Advertisement

ಅಮರನಾಥ ಪ್ರವಾಹದಲ್ಲಿ 15 ಮಂದಿ ಮಾತ್ರ ಸಾವು: ಮನೋಜ್‌ ಸಿನ್ಹಾ

10:01 AM Jul 15, 2022 | Team Udayavani |

ಶ್ರೀನಗರ: ಅಮರನಾಥ ದೇಗು­ಲಕ್ಕೆ ತೆರಳುವ ಬೇಸ್‌ ಕ್ಯಾಂಪ್‌ ಸಮೀಪ ಜು. 8ರಂದು ಉಂಟಾ­ಗಿದ್ದ ಹಠಾತ್‌ ಪ್ರವಾಹಕ್ಕೆ ಸಂಬಂಧಿಸಿದಂತೆ ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ಸ್ಥಗಿತಗೊಳಿಸಲಾಗಿದೆ.  ಒಟ್ಟು 15 ಮಂದಿ ಅಸುನೀಗಿದ್ದಾರೆ ಮತ್ತು ಯಾರೂ ನಾಪತ್ತೆಯಾಗಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಹೇಳಿದ್ದಾರೆ.

Advertisement

ಕೇಂದ್ರಾ­ಡಳಿತ ಪ್ರದೇಶ ನೀಡಿದ್ದ ಸಹಾಯ­ವಾಣಿಗಳಿಗೆ 200ಕ್ಕೂ ಅಧಿಕ ಕರೆಗಳು ಬಂದಿವೆ. ಕೆಲವು ಯಾತ್ರಿಕರ ವಿವರ ಪರಿಶೀಲಿಸಲಾಗಿದೆ ಮತ್ತು ಕೆಲವರ ಮೊಬೈಲ್‌ ಫೋನ್‌ ಸ್ವಿಚ್‌ ಆಫ್ ಆಗಿದ್ದುದರಿಂದ ಅವರ ಇರವು ಪತ್ತೆ ಹಚ್ಚಲು ಕಷ್ಟವಾಗಿತ್ತು  ಎಂದಿದ್ದಾರೆ.

ಘಟನೆಯಲ್ಲಿ ಒಟ್ಟು 55 ಮಂದಿ ಗಾಯಗೊಂಡಿದ್ದಾರೆ ಮತ್ತು ಈ ಪೈಕಿ ಇಬ್ಬರು ಇನ್ನೂ ಆಸ್ಪತ್ರೆಯಲ್ಲಿದ್ದಾರೆ. ಉಳಿದವರನ್ನು ಡಿಸ್ಚಾರ್ಜ್‌ ಮಾಡಲಾಗಿದೆ. ಅಸುನೀಗಿದ 14 ಮಂದಿಯ ಮೃತದೇಹಗಳನ್ನು ಅವರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ ಎಂದಿದ್ದಾರೆ.

ಯಾತ್ರೆ ರದ್ದು: ಈ ನಡುವೆ ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ಗುರು­ವಾರ ಪಹಲ್‌ಗಾಂವ್‌ ಮತ್ತು ಬಲ್ತಾಲ್‌ ಮೂಲಕ ತೆರಳುವ ಯಾತ್ರೆ ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ. ಇನ್ನೊಂದೆಡೆ 2 ಪ್ರತ್ಯೇಕ ಘಟನೆಗಳಲ್ಲಿ ಯಾತ್ರೆಗೆ ತೆರಳಿದ್ದ ವಾಹನಗಳು ಅಪಘಾತ­ಕ್ಕೀಡಾಗಿ 13 ಮಂದಿ ಗಾಯಗೊಂಡಿದ್ದಾರೆ, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next