Advertisement

ಕೋಟಿ ವೆಚ್ಚದ ಡಾ|ಅಂಬೇಡ್ಕರ್‌ ಭವನ ಉದ್ಘಾಟನೆ

04:24 PM Aug 17, 2018 | Team Udayavani |

ಬ್ಯಾಡಗಿ: ಪಟ್ಟಣದಲ್ಲಿರುವ ಡಾ| ಬಿ.ಆರ್‌. ಅಂಬೇಡ್ಕರ್‌ ಭವನಕ್ಕೆ ವಿದ್ಯುತ್‌ ಸೌಲಭ್ಯ ಹಾಗೂ ಕಂಪೌಂಡ್‌ ನಿರ್ಮಾಣಕ್ಕೆ ಅಗತ್ಯವಿರುವ ಹೆಚ್ಚಿನ ಅನುದಾನ ಒದಗಿಸುವುದಾಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಭರವಸೆ ನೀಡಿದರು. ಸಮಾಜ ಕಲ್ಯಾಣ ಇಲಾಖೆ ಹಾಗೂ ನಿರ್ಮಿತಿ ಕೇಂದ್ರದ ಆಶ್ರಯದಲ್ಲಿ ನಿರ್ಮಿಸಿದ 1 ಕೋಟಿ ರೂ. ಗಳ ವೆಚ್ಚದ ನೂತನ ಡಾ| ಬಿ.ಆರ್‌.ಅಂಬೇಡ್ಕರ ಭವನ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ವಾರವಷ್ಟೇ ಸಮಾಜ ಕಲ್ಯಾಣ ಇಲಾಖೆಯ ನೂತನ ಸಮಿತಿ ರಚನೆಯಾಗಿದೆ. ಅದರಲ್ಲಿ ನನ್ನನ್ನು ನಿರ್ದೇಶಕರನ್ನಾಗಿ ನೇಮಿಸಲಾಗಿದ್ದು ಇದರಿಂದಾಗಿ ಹಿಂದುಳಿದ ವರ್ಗದ ಜನತೆಯ ಹಲವಾರು ಬೇಡಿಕೆಗಳನ್ನು ಈಡೇರಸಲು ಬೇಕಾಗಿರುವ ಅನುದಾನವನ್ನು ಪಡೆಯಲು ಸಹಕಾರಿಯಾಗಲಿದೆ ಎಂದರು.

Advertisement

ಒಂದು ಕೋಟಿ ವೆಚ್ಚದಲ್ಲಿ ಸುಸಜ್ಜಿತವಾಗಿ ಭವನ ನಿರ್ಮಾಣವಾಗಿದೆ. ಆದರೆ, ಸುತ್ತ ಮುತ್ತಲೂ ಕಂಪೌಂಡ್‌ ಸೇರಿದಂತೆ ವಿದ್ಯುದ್ಧೀಕರಣಕ್ಕೆ ಸುಮಾರು ಇನ್ನೂ 50 ಲಕ್ಷ ರೂ. ಅನುದಾನದ ಅವಶ್ಯಕತೆಯಿದ್ದು ಅದನ್ನು ಶೀಘ್ರದಲ್ಲೆ ಒದಗಿಸುವುದಾಗಿ ತಿಳಿಸಿದರು. ಸುರೇಶ ಅಸಾದಿ ಮಾತನಾಡಿ, ತಾಲೂಕಿನ ಹಲವಾರು ಗ್ರಾಮಗಳಲ್ಲಿ ಇಗಾಗಲೇ ಅಂಬೇಡ್ಕರ್‌ ಭವನಗಳನ್ನು ನಿರ್ಮಿಸಲಾಗಿದೆ. ಇನ್ನೂ ಕೆಲವೊಂದು ಗ್ರಾಮಗಳಲ್ಲಿ ಕಟ್ಟಡದ ಕಾಮಗಾರಿಗಳು ನಡೆಯುತ್ತಲಿವೆ. ಗ್ರಾಮೀಣ ಪ್ರದೇಶಗಳಲ್ಲಿಯ ಪರಿಶಿಷ್ಟ ಜಾತಿ ಹಾಗೂ ಪಂಗಡದ ಕಾಲೋನಿಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಚಿವರ ಜೊತೆಗೆ ಈಗಾಗಲೇ ಶಾಸಕರು ಹಲವಾರು ಬಾರಿ ಚರ್ಚಿಸಿದ್ದು, ಹೆಚ್ಚಿನ ಅನುದಾನಕ್ಕೆ ಬೇಡಿಕೆ ಸಲ್ಲಿಸಿದ್ದಾರೆ ಎಂದರು.

ಸಮಾಜ ಕಲ್ಯಾಣಾ ಧಿಕಾರಿ ಹನುಮಂತಪ್ಪ ಲಮಾಣಿ, ಪುರಸಭೆ ಅಧ್ಯಕ್ಷ ಬಸವರಾಜ ಛತ್ರದ, ಉಪಾಧ್ಯಕ್ಷೆ ದ್ರಾಕ್ಷಾಯಣೆಮ್ಮ ಪಾಟೀಲ, ಸದಸ್ಯರಾದ ಶಾಂತಮ್ಮ ಬೇವಿನಮಟ್ಟಿ, ದುರ್ಗೇಶ ಗೋಣೆಮ್ಮನವರ, ಬಸವರಾಜ ಹಂಜಿ, ಪ್ರಶಾಂತ ಯಾದವಾಡ, ಮಂಜುನಾಥ ಭೋವಿ, ಮಲ್ಲನಗೌಡ್ರ ಭದ್ರಗೌಡ್ರ, ರೋಹಿಣಿ ಹುಣಿಸಿಮರದ, ಎಪಿಎಂಸಿ ನಿರ್ದೇಶಕ ವಿಜಯ ಮಾಳಗಿ, ತಿಮ್ಮಣ್ಣ ವಡ್ಡರ, ನಾಗರಾಜ ಹಾವನೂರ, ಮಾರುತಿ ಹಂಜಿ, ಹೊನ್ನಪ್ಪ ತಗಡಿನಮನಿ, ರವಿ ಹುಣಿಸಿಮರದ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಎಚ್‌.ಡಿ.ಶಾಂತಕುಮಾರ, ರಾಮಣ್ಣ ಉಕ್ಕುಂದ, ಮಲ್ಲೇಶಪ್ಪ ಚಿಕ್ಕಣ್ಣನವರ, ಸುರೇಶ ಯತ್ನಳ್ಳಿ ಸೇರಿದಂತೆ ಇನ್ನಿತರರಿದ್ದರು. ಬಿ.ಎಫ್‌. ದೊಡ್ಡಮನಿ ಸ್ವಾಗತಿಸಿದರು. ಎಂ.ಎಫ್‌. ಕರಿಯಮ್ಮನವರ ನಿರೂಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next