ಬೆಂಗಳೂರು: ‘ಆರೋಗ್ಯಕರ ಮತ್ತು ಫಿಟ್ ಇಂಡಿಯಾ’ವನ್ನು ಪ್ರಚುರಪಡಿಸುವ ಭಾರತ ಸರ್ಕಾರದ ಧ್ಯೇಯಕ್ಕೆ ಅನುಗುಣವಾಗಿ, ಅಮೆಜಾನ್ ಇಂಡಿಯಾ ಯೋಗ ಸ್ಟೋರ್ ತೆರೆದಿದೆ.
ಸಾವಿರಾರು ಸೆಲ್ಲರ್ ಗಳು ಮತ್ತು 10 ಸಾವಿರಕ್ಕೂ ಹೆಚ್ಚು ವಿಭಿನ್ನ ಉತ್ಪನ್ನಗಳನ್ನು ಅಮೆಜಾನ್ ಯೋಗ ಸ್ಟೋರ್ ಒಳಗೊಂಡಿದೆ. ಇದರಲ್ಲಿ, ಯೋಗ ಮ್ಯಾಟ್‌ಗಳು, ಬ್ಲಾಕ್‌ಗಳು, ಯೋಗ ವೀಲ್, ಅಕ್ಸೆಸರಿಗಳು ಮತ್ತು ಇತರ ಸಾಮಗ್ರಿಗಳನ್ನು ಅಗ್ರ ಬ್ರ್ಯಾಂಡ್‌ಗಳಿಂದ ಉತ್ತಮ ಡೀಲ್ ನಲ್ಲಿ ಖರೀದಿ ಮಾಡಬಹುದು. ಏರಿಯಲ್ ಯೋಗ, ಐಯಂಗಾರ್ ಯೋಗ ಉತ್ಪನ್ನಗಳು, ಮಕ್ಕಳಿಗೆ ಯೋಗ ಮ್ಯಾಟ್‌ಗಳು, ಟ್ರಾವೆಲ್ ಯೋಗ ಮ್ಯಾಟ್ ಗಳು ಹಾಗೂ ಇತರೆ ಉಪ ವಿಭಾಗಗಳಲ್ಲೂ ತನ್ನ ಕೊಡುಗೆಗಳನ್ನು ಅಮೆಜಾನ್ ಇಂಡಿಯಾ ಒದಗಿಸುತ್ತಿದೆ.
ಇದರಲ್ಲಿ ಭಾರತೀಯ ಮಾರಾಟಗಾರರು ಗ್ರಾಹಕರಿಗಾಗಿ ಯೋಗ ಉತ್ಪನ್ನಗಳನ್ನು ಮಾರಾಟ ಮಾಡಲಿದ್ದಾರೆ. ಭಾರತ ಸರ್ಕಾರದ ಆಯುಷ್ ಮತ್ತು ಬಂದರು, ಶಿಪ್ಪಿಂಗ್ ಮತ್ತು ಜಲಸಾರಿಗೆ ಸಚಿವ ಸರಬಾನಂದ ಸೋನೋವಾಲ ಅಧಿಕೃತವಾಗಿ ಸ್ಟೋರ್ ಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಯೋಗ ಅತ್ಯಂತ ಪುರಾತನ ಅಭ್ಯಾಸವಾಗಿದ್ದು, ಇದು ಸಮಗ್ರ ಆರೋಗ್ಯವನ್ನು ಪ್ರೋತ್ಸಾಹಿಸುತ್ತದೆ ಮತ್ತು ಒಟ್ಟಾರೆ ಜೀವನ ಮಟ್ಟವನ್ನು ಸುಧಾರಿಸುತ್ತದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ‘ಆರೋಗ್ಯಕರ ಮತ್ತು ಫಿಟ್ ಇಂಡಿಯಾ’ ಧ್ಯೇಯಕ್ಕೆ ಅನುಗುಣವಾಗಿ ಯೋಗ ಸ್ಟೋರ್ ಅನ್ನು ಉದ್ಘಾಟಿಸುತ್ತಿರುವುದಕ್ಕೆ ಅಮೆಜಾನ್ ಇಂಡಿಯಾಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಮಹತ್ವದ ಕೊಡುಗೆ ಇದಾಗಿದೆ ಎಂದರು.
ಅಮೆಜಾನ್ ಇಂಡಿಯಾದ ಕನ್ಸ್ಯೂಮರ್ ಬ್ಯುಸಿನೆಸ್‌ನ ಉಪಾಧ್ಯಕ್ಷ ಮತ್ತು ಕಂಟ್ರಿ ಮ್ಯಾನೇಜರ್ ಮನೀಶ್ ತಿವಾರಿ ಮಾತನಾಡಿ ಉನ್ನತ ಗುಣಮಟ್ಟದ ಯೋಗ ಉತ್ಪನ್ನಗಳು, ಸಲಕರಣೆಗಳು ಮತ್ತು ಸಂಪನ್ಮೂಲಗಳನ್ನು ನಮ್ಮ ಗ್ರಾಹಕರಿಗೆ ನೀಡುವ ನಿಟ್ಟಿನಲ್ಲಿ ಮತ್ತು ಅವರ ದೈಹಿಕ, ಮಾನಸಿಕ ಮತ್ತು ಅಧ್ಯಾತ್ಮಕ ಯೋಗಕ್ಷೇಮಕ್ಕೆ ಬೆಂಬಲ ನೀಡುವುದಕ್ಕಾಗಿ ಇದು ನಮ್ಮ ಪ್ರಯತ್ನವಾಗಿದೆ ಎಂದರು.