ಅಮೇಜ್ಫಿಟ್ ಸಂಸ್ಥೆಯು ಟಿ-ರೆಕ್ಸ್2 ಸ್ಮಾರ್ಟ್ವಾಚ್ನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ವಾಚ್ 1.39 ಇಂಚಿನ ವೃತ್ತಾಕಾರದ ಡಿಸ್ಪ್ಲೇ ಹೊಂದಿದೆ.
150 ನ್ಪೋರ್ಟ್ಮೋಡ್ಗಳು ಇದರಲ್ಲಿವೆ. ವಿಶೇಷವಾಗಿ ಸಂಸ್ಥೆಯು 500ಎಂಎಎಚ್ ಬ್ಯಾಟರಿ ಸಾಮರ್ಥ್ಯವನ್ನು ಇದರಲ್ಲಿ ಅಳವಡಿಸಿದೆ.
ಇದರಿಂದಾಗಿ ಸ್ಮಾರ್ಟ್ವಾಚ್ ಒಮ್ಮೆ ಚಾರ್ಜ್ ಮಾಡಿದರೆ ಬರೋಬ್ಬರಿ 24 ದಿನಗಳ ಕಾಲ ನಿರ್ವಹಿಸಬಲ್ಲದು ಮತ್ತು ಪವರ್ ಸೇವಿಂಗ್ ಮೋಡ್ನಲ್ಲಿ 45 ದಿನ ಕಾರ್ಯ ನಿರ್ವಹಿಸಬಲ್ಲದು ಎಂದು ಸಂಸ್ಥೆ ಹೇಳಿಕೊಂಡಿದೆ.
ಹಾರ್ಟ್ ರೇಟ್ ಸೆನ್ಸಾರ್, ಬ್ಲಿಡ್ ಆಕ್ಸಿಜನ್ ಲೆಕ್ಕಾಚಾರದಿಂದ ಹಿಡಿದು ಎಲ್ಲ ರೀತಿಯ ಟ್ರ್ಯಾಕಿಂಗ್ ಮಾಡುವ ಸಾಮರ್ಥ್ಯ ಇದಕ್ಕಿದೆ. ವಿಶೇಷವಾಗಿ ಮಿಲಿಟರಿ ಗ್ರೇಡ್ನಲ್ಲಿ ಇರುವ ಈ ಸ್ಮಾರ್ಟ್ವಾಚ್ ಬೆಲೆ 15,999 ರೂ.