Advertisement

ಯಳಂದೂರು ವಿವಿದೆಡೆ ಅಂಬೇಡ್ಕರ್‌ ದಿನ

06:19 PM Apr 15, 2021 | Team Udayavani |

ಯಳಂದೂರು: ಪಟ್ಟಣ ಸೇರಿ ತಾಲೂಕಿನ ವಿವಿಧೆಡೆ ಡಾ.ಬಿ.ಆರ್‌.ಅಂಬೇಡ್ಕರ್‌ಜಯಂತಿ ನಡೆಯಿತು.ತಹಶೀಲ್ದಾರ್‌ ಕಚೇರಿ ಸಭಾಂಗಣದಲ್ಲಿತಾಲೂಕು ಆಡಳಿತ ಮತ್ತು ಸಮಾಜಕಲ್ಯಾಣ ಇಲಾಖೆ ವತಿಯಿಂದ ನಡೆದಜಯಂತಿಯಲ್ಲಿ ಮುಖ್ಯ ಭಾಷಣಕಾರರಾಗಿ ಶಿಕ್ಷಕ ವೈ.ಸಿ. ಕುಮಾರಸ್ವಾಮಿ ಭಾಗವಹಿಸಿ ಮಾತನಾಡಿದರು. ಅಂಬೇಡ್ಕರ್‌ವಿಶ್ವಕಂಡ ಶ್ರೇಷ್ಟ ದಾರ್ಶನಿಕರು. ಇಂತಹಮಹಾನ್‌ ಚೇತನ ದೇಶದಲ್ಲಿ ಜನಿಸಿದ್ದೇನಮ್ಮ ಸೌಭಾಗ್ಯ.

Advertisement

ಕೇವಲ ಸಂವಿಧಾನರಚನೆ ಮಾಡಿದ್ದಲ್ಲದೆ ದೇಶಕ್ಕೆ ಬೇಕಾಗುವನೀರಾವರಿ ಯೋಜನೆ, ಹಣಕಾಸು ನೀತಿಸೇರಿದಂತೆ ದೇಶದ ಸಮಗ್ರ ಅಭಿವೃದ್ಧಿಗೆಬೇಕಾದ ಎಲ್ಲಾ ರೀತಿಯ ದೂರ ದರ್ಶಿತ್ವಇವರಿಗಿತ್ತು ಎಂದರು.ಜಿಪಂ ಜೆ.ಯೋಗೇಶ್‌ ತಾಪಂ ಅಧ್ಯಕ್ಷಸಿದ್ದರಾಜು ಉಪಾಧ್ಯಕ್ಷೆ ಭಾಗ್ಯಾನಂಜಯ್ಯ,ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷವೈ.ಕೆ.ಮೋಳೆ ನಾಗರಾಜು, ಸದಸ್ಯ ರಾದನಿರಂಜನ್‌, ವೆಂಕಟೇಶ್‌, ಪಪಂ ಅಧ್ಯಕ್ಷೆಶಾಂತಮ್ಮ, ಉಪಾಧ್ಯಕ್ಷೆ ಲಕ್ಷ್ಮೀ ಮಲ್ಲುಸದಸ್ಯರಾದ ಮಹೇಶ್‌, ವೈ.ಜಿ. ರಂಗನಾಥ,ತಹಶೀಲ್ದಾರ್‌ ಜಯಪ್ರಕಾಶ್‌, ಇಒಉಮೇಶ್‌, ಬಿಇಒ ವಿ. ತಿರುಮಲಾ ಚಾರಿ,ಸಮಾಜ ಕಲ್ಯಾಣ ಇಲಾಖೆ ಜಯ ಕಾಂತ,ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ ಸಿಪಿಐಶೇಖರ್‌, ಪಿಎಸ್‌ಐ ಕರಿಬಸಪ್ಪ, ವಿವಿಧಇಲಾಖೆಗಳ ಅಧಿಕಾರಿಗಳು ಇದ್ದರು.

ಜಯಂತಿ ಆಚರಣೆ: ಯಳಂದೂರುಪಪಂ ಸೇರಿದಂತೆ ವಿವಿಧ ಸರ್ಕಾರಿಕಚೇರಿ, ತಾಲೂಕಿನ ಗ್ರಾಪಂ ಕಚೇರಿ ವಿವಿಧೆಡೆ ಅಂಬೇಡ್ಕರ್‌ ಜಯಂತಿ ಆಚರಿಸಲಾಯಿತು. ಕೆಲವರು ತಮ್ಮ ಮನೆಯಲ್ಲಿಅಂಬೇ ಡ್ಕರ್‌ ಅವರ ಭಾವಚಿತ್ರ ಇಟ್ಟುಆರತಿ ಎತ್ತಿ, ಕರ್ಪೂರ, ಗಂಧದಕಡ್ಡಿ ಹಚ್ಚಿದರು.

Advertisement

Udayavani is now on Telegram. Click here to join our channel and stay updated with the latest news.

Next