Advertisement

ಬಾಹ್ಯಾಕಾಶಕ್ಕೆ ಜಿಗಿಯಲಿದ್ದಾರೆ ಅಮೆಜಾನ್ ಸಂಸ್ಥಾಪಕ  ಜೆಫ್‌ ಬೇಜೋಸ್‌

05:23 PM Jun 09, 2021 | Team Udayavani |

ವಾಷಿಂಗ್ಟನ್ : ಅಮೆಜಾನ್ ಸಂಸ್ಥಾಪಕ ಹಾಗೂ ಸಿಇಒ ಜೆಫ್‌ ಬೇಜೋಸ್‌ ಜುಲೈ 20 ರಂದು ತನ್ನ ಬಹುದಿನಗಳ ಕನಸನ್ನು ಸಾಕಾರಗೊಳಿಸಿಕೊಳ್ಳುವ ತವಕದಲ್ಲಿದ್ದಾರೆ.

Advertisement

ಹೌದು, ಜಗತ್ತಿನ ಶ್ರೀಮಂತ ವ್ಯಕ್ತಿ ಜೆಫ್‌ ಬೇಜೋಸ್‌ ಬಾಹ್ಯಾಕಾಶ ಪರಿಶೋಧಾನಾ ಕಂಪನಿಯಾದ ಬ್ಲೂ ಒರಿಜಿನ್‌ ನ ಮೊದಲ ಮಾನವ ಬಾಹ್ಯಾಕಾಶ ಹಾರಾಟದ ಮಿಷನ್‌ ನಲ್ಲಿ ಬಾಹ್ಯಾಕಾಶಕ್ಕೆ ನೆಗೆಯಲಿದ್ದಾರೆ.

ಇದನ್ನೂ ಓದಿ : ಬಿಜೆಪಿ ಸರ್ಕಾರದ ಪೆಟ್ರೋಲ್ ಪಿಕ್ ಪಾಕೆಟ್ ಖಂಡಿಸಿ ‘100 ನಾಟೌಟ್’ ಆಂದೋಲನ: ಡಿ.ಕೆ ಶಿವಕುಮಾರ್

ಈಗಾಗಲೇ ಬಾಹ್ಯಾಕಾಶ ಪರಿಶೋಧಾನಾ ಕಂಪನಿಯಾದ ಬ್ಲೂ ಒರಿಜಿನ್‌ ನ ಮೊದಲ ಮಾನವ ಬಾಹ್ಯಾಕಾಶ ಹಾರಾಟದ ಮಿಷನ್‌ ನಲ್ಲಿ ಜೆಫ್‌ ಬೇಜೋಸ್ ಕೂಡ ಬುಕ್ ಮಾಡಿದ್ದು, ಜುಲೈ 20ರಂದು ಬಾಹ್ಯಾಕಾಶಕ್ಕೆ ಲಗ್ಗೆ ಇಡಲಿದ್ದಾರೆ.

ಈ ಬಗ್ಗೆ ತಮ್ಮ ಅಧಿಕೃತ ಇನ್‌ ಸ್ಟಾಗ್ರಾಮ್‌  ಖಾತೆಯ ಮೂಲಕ  ಪ್ರತಿಕ್ರಿಯಿಸಿದ ಜೆಫ್‌ ಬೇಜೋಸ್,  ಐದು ವರ್ಷದವನಾಗಿದ್ದಾಗಿನಿಂದ, ಬಾಹ್ಯಾಕಾಶಕ್ಕೆ ಪ್ರಯಾಣಿಸುವ ಕನಸು ಹೊಂದಿದ್ದೆ. ಜುಲೈ 20 ರಂದು ನಾನು ನನ್ನ ಸಹೋದರನೊಂದಿಗೆ ಆ ಪ್ರಯಾಣವನ್ನು ಮಾಡಲಿದ್ದೇನೆ” ಎಂದು  ತಿಳಿಸಿದ್ದಾರೆ.

Advertisement

ಜುಲೈ 20 ಅಪೊಲೊ 11 ನೌಕೆಯು ಚಂದ್ರನ ಮೇಲೆ ಲ್ಯಾಂಡ್ ಆದ ವಾರ್ಷಿಕೋತ್ಸವದ ದಿನದಂದು, ಈ ಪ್ರವಾಸವನ್ನು ನಿಗದಿ ಮಾಡಲಾಗಿದ್ದು, ಇದೇ ದಿನ ಟೆಕ್ಸಾಸ್‌ನಿಂದ ಬಾಹ್ಯಾಕಾಶಕ್ಕೆ ನೌಕೆ ಉಡಾವಣೆ ಆಗಲಿದೆ.

ನ್ಯೂ ಶೆಪರ್ಡ್ ವಾಹನದಲ್ಲಿ ಬಾಹ್ಯಾಕಾಶಕ್ಕೆ ಹೋಗಲು ಸೀಟ್ ಗಾಗಿ ನಡೆಯುತ್ತಿರುವ ಹರಾಜು ಶನಿವಾರ ಕೊನೆಗೊಳ್ಳಲಿದೆ. ಇದೀಗ ಬಿಡ್ಡಿಂಗ್ ಮೊತ್ತ 2.8 ಮಿಲಿಯನ್ ಡಾಲರ್‌  ಗಳಷ್ಟಿದೆ. 143 ದೇಶಗಳಿಂದ ಸುಮಾರು 6,000 ಜನರು ಇದರಲ್ಲಿ ಭಾಗಿಯಾಗಿದ್ದಾರೆ.

ಇನ್ನು,  ಈಗಾಗಲೇ ತಿಳಿಸಿರುವಂತೆ ಜೆಫ್ ಬೇಜೋಸ್ ಜುಲೈ 5ರಂದು ಅಮೆಜಾನ್ ಸಿಇಒ ಸ್ಥಾನದಿಂದ ಹೊರಬರಲಿದ್ದು, ಕಂಪನಿಯ ಜವಾಬ್ದಾರಿಯನ್ನು ತನ್ನ ಉತ್ತರಾಧಿಕಾರಿ ಆ್ಯಂಡಿ ಜಾಸ್ಸಿಗೆ ಹಸ್ತಾಂತರಿಸಲಿದ್ದಾರೆ.

ಇದನ್ನೂ ಓದಿ : ನಮ್ಮದು ಮದುವೆಯೇ ಆಗಿಲ್ಲ: ಗಂಡನಿಗೆ ಶಾಕ್‌ ಕೊಟ್ಟ ನಟಿ-ಸಂಸದೆ ನುಸ್ರತ್!

Advertisement

Udayavani is now on Telegram. Click here to join our channel and stay updated with the latest news.

Next