Advertisement

ಸುದೀಪ್‌ ನಿರ್ಮಾಣದಲ್ಲಿ ಅಂಬರೀಶ್‌ ಹೊಸ ಚಿತ್ರ!

08:43 PM Oct 13, 2017 | Team Udayavani |

ಅಂಬರೀಶ್‌ ಅಭಿನಯದಲ್ಲಿ ಸುದೀಪ್‌ ಒಂದು ಹೊಸ ಚಿತ್ರ ನಿರ್ಮಿಸುತ್ತಿದ್ದಾರೆ ಮತ್ತು ಆ ಚಿತ್ರಕ್ಕೆ ‘ಅಂಬಿ ನಿಂಗೆ ವಯಸ್ಸಾಯ್ತೋ’ ಎಂಬ ಹೆಸರನ್ನು ಇಡಲಾಗಿದೆ ಎಂಬ ಮಾತು ಕಳೆದ ಕೆಲವು ದಿನಗಳಿಂದ ಕೇಳಿ ಬರುತ್ತಲೇ ಇತ್ತು. ಆದರೆ, ಅಂಬರೀಶ್‌ ಅವರಾಗಲೀ, ಸುದೀಪ್‌ ಆಗಲೀ ಈ ಕುರಿತು ಮಾತಾಡಿರಲಿಲ್ಲ. ಈಗ ಸ್ವತಃ ಸುದೀಪ್‌ ಅವರೇ ಅಂಬರೀಶ್‌ ಅಭಿನಯದಲ್ಲಿ ಚಿತ್ರ ನಿರ್ಮಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

Advertisement

‘ಅಂಬಿ ನಿಂಗೆ ವಯಸ್ಸಾಯ್ತೋ’ ಎಂಬ ಚಿತ್ರವು ತಮಿಳಿನ ‘ಪವರ್‌ ಪಾಂಡಿ’ ಚಿತ್ರದ ರೀಮೇಕ್‌ ಇದಾಗಿದ್ದು, ಅಲ್ಲಿ ರಾಜ್‌ಕಿರಣ್‌ ಮಾಡಿದ ಪಾತ್ರವನ್ನು ಇಲ್ಲಿ ಅಂಬರೀಶ್‌ ಮಾಡುತ್ತಿದ್ದಾರೆ. ಚಿತ್ರಕ್ಕೆ ‘ಅಂಬಿ ನಿಂಗೆ ವಯಸ್ಸಾಯ್ತೋ’ ಎಂಬ ಹೆಸರನ್ನು ಸುದೀಪ್‌ ಅವರೇ ಇಟ್ಟಿದ್ದಾರಂತೆ. ‘ಅಂಬರೀಶ್‌ ಅವರಿಗೆ ಈ ಸಿನಿಮಾ ಮಾಡಬೇಕು ಅಂತ ತುಂಬಾ ಆಸೆ. ಅವರ ಎನರ್ಜಿ ನೋಡಿದೆ. ಬಹಳ ಫ್ರೆಶ್‌ ಆಗಿ ಕಾಣುತ್ತಾರೆ. ಅಷ್ಟೇ ಅಲ್ಲ, ಚರ್ಚೆಗಳಿಗೆ ಬಂದು ಕೂರುತ್ತಾರೆ. ಬಹಳ ಕಡಿಮೆ ನಾನು ಆತರ ನೋಡಿದ್ದು. ಎಷ್ಟೋ ಸರಿ, ಅವರೇ ಚರ್ಚೆಗೆ ಕರೀತಾರೆ. ಹೆಸರು ಬಹಳ ಚೆನ್ನಾಗಿದೆ ಅನಿಸ್ತು. ಟ್ರೈಲರ್‌ ಇನ್ನೂ ಚೆನ್ನಾಗಿರುತ್ತೆ. ಸಾಮಾನ್ಯವಾಗಿ ನಾವು ನಮಗೆ ವಯಸ್ಸಾಗಿರುವುದನ್ನು ಒಪ್ಪುವುದಿಲ್ಲ. ಅಂತಹ ಪಾತ್ರವದು. ಆ ಪಾತ್ರ ಅವರಿಗೆ ಹೇಳಿ ಮಾಡಿಸಿದಂತಿದೆ. ಅದನ್ನು ಅವರೇ ಮಾಡಬೇಕು’ ಎನ್ನುತ್ತಾರೆ ಸುದೀಪ್‌. ಇನ್ನು ಈ ಚಿತ್ರವನ್ನು ನಂದಕಿಶೋರ್‌ ನಿರ್ದೇಶಿಸುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next