Advertisement

ಅಮೆಜಾನ್‌ ಹೊಸ ವ್ಯವಸ್ಥೆ

09:30 AM Jun 16, 2018 | Karthik A |

ಹೊಸದಿಲ್ಲಿ: ಪ್ರಮುಖ ಇ-ಕಾಮರ್ಸ್‌ ತಾಣ ಅಮೆಜಾನ್‌ ಧ್ವನಿ ಮೂಲಕ ಪಾವತಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಬೆಂಗಳೂರು ಮೂಲದ ಟೋನ್‌ ಟ್ಯಾಗ್‌ ಎಂಬ ಸ್ಟಾರ್ಟ್‌ ಅಪ್‌ ಗೆ 32.3 ಕೋಟಿ ರೂ. ಹೂಡಿಕೆ ಮಾಡಿದೆ. ಮೊಬೈಲ್‌ ಫೋನ್‌ಗಳು, ಕಾರ್ಡ್‌ Swipek ಮಶಿನ್‌ ಗಳಲ್ಲಿ ಧ್ವನಿ ಆಧರಿತ ವಹಿವಾಟು ನಡೆಸುವ ವಿನೂತನ ಪಾವತಿ ಸೌಲಭ್ಯವನ್ನು ಅಭಿವೃದ್ಧಿಪಡಿಸಿದೆ. 3 ತಿಂಗಳಲ್ಲಿ ಈ ಪಾವತಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಅಮೆಜಾನ್‌ ಯೋಜನೆ ರೂಪಿಸಿದೆ. ಸದ್ಯ ಫ್ಯಾಬ್‌ ಇಂಡಿಯಾ ಮತ್ತು ಶೆಲ್‌ ಕಂಪೆನಿಗಳ 3 ಲಕ್ಷಕ್ಕೂ ಹೆಚ್ಚು  ಸ್ಥಳಗಳಲ್ಲಿ ಪಾವತಿ ವ್ಯವಸ್ಥೆಯನ್ನು ಟೋನ್‌ ಟ್ಯಾಗ್‌ ಒದಗಿಸುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next