Advertisement

ಅಂಬಾಟಿ ರಾಯುಡು ಮತ್ತೆ ಬರೋಡ ತಂಡಕ್ಕೆ

11:15 PM Jul 13, 2022 | Team Udayavani |

ವಡೋದರ: ಸೀನಿಯರ್‌ ಕ್ರಿಕೆಟರ್‌ ಅಂಬಾಟಿ ರಾಯುಡು ಮುಂದಿನ ದೇಶಿ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಮತ್ತೆ ಬರೋಡ ತಂಡವನ್ನು ಪ್ರತಿನಿಧಿಸಲಿದ್ದಾರೆ.

Advertisement

ಅಂಬಾಟಿ ತಿರುಪತಿ ರಾಯುಡು ಇದಕ್ಕೂ ಮೊದಲೊಮ್ಮೆ ಬರೋಡ ತಂಡವನ್ನು ಪ್ರತಿನಿಧಿಸಿದ್ದರು. ಜತೆಗೆ ಹೈದರಾಬಾದ್‌, ಆಂಧ್ರ ಪ್ರದೇಶ, ವಿದರ್ಭ ತಂಡಗಳ ಪರವಾಗಿಯೂ ಆಡಿದ್ದರು.

ಹೂಡಾ ಮರಳಿ ಗೂಡಿಗೆ?
ಇದೇ ವೇಳೆ ದೀಪಕ್‌ ಹೂಡಾ ಅವರನ್ನು ಮರಳಿ ತಂಡಕ್ಕೆ ಕರೆತರಲು ಬರೋಡ ಪ್ರಯತ್ನಿಸುತ್ತಿದೆ. ಸಹ ಆಟಗಾರ ಕೃಣಾಲ್‌ ಪಾಂಡ್ಯ ಜತೆ ಜಗಳ ಮಾಡಿಕೊಂಡ ಬಳಿಕ ಹೂಡಾ ರಾಜಸ್ಥಾನ ಪರ ಆಡುತ್ತಿದ್ದಾರೆ. ಈಗ ಟೀಮ್‌ ಇಂಡಿಯಾದಲ್ಲಿ ಯಶಸ್ಸು ಕಾಣುತ್ತಿರುವುದರಿಂದ ಹೂಡಾ ಅವರ ವರ್ಚಸ್ಸು ಕೂಡ ಹೆಚ್ಚಿದೆ.

Advertisement

Udayavani is now on Telegram. Click here to join our channel and stay updated with the latest news.

Next