Advertisement
ಈ ಬಗ್ಗೆ ಹೊಸದಿಲ್ಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಜ್ಯಾಧ್ಯಕ್ಷ ಜೆಪಿ ನಡ್ಡಾ ಮತ್ತು ಕ್ಯಾ| ಅಮರಿಂದರ್ ಸೋಮವಾರ ಮಾತುಕತೆ ನಡೆಸಿ, ಚುನಾವಣಾ ಕಾರ್ಯತಂತ್ರದ ಕುರಿತು ಚರ್ಚಿಸಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸುವುದಲ್ಲದೆ, ಮೂರು ಪಕ್ಷಗಳು ಸೇರಿಕೊಂಡು ಚುನಾವಣ ಪ್ರಣಾಳಿಕೆ ಸಿದ್ಧಗೊಳಿಸಿ, ಬಿಡುಗಡೆ ಮಾಡಲು ಸಭೆಯಲ್ಲಿ ಸಮ್ಮತಿ ಸೂಚಿಸಲಾಗಿದೆ ಎಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ತಿಳಿಸಿದ್ದಾರೆ.
Related Articles
ಪಂಜಾಬ್ ವಿಧಾನಸಭೆ ಚುನಾವಣೆಗೆ ಮುನ್ನವೇ ಚಂಡೀಗಢ ಮಹಾನಗರ ಪಾಲಿಕೆಗೆ ನಡೆದಿದ್ದ ಚುನಾವಣೆಯಲ್ಲಿ ಅಚ್ಚರಿಯೆಂಬಂತೆ ಆಮ್ ಆದ್ಮಿ ಪಕ್ಷ ಭರ್ಜರಿ ಗೆಲುವು ಸಾಧಿಸಿದೆ. 35 ವಾರ್ಡ್‌ಗಳ ಪೈಕಿ ಆಪ್ 14 ಸ್ಥಾನಗಳನ್ನು ಗೆದ್ದಿದೆ. ಬಿಜೆಪಿ 12, ಕಾಂಗ್ರೆಸ್ 8, ಶಿರೋಮಣಿ ಅಕಾಲಿ ದಳ 1 ಕ್ಷೇತ್ರಗಳಲ್ಲಿ ಗೆದ್ದಿವೆ. ಈ ಹಿಂದಿನ ಚುನಾವಣೆ ವೇಳೆ, 26 ವಾರ್ಡ್‌ಗಳ ಪೈಕಿ 20 ಬಿಜೆಪಿ ಪಾಲಾಗಿತ್ತು. ಈ ಗೆಲುವಿಗೆ ಹರ್ಷ ವ್ಯಕ್ತಪಡಿಸಿರುವ ದಿಲ್ಲಿ ಸಿಎಂ ಕೇಜ್ರಿವಾಲ್, “ಚಂಡೀಗಢವು ಪ್ರಾಮಾಣಿಕ ರಾಜಕೀಯವನ್ನು ಆಯ್ಕೆ ಮಾಡಿದೆ. ಪಂಜಾಬ್‌ನಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ’ ಎಂದಿದ್ದಾರೆ.
Advertisement
ಹಗಲಲ್ಲಿ ಲಕ್ಷಾಂತರ ಜನರನ್ನು ಸೇರಿಸಿ ರ್ಯಾಲಿ ಮಾಡುವುದು. ರಾತ್ರಿ ಹೊತ್ತು ಕರ್ಫ್ಯೂ ಹೇರುವುದು! ಉತ್ತರಪ್ರದೇಶದ ಸೀಮಿತ ಆರೋಗ್ಯ ಮೂಲಸೌಕರ್ಯವನ್ನು ಗಮನದಲ್ಲಿಟ್ಟುಕೊಂಡು, ನಮ್ಮ ಆದ್ಯತೆಯಿರುವುದು ಕೊರೊನಾ ನಿಯಂತ್ರಣವೇ ಅಥವಾ ಚುನಾವಣಾ ರ್ಯಾಲಿಗಳೇ ಎಂಬುದನ್ನು ಮೊದಲು ನಾವು ನಿರ್ಧರಿಸಬೇಕು.ವರುಣ್ ಗಾಂಧಿ, ಬಿಜೆಪಿ ಸಂಸದ