದ್ದು, ಕಾರ್ಯಕ್ರಮಗಳಿಗೆ ವಿನಿಯೋಗಿಸಿದರೆ 1 ಲಕ್ಷ ರೂ. ಮೀರುತ್ತದೆ. ಹೀಗಿದ್ದಾಗ, ಸಮಾಜಕಲ್ಯಾಣ ಇಲಾಖೆಯಲ್ಲಿ ಅಷ್ಟೊಂದು ಆದಾಯವಿಲ್ಲ. ಇದೇ ಕಾರಣಕ್ಕೆ ಮನಪಾಗೆ ಹಸ್ತಾಂತರಿಸುವ ಕುರಿತು ಸಮಾಜ ಕಲ್ಯಾಣ ಇಲಾಖೆ ಪಾಲಿಕೆಯೊಂದಿಗೆ ಮಾತುಕತೆ ನಡೆಸುತ್ತಿದೆ.
Related Articles
Advertisement
ಸದ್ಯದಲೇ ಅಂತಿಮ ನಿರ್ಧಾರ
ಕೆಲವು ತಿಂಗಳ ಹಿಂದೆ ಉದ್ಘಾಟನೆಗೊಂಡ ಅಂಬೇಡ್ಕರ್ ಭವನ ನಿರ್ವಹಣೆ ಕುರಿತಂತೆ ಸಮಾಜ ಕಲ್ಯಾಣ ಇಲಾಖೆಯು ಪಾಲಿಕೆಯನ್ನು ಕೇಳಿಕೊಂಡಿದೆ. ಪಾಲಿಕೆಯಲ್ಲಿ ನಡೆದ ಎಸ್‌ಸಿ/ಎಸ್‌ಟಿ ಕುಂದುಕೊರತೆ ಸಭೆಯಲ್ಲಿ ಈ ಪ್ರಸ್ತಾಪ ಬಂದಿದೆ. ಈ ಕುರಿತು ಸದ್ಯದಲ್ಲೇ ಪಾಲಿಕೆಯು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಜತೆ ಸಭೆ ನಡೆಸಿ ಅಂತಿಮ ನಿರ್ಧಾರಕ್ಕೆ ಬರಲಾಗುವುದು. -ಪ್ರೇಮಾನಂದ ಶೆಟ್ಟಿ, ಮನಪಾ ಮೇಯರ್
ಚರ್ಚೆ ನಡೆಸಲಾಗಿದೆ
ಅಂಬೇಡ್ಕರ್ ಭವನ ನಿರ್ವಹಣೆಯನ್ನು ಮನಪಾಗೆ ನೀಡಬೇಕು ಎಂಬ ಬಗ್ಗೆ ಈಗಾಗಲೇ ಚರ್ಚೆ ನಡೆದಿದೆ. ಈ ಹಿಂದೆ ನಡೆದ ಸಭೆಯಲ್ಲಿ ಈ ಕುರಿತು ಅಭಿಪ್ರಾಯ ವ್ಯಕ್ತವಾಗಿದೆ. ಪಾಲಿಕೆಯಲ್ಲಿ ಪ್ರತ್ಯೇಕ ಎಂಜಿನಿಯರಿಂಗ್ ವಿಭಾಗ ಇದ್ದು, ತೆರಿಗೆ ಸಹಿತ ಇತರ ಮೂಲದಿಂದ ಅನುದಾನ ಹೊಂದಿಸಬಹುದು. ಸಾಮಾನ್ಯವಾಗಿ ಸಮಾಜ ಕಲ್ಯಾಣ ಇಲಾಖೆಯಿಂದ ಭವನ ನಿರ್ಮಾಣ ಮಾಡಲಾಗುತ್ತದೆ. ಖರ್ಚು-ವೆಚ್ಚದಲ್ಲಿ ಅನುದಾನದ ಕೊರತೆ ಇರುತ್ತದೆ. ಭವನಕ್ಕೆ ಬಾಡಿಗೆ ನಿಗದಿಪಡಿಸುವ ನಿಟ್ಟಿನಲ್ಲಿ ಮುಂದಿನ ಹಂತದಲ್ಲಿ ತೀರ್ಮಾನಿಸಲಾಗುತ್ತದೆ. -ಸಿದ್ದಲಿಂಗೇಶ ಬೇವಿನಮಟ್ಟಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು