– 2,500 ಕ್ಕಿಂತಲೂ ಹೆಚ್ಚು ಶುಚಿಯಾದ, ಸರ್ಟಿಫೈಡ್ ರೆಸ್ಟೋರೆಂಟ್‌ಗಳು ಮತ್ತು ಕ್ಲೌಡ್ ಕಿಚನ್‌ಗಳಿಂದ
ತಿಂಡಿ-ತಿನಿಸುಗಳನ್ನು ಆರ್ಡರ್ ಮಾಡಬಹುದಾಗಿದೆ
ಬೆಂಗಳೂರು: ಅಮೆಜಾನ್ ಇಂಡಿಯಾ ತನ್ನ ಆಹಾರ ಡೆಲಿವರಿ ಸೇವೆಯಾಗಿರುವ ಅಮೆಜಾನ್ ಫುಡ್ಡನ್ನು ನಗರದಾದ್ಯಂತ ಪ್ರಾರಂಭಿಸಿದೆ. ಇನ್ನು ಮುಂದೆ ವೈಟ್‌ಫೀಲ್ಡ್, ಎಚ್‌ಎಸ್‌ಆರ್, ಸರ್ಜಾಪುರ, ಕೋರಮಂಗಲ, ಇಂದಿರಾನಗರ, ಎಮ್‌ಜಿ ರಸ್ತೆ, ಜಯನಗರ, ಜೆಪಿ ನಗರ, ಫ್ರೇಜರ್ ಟೌನ್, ಮಲ್ಲೇಶ್ವರಂ, ರಾಜಾಜಿ ನಗರ, ವಿಜಯನಗರ ಸೇರಿದಂತೆ ನಗರದಾದ್ಯಂತ 62 ಪಿನ್-ಕೋಡ್ ಪ್ರದೇಶಗಳಲ್ಲಿ ಅಮೆಜಾನ್ ಫುಡ್ ಲಭ್ಯವಿರುತ್ತದೆ. ಗ್ರಾಹಕರು ಅತ್ಯಂತ ಪ್ರಖ್ಯಾತ ಹಾಗೂ ಶುಚಿಯಾಗಿದೆ ಎಂದು ಸರ್ಟಿಫೈಡ್ ಹೊಂದಿರುವ ರೆಸ್ಟೋರೆಂಟ್‌ಗಳು ಮತ್ತು ಕ್ಲೌಡ್ ಕಿಚನ್‌ಗಳಿಂದ ತಮಗಿಷ್ಟವಾಗಿರುವ ತಿಂಡಿ-ತಿನಿಸುಗಳನ್ನು ಆರ್ಡರ್ ಮಾಡಿ ಹೋಮ್ ಡೆಲಿವರಿ ಪಡೆಯಬಹುದಾಗಿದೆ.
ಪ್ರೈಮ್ ಸದಸ್ಯರು ತಮ್ಮ ಎಲ್ಲಾ ಆರ್ಡರ್‌ಗಳನ್ನು ಉಚಿತ ಡೆಲಿವರಿ ಪಡೆಯಬಹುದಾಗಿದೆ, ಇತರ ಗ್ರಾಹಕರು ಅಮೆಜಾನ್ ಫುಡ್‌ಗೆ ಆರ್ಡರ್ ಮಾಡಿದಾಗ ಕನಿಷ್ಠ ಡೆಲಿವರಿ ಶುಲ್ಕ ರೂ 19 ಪಾವತಿ ಮಾಡಬೇಕಾಗುತ್ತದೆ. ಆದರೆ, ಸೀಮಿತ ಅವಧಿಯ ಅಂಗವಾಗಿ, ಎಲ್ಲಾ ಗ್ರಾಹಕರಿಗೂ ಪ್ಯಾಕೇಜಿಂಗ್ ಶುಲ್ಕ ಮನ್ನಾ ಮಾಡಲಾಗಿದೆ. ಗ್ರಾಹಕರು ರೆಸ್ಟೋರೆಂಟ್‌ಗಳಿಂದ ಆಕರ್ಷಕ ಕೊಡುಗೆಗಳು ಮತ್ತು ಅಮೆಜಾನ್ ಪೇ ಕ್ಯಾಶ್‌ಬ್ಯಾಕ್‌ಗಳನ್ನು ಪಡೆಯಬಹುದಾಗಿದೆ.
ಬೆಂಗಳೂರಿನಲ್ಲಿರುವ ಗ್ರಾಹಕರು ಕಟ್ಟುನಿಟ್ಟಾದ ಸುರಕ್ಷಾ ಪದ್ಧತಿಗಳನ್ನು ಪಾಲಿಸುತ್ತಿರುವ 2500 ಕ್ಕೂ ಹೆಚ್ಚು ರೆಸ್ಟೋರೆಂಟ್‌ಗಳು ಮತ್ತು ಕ್ಲೌಡ್ ಕಿಚನ್‌ಗಳಿಂದ ಇಂಡಿಯನ್, ಚೈನೀಸ್, ಇಟಾಲಿಯನ್, ಬಿರಿಯಾನಿ, ಬರ್ಗರ್‌ಗಳು ಮತ್ತು ಡೆಸ್ಸರ್ಟ್ಸ್ ಎಂಬಂತೆ ವಿಭಿನ್ನ ಪ್ರಕಾರದ ತಿಂಡಿ-ತಿನಿಸುಗಳನ್ನು ಆರ್ಡರ್ ಮಾಡಬಹುದಾಗಿದೆ. ಅಮೆಜಾನ್ ಫುಡ್ ಪ್ರತಿದಿನ ಬೆಳಿಗ್ಗೆ 7 ರಿಂದ ರಾತ್ರಿ 11 ಗಂಟೆ ವರೆಗೆ ಆರ್ಡರ್ ತೆಗೆದುಕೊಳ್ಳುತ್ತದೆ.
Related Articles
ಇದನ್ನೂ ಓದಿ :ಆರೋಗ್ಯ ಟಿಪ್ಸ್: ಅಜೀರ್ಣ ಸಮಸ್ಯೆ ಮತ್ತು ಪರಿಹಾರ
ಅಮೆಜಾನ್ ಇಂಡಿಯಾದ ಕೆಟಾಗರಿ ಮ್ಯಾನೇಜ್‌ಮೆಂಟ್ ನಿರ್ದೇಶಕ – ಸಮೀರ್ ಕ್ಷೇತ್ರಪಾಲ್ ಅವರು ಹೀಗೆ ಹೇಳಿದ್ದಾರೆ, “ವಿಭಿನ್ನ ವರ್ಗದಲ್ಲಿ ಅಗತ್ಯ ವಸ್ತುಗಳ ಶಾಪಿಂಗ್‌ಗಾಗಿ ಗ್ರಾಹಕರು ಅಮೆಜಾನ್ ಮೇಲೆ ಸಂಪೂರ್ಣ ಭರವಸೆ ಇಟ್ಟಿದ್ದಾರೆ. ಬೆಂಗಳೂರಿನಲ್ಲಿ ಅಮೆಜಾನ್ ಫುಡ್ ಸೇವೆ ಪ್ರಾರಂಭಿಸುವುದರ ಜೊತೆಗೆ, ನಾವು ಮುಂದೆಯೂ ಕೂಡಾ ಗ್ರಾಹಕರಿಗೆ ಸರಿಸಾಟಿಯಿಲ್ಲದ ಅನುಕೂಲತೆ ಮತ್ತು ಮೌಲ್ಯವನ್ನು ಒದಗಿಸಲಿದ್ದೇವೆ ಮತ್ತು ಗ್ರಾಹಕರ ಪ್ರತಿನಿತ್ಯ ಜೀವನದ ಭಾಗವಾಗಲಿದ್ದೇವೆ. ಅಮೆಜಾನ್ ಫುಡ್ಸ್ ರಾಷ್ಟ್ರೀಯ ಔಟ್‌ಲೆಟ್‌ಗಳು ಮತ್ತು ಸ್ಥಳೀಯ ಫೇವರೇಟ್‌ಗಳು ಸೇರಿದಂತೆ ನಗರದ ಟಾಪ್ ರೆಸ್ಟೋರೆಂಟ್‌ಗಳಿಂದ ಅತ್ಯುತ್ತಮ ಮತ್ತು ಅತ್ಯಂತ ರುಚಿಕರ ಆಹಾರಗಳನ್ನು ಜನರಿಗೆ ಅತ್ಯುತ್ತಮ ಸುರಕ್ಷಾ ಪದ್ಧತಿಗಳು ಮತ್ತು ಕಟ್ಟುನಿಟ್ಟಾದ ಡೆಲಿವರಿ ಮೂಲಕ ಒದಗಿಸಲಿದೆ.”
ಬರ್ಗರ್ ಕಿಂಗ್, ಟ್ಯಾಕೋ ಬೆಲ್ಸ್, ಸಬ್‌ವೇ, ಬೆಹ್ರೋಜ್ ಬಿರಿಯಾನಿ, ಫಾವೋಸೋಸ್, ಚಾಯ್ ಪಾಯಿಂಟ್, ಫ್ರೆಶ್‌ಮೆನು, ಮೋಜೋ ಪಿಜ್ಜಾ, ಪಂಜಾಬ್ ಗ್ರಿಲ್, ಬಾಕ್ಸ್ 8 ಸೇರಿದಂತೆ ಕೆಲವೊಂದು ಟಾಪ್ ಬ್ರಾಂಡ್‌ಗಳು ಹಾಗೂ ಅಡಿಗಾಸ್, ಅಂಪೈರ್, A2B, ಆನಂದ್ ಸ್ವೀಟ್ಸ್, ಕಣ್ಣನ್ ಕೆಫೆ, ಟೋಸ್ಕಾನೋ, ಟೋಯಿಟ್, ಬರ್ಮಾ ಬರ್ಮಾ, ಮಮಗೋಟೋ, ಬ್ರಿಕ್ ಓವನ್, ಗಿಲ್ಲೀಸ್, ಬಿಗ್ ಪಿಕ್ಚರ್, ಕಪೂರ್ಸ್ ಕೆಫೆ, ಚಿನಿತಾ, ವಿಂಡ್‌ಮಿಲ್ಸ್ ಕ್ರಾಫ್ಟ್‌ವರ್ಕ್ಸ್, ಪೋಲಾರ್ ಬಿಯರ್ ಮತ್ತು ಇನ್ನಷ್ಟು ಎಂಬಂತೆ ಕೆಲವೊಂದು ಸ್ಥಳೀಯ ರೆಸ್ಟೋರೆಂಟ್‌ಗಳು ಅಮೆಜಾನ್ ಫುಡ್‌ನಲ್ಲಿ ಸೇರಿಕೊಂಡಿದೆ.
ಅಮೆಜಾನ್ ಫುಡ್‌ಅನ್ನುಆಪ್‌ನಲ್ಲಿ ಪಡೆಯಬಹುದಾಗಿದೆ ಹಾಗೂ ಬಾರ್ ವರ್ಗದಲ್ಲಿ “ಫುಡ್” ಐಕಾನ್ ಕ್ಲಿಕ್ ಮಾಡುತ್ತಾ ಅಥವಾ “ಅಮೆಜಾನ್ ಫುಡ್” ಸರ್ಚ್ ಮಾಡುತ್ತಾ ಅಥವಾ “ಶಾಪ್ ಬೈ ಕೆಟಗರಿ” ಯಲ್ಲಿ “ಅಮೆಜಾನ್ ಫುಡ್” ಸೆಲೆಕ್ಟ್ ಮಾಡುತ್ತಾ ಅಮೆಜಾನ್ ಫುಡ್‌ಗೆ ಪ್ರವೇಶ ಪಡೆಯಬಹುದಾಗಿದೆ.