Advertisement

ಅಮರನಾಥ ಮೇಘಸ್ಫೋಟಕ್ಕೆ 15 ಸಾವು: 40ಕ್ಕೂ ಹೆಚ್ಚು ಮಂದಿ ಗಾಯಾಳು

01:34 AM Jul 09, 2022 | Shreeram Nayak |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪ್ರಸಿದ್ಧ ಧಾರ್ಮಿಕ ಸ್ಥಳ ಅಮರನಾಥದಲ್ಲಿ ಶುಕ್ರವಾರ ಏಕಾಏಕಿ ಮೇಘಸ್ಫೋಟ ಉಂಟಾಗಿದೆ.

Advertisement

ಇದರಿಂದಾಗಿ ಕನಿಷ್ಠ 15 ಮಂದಿ ಸಾವನ್ನಪ್ಪಿದ್ದು, 40ಕ್ಕೂ ಅಧಿಕ ಮಂದಿ ಗಾಯಾಳುಗಳಾಗಿದ್ದಾರೆ.
ಗುಡ್ಡಗಾಡು ಪ್ರದೇಶದ ಮೇಲ್ಭಾಗದಲ್ಲಿ ಭಾರೀ ಮಳೆಯಾದ ಪರಿಣಾಮ ಒಮ್ಮೆಲೆ ನೀರು ಹರಿದಿದೆ. ಸಂಜೆ 5.30ರ ಸಮಯಕ್ಕೆ ಈ ರೀತಿಯಾಗಿದ್ದಾಗಿ ವರದಿಯಾಗಿದೆ.

ಅಮರನಾಥ ಯಾತ್ರಿಗಳಿದ್ದ ಟೆಂಟ್‌ಗಳು ಹಾಗೂ ಅವರಿಗೆ ಅಡುಗೆ ಮಾಡ ಲಾಗುತ್ತಿದ್ದ ಸ್ಥಳಕ್ಕೂ ನೀರು ನುಗ್ಗಿದೆ. ಮಳೆ ಮುಂದುವರಿದಿರುವ ಹಿನ್ನೆಲೆ ಅಮರ ನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಹವಾಮಾನ ಅನುಕೂಲ ಮಾಡಿಕೊಟ್ಟ ಅನಂತರವೇ ಯಾತ್ರೆ ಪುನರಾರಂಭ ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರೀಯ ವಿಪತ್ತು ನಿರ್ವಹಣ ತಂಡ, ರಾಜ್ಯದ ವಿಪತ್ತು ನಿರ್ವಹಣ ತಂಡಗಳು ರಕ್ಷಣ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿವೆ. ಗಾಯಾಳುಗಳನ್ನು ಏರ್‌ಲಿಫ್ಟ್ ಮಾಡಿ, ಆಸ್ಪತ್ರೆಗೆ ಕಳುಹಿಸಿಕೊಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ.

Advertisement

ಐದು ದಿನ ಭಾರೀ ಮಳೆ: ಕರ್ನಾಟಕ, ತೆಲಂಗಾಣ, ಕೇರಳ, ಆಂಧ್ರ ಪ್ರದೇಶ, ಗುಜರಾತ್‌, ಮಹಾರಾಷ್ಟ್ರ, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ಒಡಿಶಾದಲ್ಲಿ ಮುಂದಿನ ಐದು ದಿನಗಳ ಕಾಲ ಗುಡುಗು ಸಹಿತ ಭಾರೀ ಮಳೆ ಯಾಗಲಿದೆ ಎಂದು ಭಾರತೀಯ ಹವಾ ಮಾನ ಇಲಾಖೆ ಶುಕ್ರವಾರ ಎಚ್ಚರಿಸಿದೆ.

ಪಂಜಾಬ್‌, ಹರಿಯಾಣ ಮತ್ತು ಚಂಡೀಗಢದಲ್ಲಿ ಮುಂದಿನ ಎರಡು ದಿನಗಳ ಕಾಲ ಹೆಚ್ಚು ಮಳೆ ಸುರಿಯಲಿದೆ ಎಂದೂ ಎಚ್ಚರಿಸಲಾಗಿದೆ.

ಹಾಗೆಯೇ ಮುಂಬಯಿ ನಗರದಲ್ಲಿ ಶನಿವಾರ ಹೆಚ್ಚಿನ ಮಳೆಯಾಗಲಿದ್ದು, ಶುಕ್ರವಾರ ರಾತ್ರಿ 10 ಗಂಟೆಯಿಂದ ಒಟ್ಟು 24 ಗಂಟೆಗಳ ಕಾಲ ರೆಡ್‌ ಅಲರ್ಟ್‌ ಘೋಷಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next