Advertisement
ಕಾಮಗಾರಿ ಸ್ಥಗಿತವಾಗಿದ್ದ ಬಗ್ಗೆ ಉದಯವಾಣಿ ಫೆ. 14ರಂದು “ಅರ್ಧಕ್ಕೆ ನಿಂತ ಅಂಬಾಗಿಲು- ಪೆರಂಪಳ್ಳಿ ರಸ್ತೆ ಕಾಮಗಾರಿ!’ ಶೀರ್ಷಿಕೆ ಅಡಿಯಲ್ಲಿ ವಿಸ್ತೃತ ವರದಿ ಪ್ರಕಟಿಸಿತ್ತು.ಇದಕ್ಕೆ ಸ್ಪಂದಿಸಿದ ಲೋಕೋಪಯೋಗಿ ಇಲಾಖೆ ಗುತ್ತಿಗೆದಾರರ ಮೂಲಕ ಕಾಮಗಾರಿ ಪುನಃ ಆರಂಭಿಸಿದೆ. ಇದೀಗ ರಸ್ತೆಗೆ ಅಂಬಾಗಿಲಿನಿಂದ ಬಲಬದಿಯಲ್ಲಿ ಯಂತ್ರಗಳ ಮೂಲಕ ಜಲ್ಲಿಕಲ್ಲನ್ನು ಹೊದೆಸಿ, ಸಮತಟ್ಟು ಮಾಡುವ ಕೆಲಸ ನಡೆಯುತ್ತಿದೆ. 23 ಕೋ. ರೂ. ವೆಚ್ಚದಲ್ಲಿ ಚತುಷ್ಪಥ ಕಾಮಗಾರಿ ರಸ್ತೆ ನಿರ್ಮಾಣ ಯೋಜನೆ ರೂಪಿಸಲಾಗಿದ್ದು, ಒಟ್ಟು
3.9 ಕಿ.ಮೀ. ರಸ್ತೆಯಲ್ಲಿ 1.5 ಕಿ.ಮೀ. ರಸ್ತೆ ಕಾಮಗಾರಿ ಬಾಕಿ ಉಳಿದಿತ್ತು. ಕಾಮಗಾರಿ ಬೇಗ ನಿರ್ವಹಿಸುವಂತೆ. ಇಲಾಖೆ ಹಿರಿಯ ಎಂಜಿನಿಯರ್, ಗುತ್ತಿಗೆದಾರರಿಗೆ ನೋಟಿಸ್ ಜಾರಿ ಮಾಡಿದ್ದರು.
ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದ್ದರಿಂದ ಅಂಬಾಗಿಲಿನಿಂದ ರೈಲ್ವೇ ಮೇಲ್ಸೇತುವೆವರೆಗಿನ ರಸ್ತೆ ತೀರ ಹದಗೆಟ್ಟಿತ್ತು. ವಿಪರೀತ ಧೂಳು, ಕೆಸರು, ಕಲ್ಲುಗಳ ಕಣದಿಂದ ದ್ವಿಚಕ್ರ ವಾಹನ ಸವಾರರು, ಅರ್ಧಂಬರ್ಧ ಕಾಮಗಾರಿಯಿಂದ ರಸ್ತೆ ಬದಿಯ ಅಂಗಡಿ, ಮುಂಗಟ್ಟು, ಹೊಟೇಲ್ ವ್ಯಾಪಾರಿಗಳು, ಸ್ಥಳೀಯರು ಧೂಳಿನಿಂದ ಹೈರಾಣಾಗಿದ್ದರು.
ಅರ್ಧಕ್ಕೆ ನಿಂತಿದ್ದ ಅಂಬಾಗಿಲಿನಿಂದ ರೈಲ್ವೇ ಮೇಲ್ಸೇತುವೆವರೆಗಿನ 1.5 ಕಿ.ಮೀ. ರಸ್ತೆ ಕಾಮಗಾರಿ ಪುನಃ ಆರಂಭಗೊಂಡಿದೆ. ಮೊದಲ ಹಂತದಲ್ಲಿ ಒಂದು ಬದಿಯ ಕಾಮಗಾರಿ ಮುಂದಿನ 10 ದಿನದಲ್ಲಿ ಪೂರ್ಣಗೊಳಿಸಲಿದ್ದೇವೆ. ಮುಂದೆ ಕೆಲಸ ನಿರಂತರ ನಡೆಯಲಿದ್ದು, ಶೀಘ್ರ ಇನ್ನೊಂದು ಬದಿ ಕಾಮಗಾರಿ ಪ್ರಾರಂಭಿಸಲಿದ್ದೇವೆ.
-ಜಗದೀಶ್ ಭಟ್, ಎಇಇ, ಲೋಕೋಪಯೋಗಿ ಇಲಾಖೆ, ಉಡುಪಿ. ಇದನ್ನೂ ಓದಿ : ಸ್ಮಾರ್ಟ್ ನಗರದಲ್ಲಿ ಸ್ಮಾರ್ಟ್ “ಸೈಕಲ್ ಟ್ರ್ಯಾಕ್ ‘! ಸೈಕಲ್ ಸ್ನೇಹಿ ಮಂಗಳೂರು