Advertisement

ಅಂಬರೀಷ್‌ ಪುತ್ಥಳಿ ನಿರ್ಮಾಣ ಶಾಸಕ ಮಂಜುನಾಥ್‌ ಚಾಲನೆ

05:40 PM Feb 05, 2020 | Suhan S |

ಮಾಗಡಿ: ಮೇರು ವ್ಯಕ್ತಿತ್ವದ ಡಾ.ಅಂಬರೀಷ್‌ ಅವರು ರಾಜಕೀಯ ಮತ್ತು ಸಿನಿಮಾ ರಂಗದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ನಾಡಿಗೆ ತನ್ನದೇ ಆದ ಕೊಡುಗೆ ನೀಡಿರುವ ಚಿತ್ರನಟ, ಮಾಜಿ ಸಂಸದ ದಿ. ಡಾ. ಅಂಬರೀಷ್‌ ಅವರ ಪುತ್ಥಳಿಯನ್ನು ನಗರದಲ್ಲಿ ಸ್ಥಾಪಿಸಲಾಗುವುದು ಎಂದು ಶಾಸಕ ಎ.ಮಂಜುನಾಥ್‌ ತಿಳಿಸಿದರು.

Advertisement

ಪಟ್ಟಣದ ಕೆಂಪೇಗೌಡ ವೃತ್ತದ ಬಳಿ ಡಾ.ಅಂಬರೀಷ್‌ ಅಭಿಮಾನಿಗಳ ಸಂಘದ ವತಿಯಿಂದ ಪುತ್ಥಳಿ ಸ್ಥಾಪನೆಗೆ ಏರ್ಪಡಿಸಿದ್ದ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಜಾತ್ಯಾತೀತ ನಿಲುವನ್ನು ಹೊಂದಿದ್ದ ಅವರಪುತ್ಥಳಿ ಸ್ಥಾಪನೆ ಮಾಡುವ ಮೂಲಕ ಅವರ ಹೆಸರನ್ನು ಅಜಾಮರವಾಗಿ ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಇದಕ್ಕೆ ನಾನೂ ಅಗತ್ಯ ನೆರವು ನೀಡುವುದಾಗಿ ತಿಳಿಸಿದರು.

ಸಮಾಜ ಸೇವಕ ಎ.ಎಚ್‌.ಬಸವರಾಜು ಮಾತನಾಡಿ, ನೇರವಾಗಿ ಮಾತನಾಡುವ ಅಂಬರೀಷ್‌ ಅವರು ನಾಗರಹಾವು ಚಿತ್ರದ ಕಳನಾಯಕನ ಪಾತ್ರದಿಂದ ಕನ್ನಡಿಗರ ಜನಮಾಸದಲ್ಲಿ ಹೀರೋ ಆಗಿ ಮಿಂಚಿದರು. ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಮೇರು ವ್ಯಕ್ತಿತ್ವದ ಡಾ.ಅಂಬರೀಷ್‌ ಅವರ ಪುತ್ಥಳಿಕೆ ಸ್ಥಾಪನೆ ಉತ್ತಮ ಕೆಲಸ ಇದಕ್ಕೆ ನಾನೂ ಕೈಜೋಡಿಸುವುದಾಗಿ ತಿಳಿಸಿದರು. ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಡಾ. ಎಚ್‌. ಎಂ.ಕೃಷ್ಣಮೂರ್ತಿ, ಅಂಬರೀಷ್‌ ಅವರು ಕೆಂಪೇಗೌಡ ಅಭಿಮಾನಿಯಾಗಿದ್ದರು. ಮಾಗಡಿಗೂ ಅನೇಕ ಭಾರಿ ಆಗಮಿಸಿದ್ದರು. ಕೆಂಪೇಗೌಡ ಕೋಟೆಯಲ್ಲಿ ಕೆಂಪೇಗೌಡರ ಹೆಸರಿನಲ್ಲಿ ಅವರಿಗೆ ಖಡ್ಗವನ್ನು ನೀಡಲಾಗಿತ್ತು. ಅವರ ನಡೆ, ನುಡಿ ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದೆ. ಅವರ ಪುತ್ಥಳಿ ಸುಂದರವಾಗಿ ಮೂಡಿಬರಲಿ ಅವರ ಆದರ್ಶಗಳು ನಮ್ಮೆಲ್ಲರಿಗೂ ದಾರಿ ದೀಪವಾಗಿದೆ ಎಂದು ತಿಳಿಸಿದರು.

ಡಾ.ಅಂಬರೀಷ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ಟಿ.ಕೆ. ರಾಮು, ಎಂ.ಕೆ.ಧನಂಜಯ, ಕೆ.ಕೃಷ್ಣಮೂರ್ತಿ, ಪುರಸಭಾ ಸದಸ್ಯರಾದ ಕೆ.ವಿ.ಬಾಲು, ಹೇಮಾವತಿ, ವಿಜಯ, ರೂಪೇಶ್‌, ನಂದಿ ಡ್ರೈವಿಂಗ್‌ ವ್ಯವಸ್ಥಾಪಕ ನಿರ್ದೇಶಕ ನರಸಿಂಹಮೂರ್ತಿ, ಜಿಪಂ ಮಾಜಿ ಅಧ್ಯಕ್ಷ ಎಂ.ಕೆ.ಧನಂಜಯ, ಪಿ.ವಿ.ಸೀತಾರಾಂ, ರವಿಕುಮಾರ್‌, ರಂಗನಾಥ್‌, ಜ್ಯೋತಿನಗರದ ಧನಂಜಯ, ಶಂಕರ್‌, ಶಿವಣ್ಣ, ಮೂರ್ತಿ, ವೆಂಕಟೇಶ್‌, ಕಾಂತರಾಜ, ಜಯಕುಮಾರ್‌, ಚಂದ್ರಣ್ಣ, ರಂಗೇಗೌಡ, ಜಗದೀಶ್‌ ಸೇರಿದಂತೆ ನೂರಾರು ಅಭಿಮಾನಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next