Advertisement

ಅಮವಾಸೆಯಲ್ಲೊಂದು ಹಾಡು

03:50 AM Apr 14, 2017 | |

“ಅಮವಾಸೆ …’ ಇದು ಕತ್ತಲ ಅಮವಾಸೆ ಅಲ್ಲ. ಬದಲಾಗಿ ನಾಲ್ವರ ಹುಡುಗರ ಮೊದಲ ಅಕ್ಷರ ಸೇರಿಸಿ ಇಟ್ಟಿರುವ ಶೀರ್ಷಿಕೆ..’

Advertisement

ಹೀಗೆ ಹೇಳುವ ಮೂಲಕ ಮೊದಲೇ ಸ್ಪಷ್ಟಪಡಿಸಿದರು ನಿರ್ದೇಶಕ ಪ್ರಶಾಂತ್‌. “ಅಮರ್‌, ಮಹೇಶ್‌, ವಾಸು ಮತ್ತು ಸೇಂದಿ’ ಈ ನಾಲ್ವರು ಹುಡುಗರು ಸಿನಿಮಾದ ಹೈಲೆಟ್‌. ಹಾಗಂತ ಇದು ಹಾರರ್‌ ಸಿನಿಮಾ ಅಲ್ಲ. ಎಲ್ಲೋ ಒಂದು ಕಡೆ ಆ ನಿಟ್ಟಿನಲ್ಲಿ ಜಾಡು ಹಿಡಿಯೋ ಕಥೆ. ಒಂದು ಗ್ಯಾರೇಜ್‌ನಲ್ಲಿ ಕೆಲಸ ಮಾಡುವ ನಾಲ್ವರು ಹುಡುಗರ ಲೈಫ‌ಲ್ಲಿ ಏನೆಲ್ಲಾ ನಡೆಯುತ್ತೆ ಎಂಬುದೇ ಒನ್‌ಲೈನ್‌ ಅಂತ ಹೇಳುತ್ತಾ ಹೋದರು ಪ್ರಶಾಂತ್‌. ನಿರ್ದೇಶಕರಿಗೆ ಇದು ಮೊದಲ ಸಿನಿಮಾ. ಈ ಹಿಂದೆ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದರಂತೆ. ಆಗ ಹುಟ್ಟಿಕೊಂಡ ಒಂದು ಕಥೆಯನ್ನೇ ಹಿಡಿದು ಸಿನಿಮಾ ಮಾಡಿದ್ದಾರೆ ಪ್ರಶಾಂತ್‌. ಚಿತ್ರ ಮುಗಿಸಿದ ಖುಷಿಯಲ್ಲಿರುವ ಚಿತ್ರತಂಡ, ಆಡಿಯೋ ಸಿಡಿ ಬಿಡುಗಡೆ ಸಂಭ್ರಮಕ್ಕೆ ಅಂದು ಸಾಕ್ಷಿಯಾಯಿತು. 

ಅಂದಿನ ಹೈಲೆಟ್‌ ಅಣಜಿ ನಾಗರಾಜ್‌. ಅವರು “ವಿ ಆಡಿಯೋ ಆ್ಯಂಡ್‌ ವೀಡಿಯೋ’ ಎಂಬ ಹೊಸ ಸಂಸ್ಥೆ ಹುಟ್ಟುಹಾಕಿ, ಆ ಮೂಲಕ “ಅಮವಾಸೆ’ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಮಾಡಿದರು. ಡಾ. ದೊಡ್ಡರಂಗೇಗೌಡರು ಇದಕ್ಕೆ ಕೈ ಜೋಡಿಸಿ “ಅಮವಾಸೆ’ ತಂಡಕ್ಕೆ ಶುಭಹಾರೈಸಿದರು.

ಇನ್ನು, ನಿರ್ಮಾಣಕ್ಕೆ ಕೈ ಹಾಕಿರೋದು ಡಾ.ಚಂದ್ರಶೇಖರ್‌. ಅವರಿಗೆ ಇದು ಮೊದಲ ಚಿತ್ರ. “ನನಗೆ ಸಿನಿಮಾ ಗೊತ್ತಿಲ್ಲ. ಗೆಳೆಯ ಜಗದೀಶ್‌ ಮತ್ತು ನಾನು ಸೇರಿ ಈ ಚಿತ್ರ ಮಾಡಿದ್ದೇವೆ. ಯುವ ಪ್ರತಿಭೆಗಳಲ್ಲಿ ಹೊಸತನ ಇದೆ ಎಂದು ತಿಳಿದು, ಅವರಿಗೆ ವೇದಿಕೆ ಕಲ್ಪಿಸಿದ್ದೇವೆ. ಚಿತ್ರದ ಕಥೆ, ಹಾಡು, ಎಲ್ಲವೂ ಚೆನ್ನಾಗಿದೆ. ನಮ್ಮ ಈ ಬ್ಯಾನರ್‌ನ ಉದ್ದೇಶ ಹೊಸಬರಿಗೆ ಅವಕಾಶ ಕಲ್ಪಿಸುವುದು. “ಅಮವಾಸೆ’ ಅಂದಾಕ್ಷಣ, ಎಲ್ಲರಿಗೂ ಇದು ದೆವ್ವ-ಭೂತ ಕುರಿತ ಸಿನಿಮಾ ಅಂದುಕೊಳ್ಳುವುದು ಸಹಜ. ಆದರೆ, ಇದು ಯಾವ ಬಗೆಯ ಸಿನಿಮಾ ಎಂಬುದಕ್ಕೆ ಚಿತ್ರಮಂದಿರಕ್ಕೇ ಬರಬೇಕು. ಇದು ಈಗಿನ ಯೂತ್ಸ್ಗೆ ಇಷ್ಟವಾಗುವ ಸಿನಿಮಾವಂತೂ ಹೌದು’ ಎನ್ನುತ್ತಾರೆ ನಿರ್ಮಾಪಕರು.

ಚಿತ್ರಕ್ಕೆ ಮಂಜು ಕವಿ ನಾಲ್ಕು ಹಾಡುಗಳಿಗೆ ಗೀತೆಗಳನ್ನು ಬರೆದಿದ್ದಾರೆ. ಹರಿಬಾಬು ಅವರು ಸಂಗೀತ ನೀಡಿದ್ದಾರೆ. ಚಿತ್ರದ ನಾಯಕ ರಾಜೀವ್‌ ಬಂದಿರಲಿಲ್ಲ. ನಾಯಕಿಯೂ ಗೈರು ಹಾಜರಿಯಲ್ಲಿದ್ದರು. ವಿನಯ್‌, ವಾಸು, ಲೋಕಿ, ಅಭಯ್‌, ರಾಘು ಇವರೆಲ್ಲರಿಗೂ ಇದು ಮೊದಲ ಅನುಭವ. ಬಿಳಿಕೆರೆ ಮಂಜು ಎಂಬ ಮೈಸೂರು ಹುಡುಗನಿಗೆ ಇಲ್ಲಿ ಖಳನಟನ ಪಾತ್ರ ಸಿಕ್ಕಿದೆಯಂತೆ. ಇನ್ನು, ಮೈಸೂರು ರಾಜು ಸಿನಿಮಾದಲ್ಲಿರುವ ನಾಲ್ಕು ಹಾಡುಗಳಿಗೂ ನೃತ್ಯ ಸಂಯೋಜನೆ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next