Advertisement

6,162 ಯಾತ್ರಿಕರ ಹೊಸ ತಂಡದ ಅಮರನಾಥ ಯಾತ್ರೆ ಪುನರಾರಂಭ

12:32 PM Jul 09, 2018 | Team Udayavani |

ಜಮ್ಮು : ಜಮ್ಮು ವಿನಿಂದ  6,162 ಯಾತ್ರಿಗಳನ್ನು ಒಳಗೊಂಡ ಹೊಸ ತಂಡದ ಅಮರನಾಥ ಯಾತ್ರೆ ಇಂದು ಸೋಮವಾರ ಪುನರಾರಂಭಗೊಂಡಿತು. 

Advertisement

ಹಿಜ್‌ಬುಲ್‌ ಮುಜಾಹಿದೀನ್‌ ಉಗ್ರ ಬುರ್ಹಾನ್‌ ವಾನಿಯ ಹತ್ಯೆಯ ಎರಡನೇ ವರ್ಷಾಚರಣೆಯ ನಿಮಿತ್ತ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಉಂಟಾದೀತೆಂಬ ಮುನ್ನೆಚ್ಚರಿಕೆಯ ಕಾರಣಕ್ಕೆ ನಿನ್ನೆ ದಿನಪೂರ್ತಿ ಅಮರನಾಥ ಯಾತ್ರೆಯನ್ನು ತಡೆಹಿಡಿಯಲಾಗಿತ್ತು. 

ಕಳೆದ ಹಲವಾರು ದಿನಗಳಿಂದ ಬೇರೆ ಬೇರೆ ಕಾರಣಗಳಿಗಾಗಿ ನಿಲುಗಡೆಗೊಂಡಿದ್ದ ಅಮರನಾಥ ಯಾತ್ರೆ ಪುನರಾರಂಭಗೊಂಡ ಹುರುಪಿನಲ್ಲಿ ಇಂದು 6,000 ಯಾತ್ರಿಕರ ಅಮರನಾಥ ಯಾತ್ರೆ ಜಮ್ಮು ವಿನಿಂದ ಆರಂಭಗೊಂಡು ಕಾಶ್ಮೀರದತ್ತ ಸಾಗಿತು. 

6,162 ಯಾತ್ರಿಕರ ಈ ಹೊಸ ತಂಡವು 1,360 ಮಹಿಳೆಯರನು ಮತ್ತು 222 ಸಾಧುಗಳನ್ನು ಒಳಗೊಂಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next