Advertisement

ಕೆರೆಯಲ್ಲಿ ಅಂಬೇಡ್ಕರ್‌ ಭವನ: ಕೋರ್ಟ್‌ ತಡೆಯಾಜ್ಞೆ

04:25 PM Oct 02, 2022 | Team Udayavani |

ಬಂಗಾರಪೇಟೆ: ಕೆರೆಯನ್ನು ಮುಚ್ಚಿ ಅನಧಿಕೃತವಾಗಿ ಅದರಲ್ಲಿ ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ಮುಂದಾಗಿದ್ದ ಶಾಸಕರಿಗೆ ಪಟ್ಟಣದ ಸಿವಿಲ್‌ ನ್ಯಾಯಾಲಯ ತಡೆಯಾಜ್ಞೆ ನೀಡುವ ಮೂಲಕ ಶಾಕ್‌ ನೀಡಿದೆ.

Advertisement

ಪಟ್ಟಣದ ಗಂಗಮ್ಮನಪಾಳ್ಯ ಬಡಾವಣೆಗೆ ಹೋಗುವ ರಸ್ತೆಯಲ್ಲಿರುವ ಸರ್ವೆ ನಂ 137ರಲ್ಲಿರುವ ಒಬ್ಬಟ್ಲುಕೆರೆಯನ್ನು ಮುಚ್ಚಿ ಕಾನೂನು ಬಾಹಿರವಾಗಿ ಪುರಸಭೆಯಲ್ಲಿ ಖಾತೆ ಮಾಡಿ ಸಮಾಜ ಕಲ್ಯಾಣ ಇಲಾಖೆಗೆ ಹಸ್ತಾಂತರ ಮಾಡಿ ಅಲ್ಲಿ ಬೃಹತ್‌ ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ಇದೇ 4ರಂದು ಶಂಕುಸ್ಥಾಪನೆ ಮಾಡಲು ಮುಂದಾಗಿದ್ದ ಶಾಸಕ ಎಸ್‌. ಎನ್‌.ನಾರಾಯಣಸ್ವಾಮಿ ತಾಲೂಕು ಆಡಳಿತ, ಪುರಸಭೆ ಹಾಗೂ ಜಿಲ್ಲಾಡಳಿತದ ಕ್ರಮವನ್ನು ಪ್ರಶ್ನಿಸಿ ಸಾರ್ವಜನಿಕರೊಬ್ಬರು ಪಟ್ಟಣದ ಸಿವಿಲ್‌ ನ್ಯಾಯಾಲಯ ಮೆಟ್ಟಿಲೇರಿದ್ದರು. ಪ್ರಕರಣವನ್ನು ವಿಚಾರಣೆ ಕೈಗೊಂಡ ನ್ಯಾಯಾಲಯ ತಾತ್ಕಾಲಿಕವಾಗಿ ತಡೆಯಾಜ್ಞೆ ನೀಡಿ ವಿಚಾರಣೆ ಪೂರ್ಣವಾಗುವವರೆಗೂ ಆ ಜಾಗದಲ್ಲಿ ಯಾವುದೇ ಕಟ್ಟಡಗಳನ್ನು, ಪೂಜೆ ಮತ್ತಿತರೇ ಚಟುವಟಿಕೆಗಳನ್ನು ಕೈಗೊಳ್ಳದಂತೆ ಆದೇಶ ನೀಡಿ ಜಿಲ್ಲಾಧಿಕಾರಿ, ತಹಶೀಲ್ದಾರ್‌, ಪುರಸಭೆ ಮುಖ್ಯಾಧಿಕಾರಿ, ಸಮಾಜಕಲ್ಯಾಣಾಧಿಕಾರಿ ಹಾಗೂ ವೃತ್ತ ನಿರೀಕ್ಷಕರಿಗೆ ನೋಟಿಸ್‌ ಜಾರಿ ಮಾಡಿದೆ.

ಪಟ್ಟಣದ ಒಬ್ಬಟ್ಲು ಕೆರೆಯನ್ನು ಪೂರ್ಣವಾಗಿ ಮುಚ್ಚಿ ಅಲ್ಲಿ ಅನಧಿಕೃತ ಕಟ್ಟಡಗಳು ನಿರ್ಮಾಣ ಮಾಡಿಕೆರೆಯನ್ನೇ ಮಾಯ ಮಾಡಲಾಗಿದೆ. ಈಗ 2 ಕೋಟಿ ರೂ. ವೆಚ್ಚದಲ್ಲಿ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಶಾಸಕ ಎಸ್‌.ಎನ್‌ .ನಾರಾಯಣಸ್ವಾಮಿ ಕೆರೆಯಲ್ಲಿ ಸರ್ಕಾರದ ಹಣವನ್ನು ಪೋಲು ಮಾಡಲು ಮುಂದಾಗಿದ್ದಾರೆ, ಅಲ್ಲದೆ ಅ. 4ರೊಳಗೆ ಅಲ್ಲಿ ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡುವುದಾಗಿ ಹೇಳಿದ್ದಾರೆ.

ಒಬ್ಬಟ್ಲು ಕೆರೆಯ ಪ್ರದೇಶವಾಗಿದ್ದು ರಾಜಕೀಯ ಪ್ರೇರಿತವಾಗಿ ಒತ್ತಡ ಹೇರಿ ಖಾತೆ ಮಾಡಿಸಿದ್ದು, ಹಸಿರು ನ್ಯಾಯಪೀಠ ತಮ್ಮ ಆದೇಶದಲ್ಲಿ ಕೆರೆ,ಕೆರೆ ಅಂಗಳ, ಬಫ‌ರ್‌ ಜೋನ್‌ ಪ್ರದೇಶದಲ್ಲಿ ಯಾವುದೇ ಅನ್ಯಚಟುವಟಿಕೆ ನಡೆಸದಂತೆ ನಿಷೇದಿಸಿದ್ದರೂ, ಸಾರ್ವಜನಿಕರೂ ದೂರು ನೀಡಿದ್ದರೂ, ಸ್ಥಳೀಯ ಶಾಸಕರು ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜನರ ಅನುಕಂಪ ಗಿಟ್ಟಿಸಿಕೊಳ್ಳಲು ವಿವಾದಿತ ಸ್ಥಳದಲ್ಲಿ ಅಂಬೇಡ್ಕರ್‌ ಭವನ ಕಟ್ಟಲು ಮುಂದಾಗಿದ್ದಾರೆ ಎಂದು ಎಂ.ಶ್ರೀಧರ್‌, ಸಾಮಾಜಿಕ ಕಾರ್ಯಕರ್ತ ಕೆ.ಸಿ.ರಾಜಣ್ಣ ಸಿವಿಲ್‌ ನ್ಯಾಯಾಲಯದಲ್ಲಿ ಧಾವೆ ಹೂಡಿದ್ದು ಅ. 19ರವರೆಗೂ ವಿವಾದಿತ ಸ್ಥಳದಲ್ಲಿ ಯಾವುದೇ ಚಟುವಟಿಕೆ ನಡೆಸದಂತೆ ತಡೆಯಾಜ್ಞೆ ನೀಡಿದೆ. ಇದೇ ರೀತಿ ಕೆಜಿಎಫ್‌ನಲ್ಲೂ ಉದ್ಯಾನವನದಲ್ಲಿ ಅಂಬೇಡ್ಕರ್‌ ಭವನ, ಮಾಜಿ ಶಾಸಕ ಆರ್ಮುಮುಗಂ ಸಮಾಧಿ ಇತರೇ ಕಟ್ಟಡಗಳನ್ನು ನಿರ್ಮಿಸಿದ್ದು, ಸಾರ್ವಜನಿಕರ ದೂರಿನ ಮೇರೆಗೆ ಕಟ್ಟಡ ತೆರವಿಗೆ ಹೈಕೋರ್ಟ್‌ ಆದೇಶ ನೀಡಿದೆ. ಕೆರೆ ಅಂಗಳದಲ್ಲಿ ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ಮುಂಚೆಯೇ ಸಿವಿಲ್‌ ಕೋರ್ಟ್‌ ತಡೆಯಾಜ್ಞೆ ನೀಡಿರುವುದರಿಂದ ಸರ್ಕಾರದ ಹಣ ಪೋಲಾಗುವುದನ್ನು ತಡೆದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next