Advertisement

ಅಮೆಝಾನ್‌-ಬಿಓಬಿ ಟೈಅಪ್‌: ಮಾರಾಟಗಾರರಿಗೆ ಮೈಕ್ರೋ ಲೋನ್‌

04:16 PM Sep 15, 2017 | udayavani editorial |

ಮುಂಬಯಿ : ಇ-ಕಾಮರ್ಸ್‌ ರಂಗದ ದಿಗ್ಗಜ ಎನಿಸಿರುವ ಅಮೆಝಾನ್‌ ಸಂಸ್ಥೆ ತನ್ನ ಮಾರಾಟಗಾರರಿಗೆ ಮೈಕ್ರೋ ಲೋನ್‌ ದೊರಕಿಸಿಕೊಡುವ ಸಲುವಾಗಿ ಬ್ಯಾಂಕ್‌ ಆಫ್ ಬರೋಡ ಜತೆಗೆ ಟೈಅಪ್‌ ಮಾಡಿಕೊಂಡಿರುವುದಾಗಿ ಹೇಳಿದೆ.

Advertisement

ಮಾರುಕಟ್ಟೆ ಮಾರಾಟಗಾರರಿಗೆ ಆಹ್ವಾನದ ನೆಲೆಯಲ್ಲಿ ಮಾತ್ರವೇ ಮೈಕ್ರೋ ಲೋನ್‌ ಕೊಡಲಾಗುವುದು. ಅಮೆಝಾನ್‌ ಈ ವರ್ಷ ಜುಲೈ ತಿಂಗಳಲ್ಲೇ ಈ ಕಾರ್ಯಕ್ರಮವನ್ನು ಬ್ಯಾಂಕ್‌ ಬರೋಡ ಜತೆಗೆ ರೂಪಿಸಿತ್ತು.

ಅಮೆಝಾನ್‌ ಮಾರುಕಟ್ಟೆ ಮಾರಾಟಗಾರರಿಗೆ ವಾರ್ಷಿಕ ಶೇ. 10.45ರಿಂದ ಶೇ.11.5ರ ವರೆಗಿನ ಬಡ್ಡಿದರದಲ್ಲಿ ಒಂದು ಲಕ್ಷ ರೂ.ಗಳಿಂದ 25 ಲಕ್ಷ ರೂ.ಗಳ ವರೆಗೆ ಮೈಕ್ರೋ ಸಾಲ ಸಿಗಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next