Advertisement

ಉತ್ತಮ ಸಂವಿಧಾನ ನೀಡಿದ ಅಂಬೇಡ್ಕರ್‌

12:53 PM Apr 15, 2017 | Team Udayavani |

ಮೂಗೂರು (ತಿ.ನರಸೀಪುರ ತಾ): ಸಂವಿಧಾನ ಶಿಲ್ಪಿ, ಭಾತರತ್ನ ಡಾ. ಅಂಬೇಡ್ಕರ್‌ 126ನೇ ಜಯಂತಿ ಕಾರ್ಯಕ್ರಮ ವನ್ನು ಗ್ರಾಮದ ಅಂಬೇಡ್ಕರ್‌ ಸಮು ದಾಯ ಭವನದಲ್ಲಿ ಆಚರಿಸಲಾಯಿತು.

Advertisement

ಗ್ರಾಮದ ಮುಖಂಡ ಎಂ.ಕೆ.ಸಿದ್ದರಾಜು ಅಂಬೇಡ್ಕರ್‌ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು ದೇಶದಲ್ಲಿ ಅಸಮಾನತೆ, ಜಾತಿಯತೇ ಅಸ್ಪೃಶ್ಯತೆ ಆಚರಣೆಯಲ್ಲಿ ಇರುವುದನ್ನು ಗಮನಿಸಿದ ಬಾಬಾ ಸಾಹೇಬರು ಇದನ್ನು ಹೋಗಾಲಾಡಿಸಬೇಕೆಂದು ಪಣ ತೊಟ್ಟು ದೇಶ, ವಿದೇಶಗಳಲ್ಲಿ ಉನ್ನತ ಶಿಕ್ಷಣ ಪಡೆದು, ವಿವಿಧ ದೇಶದ ಸಂವಿಧಾನವನ್ನು ಅಧ್ಯಾಯನ ಮಾಡಿ ಭಾರತಕ್ಕೆ ದೇಶಕ್ಕೆ ಸಂವಿಧಾನವನ್ನು ಅರ್ಪಿಸಿ ಎಲ್ಲರೂ ಒಂದೇ ಸರ್ವರಿಗೂ ಸಮಪಾಲು, ಸಮಬಾಳು ತತ್ವ ಸಿದ್ಧಾಂತ ಜಗತ್ತಿಗೆ ಸಾರಿದರು.

ಇಂತಹ ಮಹಾನ್‌ ಚೈತನ್ಯವನ್ನು ಇಂದಿನ ಯುವ ಪೀಳಿಗೆ ಆದರ್ಶ ತತ್ವಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಜೀವನ ನಡೆಸಬೇಕೆಂದು ಸಲಹೆ ನೀಡಿದರು. ಗ್ರಾಪಂ ಮಾಜಿ ಸದಸ್ಯ ಎಂ.ರಾಜು ಮಾತನಾಡಿ, ಬಾಲ್ಯದಿಂದಲೇ ಹೋರಾಟದ ಮನೋಭಾವ ಹೊಂದಿದ್ದ ಬಾಬಾ ಸಾಹೇಬ್‌ ಅವರು ಶಿಕ್ಷಣ, ಸಂಘಟನೆ, ಹೋರಾಟ ಎಂಬ ಅಸ್ತ್ರವನ್ನು ಬಳಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದರು.

ಎಂ.ಆರ್‌.ಪುಟ್ಟಯ್ಯ, ಗ್ರಾ.ಪಂ ಸದಸ್ಯ ದಿಲೀಪ್‌ ಕುಮಾರ್‌, ಶೇಷಣ್ಣ, ಭಾನು ಪ್ರಕಾಶ್‌, ಮಹದೇವಯ್ಯ, ನಿಂಗರಾಜು, ಎಂ.ಡಿ.ಮಹೇಶ್‌, ಶಿವಕುಮಾರ್‌, ಸಂಘದ ಪದಾಧಿಕಾರಿ ಹಾಗೂ ಗ್ರಾಮಸ್ಥರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next