Advertisement
ಭಾರತ ತಂಡ ಆರಂಭಿಕ ನಾಲ್ಕು ವಿಕೆಟ್ ಕೇವಲ 18 ರನ್ ಗೆ ಕಳೆದುಕೊಂಡಿತ್ತು. ನಂತರ ಆಲ್ ರೌಂಡರ್ ವಿಜಯ ಶಂಕರ್ ಜೊತೆಗೂಡಿದ ರಾಯುಡು ಉಪಯುಕ್ತ 98 ರನ್ ಜೊತೆಯಾಟ ನಡೆಸಿದರು. ವಿಜಯ ಶಂಕರ್ 45 ರನ್ ಗೆ ರನ್ ಔಟ್ ಗೆ ಬಲಿಯಾದರು. ನಂತರ ಕೇದಾರ್ ಜಾದವ್ ಜೊತೆಗೂಡಿದ ಅಂಬಾಟಿ ರಾಯುಡು ಭಾರತವನ್ನು ಉತ್ತಮ ಸ್ಥಿತಿಗೆ ಕೊಂಡೊಯ್ದರು. ಆದರೆ 90 ರನ್ ಗಳಿಸಿದ ರಾಯುಡು ಮ್ಯಾಟ್ ಹೆನ್ರಿ ಗೆವಿಕೆಟ್ ಒಪ್ಪಿಸಿ ಶತಕ ವಂಚಿತರಾದರು. ಕೇದಾರ್ ಜಾಧವ್ ಉಪಯುಕ್ತ 34 ರನ್ ಗಳಿಸಿದರೆ, ಕೊನೆಯಲ್ಲಿ ಮುನ್ನುಗ್ಗಿ ಬಾರಿಸಿದ ಹಾರ್ದಿಕ್ ಪಾಂಡ್ಯಾ 45 ಬಾರಿಸಿದರು. ಇದರಲ್ಲಿ ಭರ್ಜರಿ 5 ಸಿಕ್ಸರ್ ಒಳಗೊಂಡಿತ್ತು.
ಕಿವೀಸ್ ಪರ ಮ್ಯಾಟ್ ಹೆನ್ರಿ ನಾಲ್ಕು ವಿಕೆಟ್ ಪಡೆದರೆ, ಟ್ರೆಂಟ್ ಬೌಲ್ಟ್ 3 ವಿಕೆಟ್ ಪಡೆದರು.