Advertisement
“ಪಂಜಾಬ್ ಕಾಂಗ್ರೆಸ್‌ನ ಬಿರುಕಿನ ಮೂಲ ವ್ಯಕ್ತಿಯಾಗಿರುವ ಸಿಧು ಅವರ “ಕಾಮಿಡಿ ಜಾಲ’ದಲ್ಲಿ ಪಂಜಾಬ್‌ನ ಹೈಕಮಾಂಡ್ ಹಾಗೂ ಪಕ್ಷದ ರಾಷ್ಟ್ರೀಯ ನಾಯಕರೆಲ್ಲರೂ ಮುಳುಗೇಳುತ್ತಿದ್ದಾರೆ. ಇತ್ತೀಚೆಗೆ, ಕಾಂಗ್ರೆಸ್‌ನ ರಾಷ್ಟ್ರೀಯ ವಕ್ತಾರ ರಣದೀಪ್ ಸುರ್ಜೇವಾಲಾ, ಪಂಜಾಬ್‌ನ 79 ಕಾಂಗ್ರೆಸ್ ಶಾಸಕರಲ್ಲಿ 78 ಶಾಸಕರು, ಹೈಕಮಾಂಡ್‌ಗೆ ಪತ್ರ ಬರೆದು ತಮ್ಮ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸಿದ್ದರು ಎಂದಿದ್ದರು. ಆದರೆ ಅದೇ ದಿನ ನಡೆದ ಮತ್ತೊಂದು ಸುದ್ದಿಗೋಷ್ಠಿಯಲ್ಲಿ ಪಂಜಾ ಬ್‌ನ ಉಸ್ತುವಾರಿ ಹೊತ್ತಿರುವ ಹರೀಶ್ ರಾವತ್, 43 ಶಾಸಕರು ನನ್ನ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸಿದ್ದರು ಎಂದಿದ್ದಾರೆ. ಮುಂದಿನ ಸುದ್ದಿಗೋಷ್ಠಿಯಲ್ಲಿ 117 ಶಾಸಕರೂ ಪತ್ರ ಬರೆದು ತಮ್ಮ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸಿದ್ದರು ಎಂದು ಹೇಳಬಹುದೇನೋ’ ಎಂದು ಅಮ ರೀಂದರ್ ಹಾಸ್ಯ ಮಾಡಿದ್ದಾರೆ.
Related Articles
Advertisement
ಮೊದಲನೆಯದಾಗಿ, ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈಲ್ವೇ ಹಳಿಗಳ ಮೇಲೆ ಕುಳಿತು ಪ್ರತಿಭಟನೆ ನಡೆಸಿದ್ದ ಪಂಜಾಬ್ ರೈತರ ವಿರುದ್ಧದ ಪ್ರಕರಣಗಳನ್ನು ಕೈಬಿಡುವಂತೆ ರೈಲ್ವೇ ಸುರಕ್ಷ ಪಡೆಗೆ (ಆರ್‌ಪಿಎಫ್) ಪತ್ರದ ಮುಖೇನ ಸೂಚಿಸಿರುವುದಾಗಿ ಹೇಳಿದ್ದಾರೆ.
ರಾವತ್, ಬಘೇಲ್‌ಗೆ ಹೊಸ ಹೊಣೆಗಾರಿಕೆ?ಉತ್ತರ ಪ್ರದೇಶ ಚುನಾವಣೆಯ ಹಿರಿಯ ನಿರೀಕ್ಷಕರನ್ನಾಗಿ ಛತ್ತೀಸಗಢ ಸಿಎಂ ಭೂಪೇಶ್ ಬಘೇಲ್ ಅವರನ್ನು ನೇಮಿಸಲಾಗಿದೆ. ಅವರ ವಿರುದ್ಧ ಶಾಸಕರು ಅತೃಪ್ತಿ ವ್ಯಕ್ತಪಡಿಸಿರು ವಂತೆಯೇ ಈ ಬೆಳವಣಿಗೆ ನಡೆದಿದೆ. ಇನ್ನೊಂದೆಡೆ ಹರೀಶ್ ರಾವತ್ ಅವರ ಮೇಲಿರುವ ಪಂಜಾಬ್ ಉಸ್ತುವಾರಿ ಹೊಣೆಗಾರಿಕೆಯನ್ನು ರಾಜಸ್ಥಾನದ ಕಂದಾಯ ಸಚಿವ ಹರೀಶ್ ಚೌಧರಿ ಅವರಿಗೆ ವರ್ಗಾಯಿಸಲು ಕಾಂಗ್ರೆಸ್ ಹೈಕಮಾಂಡ್ ಚಿಂತನೆ ನಡೆಸಿದೆ.