ಮಲ್ಪೆ: ಯಕ್ಷಗಾನ ನಮ್ಮ ನೆಲದ ಸರ್ವಾಂಗ ಸುಂದರ ಕಲೆ. ಇದು ಮಕ್ಕಳ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯಕ್ಕೆ ಪೂರಕವಾಗಿರುವ ಕಲಾ ಸಂಪತ್ತು. 61ವರ್ಷಗಳ ಕಾಲ ಕಲೆಯನ್ನು ಉಳಿಸಿ ಬೆಳೆಸಿದ ಅಂಬಲಪಾಡಿ ಲಕ್ಷಿ$¾àಜನಾರ್ದನ ಯಕ್ಷಗಾನ ಕಲಾ ಮಂಡಳಿ ಆಯೋಜಿಸಿದ ಈ ಶಿಬಿರ ಅತ್ಯಂತ ಸ್ತುತ್ಯರ್ಹವಾದ ಕಲಾ ಸೇವೆ ಎಂದು ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ| ನಿ. ಬಿ. ವಿಜಯ ಬಲ್ಲಾಳ್ ಹೇಳಿದರು.
ಅಂಬಲಪಾಡಿ ಲಕ್ಷಿ$¾àಜನಾರ್ದನ ಯಕ್ಷಗಾನ ಕಲಾ ಮಂಡಳಿ 11ದಿನಗಳ ಕಾಲ ನಡೆಸಿದ ಯಕ್ಷಗಾನ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಶಿಬಿರದ ನಿರ್ದೇಶಕರಾದ ಕೆ.ಜೆ ಕೃಷ್ಣರನ್ನು ವಿಜಯ ಬಲ್ಲಾಳ್ ಅವರು ಸಮ್ಮಾನಿಸಿದರು. ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ಹಾಗೂ ದೇವಳದ ಪ್ರಸಾದ ನೀಡಿ ಪ್ರೋತ್ಸಾಹಿಸಲಾಯಿತು.
ಜಿಲ್ಲಾ ಲಯನ್ಸ್ ಉಪ ಗವರ್ನರ್ ವಿ.ಜಿ. ಶೆಟ್ಟಿ ಹಾಗೂ ರಾಮ ಭವನದ ಯು. ವಿಶ್ವನಾಥ ಶೆಣೆ„ ಮಂಡಳಿಯ ಉಪಾಧ್ಯಕ್ಷ ಕೆ. ಅಜಿತ್ ಕುಮಾರ್ ಹಾಗೂ ಕೆ.ಜೆ. ಕೃಷ್ಣ ಉಪಸ್ಥಿತರಿದ್ದರು.
ಮಂಡಳಿಯ ಅಧ್ಯಕ್ಷ ಮುರಲಿ ಕಡೆಕಾರ್ ಸ್ವಾಗತಿಸಿದರು. ಕೋಶಾಧಿಕಾರಿ ಎ. ನಟರಾಜ ಉಪಾಧ್ಯ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಕೆ.ಜೆ. ಕೃಷ್ಣ ವಂದಿಸಿದರು.