Advertisement

ಇ-ಮಾರುಕಟ್ಟೆ ವಶಕ್ಕೆ ಅಂಬಾನಿ ಸಜ್ಜು

09:39 AM Oct 29, 2019 | Team Udayavani |

ನವದೆಹಲಿ: ಭಾರತದಲ್ಲಿ ಅತಿ ದೊಡ್ಡದಾದ ಇ-ಮಾರಾಟ ಜಾಲತಾಣವೊಂದನ್ನು ಆರಂಭಿಸಲು ಸಿದ್ಧತೆ ನಡೆಸಿರುವ ರಿಲಯನ್ಸ್‌ ಕಂಪನಿಯ ಮುಖ್ಯಸ್ಥ ಮುಖೇಶ್‌ ಅಂಬಾನಿ, ಅಂದಾಜು, 1,70,000 ಕೋಟಿ ರೂ.ಗಳ ಮೊತ್ತದಲ್ಲಿ ಇ- ಕಾಮರ್ಸ್‌ ಸಂಸ್ಥೆ ಸ್ಥಾಪಿಸುವ ಮೂಲಕ ದೇಶೀಯ ಇ-ಮಾರುಕಟ್ಟೆ ರಂಗದಲ್ಲಿ ಸ್ಪರ್ಧೆಗಿಳಿಯಲು ಸಿದ್ಧರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

ಹೊಸ ಇ-ಮಾರಾಟ ಜಾಲತಾಣದಿಂದ ಬರುವ ಆದಾಯವನ್ನು ರಿಲಯನ್ಸ್‌ ಸಂಸ್ಥೆಯ ಮಾಲೀಕತ್ವದಲ್ಲೇ ಇರುವ ಜಿಯೋ ಟೆಲಿಕಾಂ ಕಂಪನಿಗೆ ವರ್ಗಾಯಿಸುವ ಪ್ರಸ್ತಾವನೆಗೆ ರಿಲಯನ್ಸ್‌ ಇಂಡಸ್ಟ್ರೀಸ್‌ ಪ್ರೈವೇಟ್‌ ಲಿಮಿಟೆಡ್‌ನ‌ ಆಡಳಿತ ಮಂಡಳಿ ಒಪ್ಪಿಗೆ ನೀಡಿದೆ. ಆ ಮೂಲಕ, ಈಗಾಗಲೇ ಮಾರುಕಟ್ಟೆಯಲ್ಲಿ 65,000 ಕೋಟಿ ರೂ. ಮೌಲ್ಯದ ಜಿಯೋ ಕಂಪನಿಯು 2020ರ ಮಾರ್ಚ್‌ ವೇಳೆಗೆ ಸಂಪೂರ್ಣ ಸಾಲ ಮುಕ್ತವಾಗುವ ಆಶಯವನ್ನು ಕಂಪನಿ ಹೊಂದಿದೆ.

ಇ-ಮಾರುಕಟ್ಟೆಗೆ ರಿಲಯನ್ಸ್‌ ಕಂಪನಿ ಪ್ರವೇಶ, ಈಗಾಗಲೇ ಈ ಕ್ಷೇತ್ರದಲ್ಲಿ ಮಂಚೂಣಿಯಲ್ಲಿರುವ ಅಮೆಜಾನ್‌ ಹಾಗೂ ಫ್ಲಿಪ್‌ಕಾರ್ಟ್‌ ಕಂಪನಿಗಳಿಗೆ ಹೊಸ ಸವಾಲನ್ನು ಒಡ್ಡಲಿದೆ. ಹೊಸ ಇ-ಮಾರಾಟ ವ್ಯವಸ್ಥೆಗಾಗಿ ಬಂಡವಾಳ ತರುವಲ್ಲಿಯೂ ಅಂಬಾನಿ ಸಫ‌ಲರಾಗುತ್ತಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next